ಭಾರತದಲ್ಲಿ ಜಾನ್ಸನ್ ಆಂಡ್ ಜಾನ್ಸಲ್ ಲಸಿಕೆ ಉತ್ಪಾದನೆ, ರಫ್ತಿನ ಬಗ್ಗೆ ಚರ್ಚೆ

ನವದೆಹಲಿ, ಸೆಪ್ಟೆಂಬರ್ 29: ಭಾರತದಲ್ಲಿ ಬಯೋಲಾಜಿಕಲ್-ಇ ಕೊರೊನಾವೈರಸ್ ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ದೈತ್ಯ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚರ್ಚೆ ನಡೆಸಿದೆ.

ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ ವೇಳೆಗೆ ಅದೇ ಲಸಿಕೆಯ 80 ಲಕ್ಷ ಡೋಸ್‌ಗಳನ್ನು ರಫ್ತು ಮಾಡುವುದಾಗಿ ಭರವಸೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಹಿರಿಯ ಅಧಿಕಾರಿಯ ಪ್ರಕಾರ, ಕೇಂದ್ರ ಸರ್ಕಾರ ಮತ್ತು ಕಂಪನಿಯು ವಾಸ್ತವ ಸ್ಥಿತಿಯ ಮೇಲೆ ಅನ್ವೇಷಿಸಬೇಕಿದೆ.

ಈಗಾಗಲೇ ಭರವಸೆ ನೀಡಲಾಗಿರುವ ಕೊವಿಡ್-19 ಲಸಿಕೆಯನ್ನು ರಫ್ತು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದಾಗ್ಯೂ, ದೇಶೀಯ ಬಳಕೆಗಾಗಿ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಯ ಮಾಸಿಕ ಉತ್ಪಾದನೆಯ ಪಾಲನ್ನು ಭಾರತ ತೆಗೆದುಕೊಳ್ಳುವ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ. ಇದರ ಪರಿಹಾರಕ್ಕಾಗಿ ಅವರ ಬೇಡಿಕೆಯನ್ನು ನಾವು ಪರಿಹರಿಸಬೇಕಾಗಿದೆ. ಈ ನಡುವಿನ ವಾಸ್ತವದ ಬಗ್ಗೆ ತಿಳಿದುಕೊಳ್ಳಲು ಮಾತುಕತೆ ನಡೆಸಲಾಗುವುದು," ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

India likely to initiate a fresh round of talks with J & J to find a middle ground on usage and export of its vaccines

ಮಾಸಿಕ ಉತ್ಪಾದನೆಯ ಶೇ.50ರಷ್ಟು ಪಾಲು:

ಸದ್ಯಕ್ಕೆ ಕೊರೊನಾವೈರಸ್ ಲಸಿಕೆಯ ಒಟ್ಟು ಮಾಸಿಕ ಉತ್ಪಾದನೆಯಲ್ಲಿನ ಶೇ. 50ರಷ್ಟು ಪಾಲನ್ನು ಕೇಳಲು ಸರ್ಕಾರ ಯೋಜಿಸುತ್ತಿದೆ. ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವುದಾದರೆ ನಮ್ಮ ಜನರಿಗಾಗಿ ಅದರ ಉತ್ಪಾದನೆಯಿಂದ ಶೇಕಡಾ 50ರಷ್ಟು ಪಾಲನ್ನು ತೆಗೆದುಕೊಳ್ಳಲು ನಮಗೆ ಅವಕಾಶ ನೀಡಬೇಕು. ಒಮ್ಮೆ ನಾವು ನಮ್ಮ ಇಡೀ ಜನಸಂಖ್ಯೆಗೆ ಲಸಿಕೆ ಹಾಕಿದರೆ, ಕಂಪನಿಯು ಹೆಚ್ಚು ರಫ್ತು ಮಾಡಲು ಪ್ರಾರಂಭಿಸಬಹುದು," ಎಂದು ಅಧಿಕಾರಿ ಹೇಳಿದ್ದಾರೆ.

8 ಮಿಲಿಯನ್ ಡೋಸ್ ಲಸಿಕೆ ಲಭ್ಯ:

ಭಾರತದಲ್ಲಿ ಅಕ್ಟೋಬರ್ ತಿಂಗಳಾಂತ್ಯದ ವೇಳೆಗೆ 8 ಮಿಲಿಯನ್ ಡೋಸ್ ಜಾನ್ಸನ್ ಮತ್ತು ಜಾನ್ಸನ್ ಲಸಿಕೆಯನ್ನು ಲಭ್ಯವಾಗಲಿದೆ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದರು. ಕಳೆದ ವಾರಾಂತ್ಯದಲ್ಲಿ ನಡೆದ ಕ್ವಾಡ್ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ ಭಾರತವು ಲಸಿಕೆಗಳ ರಫ್ತು ನಿಲ್ಲಿಸಬೇಕಾಗಿದೆ. ಕ್ವಾಡ್ ಲಸಿಕೆ ಪಾಲುದಾರಿಕೆಯ ಅಡಿಯಲ್ಲಿ ಪಿಎಂ ಮೋದಿ ಲಸಿಕೆ ರಫ್ತುಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದರು.

"ಕಂಪನಿಯು ಈ ಬ್ಯಾಚ್‌ಗಳನ್ನು ರಫ್ತು ಮಾಡಲು ಯೋಜಿಸುತ್ತಿದೆಯೇ ಅಥವಾ ತಾಂತ್ರಿಕ ಕಾರಣಗಳಿಗಾಗಿ ಅವುಗಳನ್ನು ಪರೀಕ್ಷಿಸಲಾಗಿದೆಯೇ ಎಂದು ನಾವು ಕಂಡುಹಿಡಿಯಬೇಕಿದೆ" ಎಂದು ಅಧಿಕಾರಿ ಹೇಳಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯಲ್ಲಿ ಲಸಿಕೆ ವಿತರಣೆ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ದೇಶದಲ್ಲಿ 87.66 ಕೋಟಿಗೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 256 ದಿನಗಳಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 54,13,332 ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದ್ದು, ಈವರೆಗೂ 87,66,63,490 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೂ 85,42,35,155 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ಪೂರೈಸಿರುವ ಕೊರೊನಾವೈರಸ್ ಲಸಿಕೆ:

2021ರ ಸಪ್ಟೆಂಬರ್ 29ರ ಅಂಕಿ-ಅಂಶಗಳ ಪ್ರಕಾರ, 85,42,35,155 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

* ಪೂರೈಕೆಯಾದ ಲಸಿಕೆ ಪ್ರಮಾಣ - 85,42,35,155

* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 83,80,140

* ಕೊವಿಡ್-19 ಲಸಿಕೆಯ ಲಭ್ಯತೆ - 4,57,98,120

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+