IPO: ಜಾಗತಿಕ IPO ವಿನಿಮಯದಲ್ಲಿ ಭಾರತಕ್ಕೆ ಅಗ್ರಸ್ಥಾನ: ಷೇರು ವಿನಿಮಯದ ಡೇಟಾ ಇಲ್ಲಿದೆ
ಬೆಂಗಳೂರು, ಜನವರಿ 01: ಷೇರು ಮಾರುಕಟ್ಟೆ, ಐಪಿಒ, ಎಸ್‌ಐಪಿ ಇನ್ನಿತರ ವೇದಿಕೆಗಳ ಮೇಲೆ ಬಂಡವಾಳ ಹೂಡಿಕೆಯ ಆಸಕ್ತಿ ಭಾರತದಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಹೂಡಿಕೆದಾರರ ವಿಶ್ವಾಸವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿರುವ ಹಿನ್ನೆಲೆಯಲ್ಲಿ ಭಾರತವು ಬಂಡವಾಳ ನಿಧಿಸಂಗ್ರಹಣೆಯಲ್ಲಿ ಜಾಗತಿಕ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ. ಜಾಗತಿಕ ಆರಂಭಿಕ ಸಾರ್ವಜನಿಕ ಕೊಡುಗೆ (IPO) ವಿಚಾರದಲ್ಲಿ ಕಳೆದ ವರ್ಷ 2024ರಲ್ಲಿ ಅಗ್ರಸ್ಥಾನಕ್ಕೇರಿದೆ.
ಹೌದು, ಮೂಲಸೌಕರ್ಯ ಮತ್ತು ಪ್ರಮುಖ ವಲಯದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಹೆಚ್ಚಿದ ಖಾಸಗಿ ಬಂಡವಾಳ ವೆಚ್ಚದೊಂದಿಗೆ, ಮಾರುಕಟ್ಟೆ ಚೈತನ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2024ರ ವಷಾಂತ್ಯದಲ್ಲಿ ಷೇರು ಮಾರುಕಟ್ಟೆಯಲ್ಲಿ ಅತ್ಯಧಿಕ ಕಂಪನಿಯಗಳು IPOಗೆ (Initial Public Offering) ತೆರೆದುಕೊಂಡು ಬಂಡವಾಳ ಸೆಳೆದವು.

ಸಾಕಷ್ಟು ಕಂಪನಿಗಳು ಷೇರು ಪೇಟೆ ಪ್ರವೇಶಿವೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಕಂಪನಿಗಳ IPO ಮೂಲಕ ಪಾಲುದಾರರಾಗಿದ್ದಾರೆ. ಭಾರತವು ಬೇರೆ ದೇಶಗಳಿಗಿಂತಲೂ 2024ರಲ್ಲಿ ಅತ್ಯಧಿಕ ರಾಷ್ಟ್ರೀಯ ಷೇರು ವಿನಿಮಯ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇರೆ ದೇಶಗಳಿಗಿಂತಲೂ ಭಾರತದ ರಾಷ್ಟ್ರೀಯ ಷೇರು ವಿನಿಮಯ ಕಳೆದ ವರ್ಷ 17.3ಕ್ಕೆ ಏರಿಕೆ ಆಗಿದೆ. ಅದೇ ರೀತಿ NASDAG ಷೇರು ವಿನಿಮಯ ಕೇಂದ್ರ 16.5, ನ್ಯೂಯಾರ್ಕ್ ಷೇರು ವಿನಿಮಯ 15.9, ಹಾಂಗಕಾಂಗ್ ಷೇರು ವಿನಿಮಯ 10.4 ಮತ್ತು ಶಾಂಘೈ ಷೇರು ವಿನಿಮಯ 8.8 ರಷ್ಟಿದೆ. ಈ ಎಲ್ಲ ದೇಶಗಳನ್ನು ಹಿಮ್ಮೆಟ್ಟಿಸಿ ಅತ್ಯಧಿಕ ಷೇರು ವಿನಿಮಯ ಮಾಡಿಕೊಂಡ ಭಾರತ ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಬಿಜೆಪಿಯು ಮಾಹಿತಿ ನೀಡಿದೆ.












Click it and Unblock the Notifications