ಸಿಹಿಸುದ್ದಿ: ಭಾರತದ 19 ರಾಜ್ಯಗಳಲ್ಲಿ ಕೊರೊನಾದಿಂದ ಮೃತಪಟ್ಟವರೇ ಇಲ್ಲ!

ನವದೆಹಲಿ, ಫೆಬ್ರವರಿ.22: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಪತ್ತೆಗಾಗಿ ದೇಶಾದ್ಯಂತ ಶರವೇಗದಲ್ಲಿ ತಪಾಸಣೆ ನಡೆಸಲಾಗಿದೆ. ಭಾರತದಲ್ಲಿ ಈವರೆಗೂ 21 ಕೋಟಿಗೂ ಅಧಿಕ ಜನರಿಗೆ ಕೊವಿಡ್-19 ಸೋಂಕು ತಪಾಸಣೆ ನಡೆಸಲಾಗಿದ್ದು, ಈ ಪೈಕಿ ಶೇ.5.20ರಷ್ಟು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪ್ರತಿನಿತ್ಯ ಕನಿಷ್ಠ 6 ರಿಂದ 10 ಲಕ್ಷ ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 6,20,216 ಜನರನ್ನು ಕೊರೊನಾವೈರಸ್ ತಪಾಸಣೆಗೆ ಒಳಪಡಿಸಲಾಗಿದೆ.

ಭಾರತದಲ್ಲಿ ಒಟ್ಟು 2393 ಕೊರೊನಾವೈರಸ್ ಸೋಂಕು ತಪಾಸಣೆ ಪ್ರಯೋಗಾಲಯಗಳಿವೆ. ಈ ಪೈಕಿ 1220 ಸರ್ಕಾರಿ ಪ್ರಯೋಗಾಲಯಗಳಾಗಿದ್ದರೆ 1173 ಖಾಸಗಿ ಪ್ರಯೋಗಾಲಯಗಳಾಗಿವೆ. ದೇಶದಲ್ಲಿ ಇದುವರೆಗೂ 21,15,51,746 ಜನರ ಮೇಲೆ ಕೊರೊನಾವೈರಸ್ ಸೋಂಕು ತಪಾಸಣೆ ನಡೆಸಲಾಗಿದೆ. ಕೊರೊನಾವೈರಸ್ ಸೋಂಕಿನ ತಪಾಸಣೆ, ಸೋಂಕಿತರ ಸಂಖ್ಯೆ, ಗುಣಮುಖರು ಮತ್ತು ಸಾವಿನ ಸಂಖ್ಯೆ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ದೇಶದಲ್ಲಿನ 24 ಗಂಟೆಗಳಲ್ಲಿ ಕೊವಿಡ್-19 ಕೇಸ್

ದೇಶದಲ್ಲಿನ 24 ಗಂಟೆಗಳಲ್ಲಿ ಕೊವಿಡ್-19 ಕೇಸ್

ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಇತ್ತೀಚಿಗೆ ಮತ್ತಷ್ಟು ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 14,199 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,10,05,850ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 9695 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,06,99,410 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಹಾಮಾರಿಗೆ 24 ಗಂಟೆಗಳಲ್ಲಿ 83 ಜನರು ಪ್ರಾಣ ಬಿಟ್ಟಿದ್ದು, ಒಟ್ಟು 1,56,385 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ 1,50,055 ಸೋಂಕಿನ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ದೇಶದ 7 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ?

ದೇಶದ 7 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ?

ಭಾರತದ ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೊನಾವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಉತ್ತರಾಖಂಡ್, ಲಡಾಖ್, ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ದಿಯು ಮತ್ತು ದಮನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೊಸ ಪ್ರಕರಣಗಳೇ ಕಂಡು ಬಂದಿಲ್ಲ. ಕಳೆದೊಂದು ದಿನದಲ್ಲಿ ದೇಶದ 5 ರಾಜ್ಯಗಳಲ್ಲೇ ಶೇ.81 ಸೋಂಕಿತರು ಗುಣಮುಖರಾಗಿದ್ದಾರೆ. ಕೇರಳ - 4345, ಮಹಾರಾಷ್ಟ್ರ - 2417, ತಮಿಳುನಾಡು - 460, ಕರ್ನಾಟಕ - 353, ಗುಜರಾತ್ -264 ಸೋಂಕಿತರು ಗುಣಮುಖರಾಗಿದ್ದಾರೆ.

ದೇಶದ 5 ರಾಜ್ಯಗಳಲ್ಲಿ ಕೊರೊನಾವೈರಸ್ ಹೊಸ ಕೇಸ್

ದೇಶದ 5 ರಾಜ್ಯಗಳಲ್ಲಿ ಕೊರೊನಾವೈರಸ್ ಹೊಸ ಕೇಸ್

ಕೊರೊನಾವೈರಸ್ ಹೊಸ ಪ್ರಕರಣಗಳಲ್ಲಿ ಪ್ರಮುಖವಾಗಿ ಕಳೆದ 24 ಗಂಟೆಗಳಲ್ಲಿ ಈ 5 ರಾಜ್ಯಗಳಲ್ಲೇ ಅತಿ ಹೆಚ್ಚಿನ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ -6971, ಕೇರಳ - 4070, ತಮಿಳುನಾಡು -452, ಕರ್ನಾಟಕ -413, ಪಂಜಾಬ್ - 348 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

ಭಾರತದ 19 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ

ಭಾರತದ 19 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ

ಕಳೆದ 24 ಗಂಟೆಗಳಲ್ಲಿ ಭಾರತದ 19 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ಒಂದು ಕೊರೊನಾವೈರಸ್ ಸಾವಿನ ಪ್ರಕರಣಗಳು ಪತ್ತೆಯಾಗಿಲ್ಲ. ಹರಿಯಾಣ, ಆಂಧ್ರ ಪ್ರದೇಶ, ಜಮ್ಮು ಕಾಶ್ಮೀರ, ರಾಜಸ್ಥಾನ, ಒಡಿಶಾ, ಗೋವಾ, ಚಂಡೀಘರ್, ಅಸ್ಸಾಂ, ಮಣಿಪುರ್, ಸಿಕ್ಕಿಂ, ಲಕ್ಷದ್ವೀಪ, ತ್ರಿಪುರಾ, ನಾಗಾಲ್ಯಾಂಡ್, ಲಡಾಖ್, ಮೇಘಾಲಯ, ಮಿಜೋರಾಂ, ಅರುಣಾಚಲ ಪ್ರದೇಶ, ದಿಯು ಮತ್ತು ದಮನ್, ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಬ್ಬರೇ ಒಬ್ಬರು ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ.

ದೇಶದ ಒಟ್ಟು ಕೊರೊನಾವೈರಸ್ ಸಾವಿನ ಪ್ರಕರಣಗಳ ಪೈಕಿ ಶೇ.78ರಷ್ಟು ಮಂದಿ ಐದು ರಾಜ್ಯಗಳಲ್ಲೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಮಹಾರಾಷ್ಟ್ರ -35, ಕೇರಳ -15, ಪಂಜಾಬ್ -6, ಛತ್ತೀಸ್ ಗಢ - 5, ಮಧ್ಯಪ್ರದೇಶ - 4 ಮಂದಿ ಪ್ರಾಣ ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+