ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರೇ ತಿಂಗಳಿನಲ್ಲಿ ಭಾರತದಲ್ಲೇ ಸಿದ್ಧಗೊಳ್ಳಲಿದೆ ಕೊವಿಡ್-19 ಲಸಿಕೆ!

|
Google Oneindia Kannada News

ನವದೆಹಲಿ, ನವೆಂಬರ್.05: ಕೊರೊನಾವೈರಸ್ ಸೋಂಕಿಗೆ ಭಾರತೀಯ ಸಂಸ್ಥೆಯೇ ಸಂಶೋಧಿಸಿದ ಕೊವ್ಯಾಕ್ಸಿನ್ ಲಸಿಕೆಯು 2021ರ ಫೆಬ್ರವರಿಗೂ ಮೊದಲೇ ಬಿಡುಗಡೆ ಆಗಲಿದೆ ಎಂದು ಭಾರತೀಯ ವಿಜ್ಞಾನಿಗಳು ತಿಳಿಸಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆಯ ಪರಿಣಾಮ ಮತ್ತು ಸುರಕ್ಷತೆಯನ್ನು ಪರೀಕ್ಷಿಸುವ ಕೊನೆಯ ಹಂತದ ಸಂಶೋಧನಾ ಪ್ರಯೋಗಗಳನ್ನು ಇದೇ ತಿಂಗಳಿನಲ್ಲಿ ಆರಂಭಿಸಲಾಗಿತ್ತು. ಇಲ್ಲಿಂದ ಇನ್ನೊಂದು ತಿಂಗಳಿನಲ್ಲೇ ಕೊವಿಡ್-19 ಸೋಂಕಿಗೆ ಲಸಿಕೆ ಸಿದ್ಧವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೋವ್ಯಾಕ್ಸಿನ್ ಕೊವಿಡ್ ಲಸಿಕೆ ಪ್ರಾಣಿಗಳಿಗೆ ಹೆಚ್ಚು ಪರಿಣಾಮಕಾರಿಕೋವ್ಯಾಕ್ಸಿನ್ ಕೊವಿಡ್ ಲಸಿಕೆ ಪ್ರಾಣಿಗಳಿಗೆ ಹೆಚ್ಚು ಪರಿಣಾಮಕಾರಿ

ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಜೊತೆಗೆ ಕೈ ಜೋಡಿಸಿದ ಭಾರತದ ಖಾಸಗಿ ಸಂಸ್ಥೆ ಭಾರತ್ ಬಯೋಟೆಕ್ ಕಂಪನಿಯು ಕೊವ್ಯಾಕ್ಸಿನ್ ಲಸಿಕೆಯನ್ನು ಸಿದ್ಧಪಡಿಸುತ್ತಿದೆ. ಮುಂದಿನ ವರ್ಷದ ಎರಡೇ ತ್ರೈಮಾಸಿಕದಲ್ಲಿ ಲಸಿಕೆಯು ಮಾರುಕಟ್ಟೆಗೆ ಬರುವ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಫೆಬ್ರವರಿ, ಮಾರ್ಚ್ ನಲ್ಲಿ ಕೊವಿಡ್-19 ಲಸಿಕೆ

ಫೆಬ್ರವರಿ, ಮಾರ್ಚ್ ನಲ್ಲಿ ಕೊವಿಡ್-19 ಲಸಿಕೆ

ಕೊರೊನಾವೈರಸ್ ಸೋಂಕಿತರಿಗೆ ನೀಡುವುದಕ್ಕಾಗಿ ಸಂಶೋಧಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ವಿಜ್ಞಾನಿ ರಜನಿಕಾಂತ್ ತಿಳಿಸಿದ್ದಾರೆ. ಕೊವಿಡ್-19 ಟಾಸ್ಕ್ ಫೋರ್ಸ್ ಸದಸ್ಯರೂ ಆಗಿರುವ ರಜನಿಕಾಂತ್, ಕೊವ್ಯಾಕ್ಸಿನ್ ಲಸಿಕೆಯು ಮುಂದಿನ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸಂಶೋಧಿಸಲ್ಪಟ್ಟ ಮೊದಲ ಲಸಿಕೆ

ದೇಶದಲ್ಲಿ ಸಂಶೋಧಿಸಲ್ಪಟ್ಟ ಮೊದಲ ಲಸಿಕೆ

ಕೊವ್ಯಾಕ್ಸಿನ್ ಲಸಿಕೆ ಬಿಡುಗಡೆಯ ಬಗ್ಗೆ ಭಾರತ್ ಬಯೋಟೆಕ್ ಸಂಸ್ಥೆಯು ಇದುವರೆಗೂ ಯಾರಿಗೂ ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ. ಆದರೆ ಫೆಬ್ರವರಿ ಹೊತ್ತಿಗೆ ಕೊವ್ಯಾಕ್ಸಿನ್ ಲಸಿಕೆ ಬಿಡುಗಡೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಕೊವ್ಯಾಕ್ಸಿನ್ ಲಸಿಕೆಯು ಭಾರತೀಯ ಸಂಸ್ಥೆಯೇ ಬಿಡುಗಡೆಗೊಳಿಸಿದ ಮೊದಲ ಕೊವಿಡ್-19 ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮನುಷ್ಯರ ಮೇಲೆ ಪ್ರಯೋಗಿಸಲು ಸದ್ಯಕ್ಕಿಲ್ಲ ಅನುಮತಿ

ಮನುಷ್ಯರ ಮೇಲೆ ಪ್ರಯೋಗಿಸಲು ಸದ್ಯಕ್ಕಿಲ್ಲ ಅನುಮತಿ

ಕೊವ್ಯಾಕ್ಸಿನ್ ಲಸಿಕೆಯನ್ನು ಮೊದಲು ಮತ್ತು ಎರಡನೇ ಹಂತದಲ್ಲಿ ಪ್ರಯೋಗಿಸಿದಾಗ ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ತಿಳಿದು ಬಂದಿದೆ. ಈ ಹಂತದಲ್ಲಿ ಪ್ರಾಣಗಳ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯೂ ಆಗಿದೆ. ಆದರೆ ಶೇ.100ರಷ್ಟು ಲಸಿಕೆಯು ಸುರಕ್ಷಿತವಾಗಿದೆ ಎನ್ನುವುದು ಖಚಿತವಾಗಬೇಕಿದೆ. ಆಗಷ್ಟೇ ಜನರಿಗೆ ಈ ಲಸಿಕೆಯನ್ನು ನೀಡುವುದಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ ಎಂದು ಕೊವಿಡ್-19 ಟಾಸ್ಕ್ ಫೋರ್ಸ್ ಸದಸ್ಯ ರಜನಿಕಾಂತ್ ತಿಳಿಸಿದ್ದಾರೆ.

ಸಮಸ್ಯೆ ಎದುರಿಸಲು ಸಿದ್ಧರಿದ್ದಲ್ಲಿ ಕೊವ್ಯಾಕ್ಸಿನ್ ಪ್ರಯೋಗ

ಸಮಸ್ಯೆ ಎದುರಿಸಲು ಸಿದ್ಧರಿದ್ದಲ್ಲಿ ಕೊವ್ಯಾಕ್ಸಿನ್ ಪ್ರಯೋಗ

ಕೊರೊನಾವೈರಸ್ ಸೋಂಕಿನಿಂದ ಹೆಚ್ಚು ಅಪಾಯಕ್ಕೆ ಸಿಲುಕುವ ಬಗ್ಗೆ ಸೂಚನೆ ಸಿಕ್ಕಿದ್ದಲ್ಲಿ. ರಿಸ್ಕ್ ತೆಗೆದುಕೊಳ್ಳುವುದಕ್ಕೆ ತಯಾರಿ ಇದ್ದವರ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗಿಸುವುದಕ್ಕೆ ಅನುಮತಿ ನೀಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಲಸಿಕೆಯನ್ನು ಬಳಸುವುದಕ್ಕೆ ಸರ್ಕಾರವು ಚಿಂತನೆ ನಡೆಸುತ್ತಿದೆ. ವೃದ್ಧರು ಮತ್ತು ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಲಸಿಕೆ ಕೊಡುವುದಕ್ಕೆ ಸಪ್ಟೆಂಬರ್ ನಲ್ಲಿ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ಡಿಸೆಂಬರ್ ವೇಳೆಗೆ ನಲ್ಲಿ ಕೊವಿಡ್-19 ಲಸಿಕೆ

ಡಿಸೆಂಬರ್ ವೇಳೆಗೆ ನಲ್ಲಿ ಕೊವಿಡ್-19 ಲಸಿಕೆ

ವಿಶ್ವದಾದ್ಯಂತ ಕೊವಿಡ್-19 ಸೋಂಕಿನ ಲಸಿಕೆಯ ಹಲವು ಮಾದರಿಗಳು ಅಂತಿಮ ಹಂತದ ವೈದ್ಯಕೀಯ ಪ್ರಯೋಗದಲ್ಲಿವೆ. ಬ್ರಿಟನ್ನಿನ ಅಸ್ಟ್ರಾಜೆನಿಕ್ ಲಸಿಕೆಯು ಅಂತಿಮ ಹಂತದ ವೈದ್ಯಕೀಯ ಪ್ರಯೋಗಕ್ಕೆ ಒಳಪಟ್ಟಿದೆ. ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದ ವೇಳೆಗೆ ಆಸ್ಟ್ರಾಜೆನಿಕ್ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Recommended Video

Corona ಬಂದ್ರೆ ನೋ Tension | Corona Vaccine | Oneindia Kannada
ದೇಶದಲ್ಲಿ ಕೊವಿಡ್-19 ಅಂಕಿ-ಸಂಖ್ಯೆ

ದೇಶದಲ್ಲಿ ಕೊವಿಡ್-19 ಅಂಕಿ-ಸಂಖ್ಯೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 50,209 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದೊಂದು ದಿನಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಒಂದು ದಿನದಲ್ಲಿ 55,331 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, 704 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 83,64,086ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಈವರೆಗೂ 1,24,315 ಮಂದಿ ಪ್ರಾಣ ಬಿಟ್ಟಿದ್ದಾರೆ. 77,11,809 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 5,27,962 ಸಕ್ರಿಯ ಪ್ರಕರಣಗಳಿವೆ.

English summary
India-Made COVAXIN Covid-19 Vaccine Could Be Launched As Early As February: Govt Scientist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X