ಕ್ಷಿಪಣಿ ಕ್ಲಬ್​ಗೆ ಭಾರತ ಸೇರ್ಪಡೆ, ಏನು ಪ್ರಯೋಜನ?

Posted By:
Subscribe to Oneindia Kannada

ನವದೆಹಲಿ, ಜೂನ್ 27: ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಂಟಿಸಿಆರ್) ಕ್ಷಿಪಣಿ ಕ್ಲಬಿಗೆ ಭಾರತವು ಅಧಿಕೃತವಾಗಿ ಸೇರ್ಪಡೆಗೊಂಡಿದೆ ಎಂದು ಸೋಮವಾರ ಘೋಷಿಸಲಾಗಿದೆ.

ಕ್ಷಿಪಣಿ ಕ್ಲಬ್​ಗೆ ಸೋಮವಾರ ಪೂರ್ಣಾವಧಿ ಸದಸ್ಯನಾಗಿ ಭಾರತ ಸೇರ್ಪಡೆಗೊಂಡಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ಪತ್ರಕ್ಕೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಸಹಿ ಹಾಕಿದರು.

ಎಂಟಿಸಿಆರ್​ಗೆ ಭಾರತ ಸೇರ್ಪಡೆಯಿಂದ ಜಾಗತಿಕ ಅಣ್ವಸ್ತ್ರ ಪ್ರಸರಣ ತಡೆ ನಿಯಮಾವಳಿಗಳ ವಿಸ್ತರಣೆ ನಿಟ್ಟಿನಲ್ಲಿ ಪರಸ್ಪರರಿಗೆ ಅನುಕೂಲವಾಗಲಿದೆ.

ಫ್ರಾನ್ಸಿನ ನಿಯೋಜಿತ ರಾಯಭಾರಿ ಅಲೆಗ್ಸಾಂಡ್ರೆ ಝೀಗ್ಲೆರ್, ನೆದರ್ ಲ್ಯಾಂಡ್ಸ್ ರಾಯಭಾರಿ ಅಲ್ಪೋನ್ಸಸ ಸ್ಟೊಯೆಲಿಂಗ ಮತ್ತು ಲಕ್ಸೆಂಬರ್ಗ್​ನ ಚಾರ್ಜ್ ಡ'ಅಫೇರ್ಸ್ ಲೌರೆ ಹಬರ್ಟಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

'ಭಾರತವು ಈ ದಿನ ಎಂಟಿಸಿಆರ್​ಗೆ 35ನೇ ಸದಸ್ಯನಾಗಿ ಭಾರತದ ಸೇರ್ಪಡೆಯಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಅಣ್ವಸ್ತ್ರ ಪ್ರಸರಣ ತಡೆ ನಿಯಮಾವಳಿ ಗುರಿಗಳನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಈ ನಿಟ್ಟಿನಲ್ಲಿ ಪರಸ್ಪರರಿಗೆ ಅನುಕೂಲಕರವಾಗಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಿಸಿದೆ. ಇದರ ಜೊತೆಗೆ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಬೆಂಬಲ ನೀಡಿದ ಎಲ್ಲಾ 34 ಸದಸ್ಯ ರಾಷ್ಟ್ರಗಳಿಗೂ ಭಾರತ ವಂದನೆ ಸಲ್ಲಿಸಿದೆ.

​India joins Missile Technology Control Regime. Top things to know

* ಎಂಟಿಸಿಆರ್ ಗೆ ಸದಸ್ಯ ಪಡೆದಿರುವುದರಿಂದ ಇನ್ಮುಂದೆ ಅತ್ಯುನ್ನತ ತಂತ್ರಜ್ಞಾನವುಳ್ಳ ಕ್ಷಿಪಣಿ ಖರೀದಿ ಸುಲಭವಾಗಲಿದೆ. ರಷ್ಯಾ ಜತೆ ಜಂಟಿ ಸಹಯೋಗದಲ್ಲಿ ತರಬೇತಿ, ಅಭ್ಯಾಸ ಕೂಡಾ ಸಹಕಾರಿಯಾಗಲಿದೆ.

* ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಹೆಚ್ಚಿನ ಒತ್ತು ನೀಡಲು ಸಮಾನ ಮನಸ್ಕ ರಾಷ್ಟ್ರಗಳು ಮಾಡಿಕೊಂಡಿರುವ ಗುಂಪು ಇದಾಗಿದೆ. ಇದರಲ್ಲಿ ಅರ್ಜೆಂಟೀನಾ, ಅಸ್ಟ್ರೇಲಿಯಾ, ಅಸ್ಟ್ರೀಯಾ, ಬೆಲ್ಜಿಯಂ, ಬ್ರೆಜಿಲ್, ಬಲ್ಗೇರಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐಸ್ ಲ್ಯಾಂಡ್, ಐರ್ಲೆಂಡ್, ಇಟಲಿ, ಜಪಾನ್, ಲಕ್ಸೆಂಬರ್ಗ್, ನೆದರ್ಲೆಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೊಲೆಂಡ್, ಪೋರ್ಚುಗಲ್, ರಿಪಬ್ಲಿಕ್ ಆಫ್ ಕೊರಿಯಾ, ರಷ್ಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಟರ್ಕಿ, ಉಕ್ರೇನ್, ಯುನೈಟೆಡ್ ಕಿಂಗ್ಡಮ್, ಯುಎಸ್ಎ ಸದಸ್ಯರಾಷ್ಟ್ರಗಳಾಗಿವೆ.

* ಅಣ್ವಸ್ತ್ರ, ಜೈವಿಕ ಹಾಗೂ ರಾಸಾಯನಿಕ ಶಸ್ತ್ರಾಸ್ತ್ರಗಳ ಮೂಲಕ ಸಾಮೂಹಿಕ ನಾಶಕ್ಕೆ ಯತ್ನಿಸುವುದು ಹಾಗೂ ಇಂಥ ಶಸ್ತ್ರಾಸ್ತ್ರಗಳ ಪ್ರಸರಣ ನಿಷೇಧಿಸುವುದು,

* 300 ಕಿ.ಮೀ ವ್ಯಾಪ್ತಿಯ 500 ಕೆಜಿ ತೂಗುವ ವಿಧ್ವಂಸಕ ಸಾಮಾಗ್ರಿಯನ್ನು ಹೊತ್ತೊಯ್ಯಬಲ್ಲ ರಾಕೆಟ್, ಮಾನವರಹಿತ ವೈಮಾನಿಕ ವಾಹನಗಳ ನಿಯಂತ್ರಣ ಎಂಟಿಸಿಆರ್ ನ ಉದ್ದೇಶ. ಇದಕ್ಕೆ ಸಂಬಂಧಪಟ್ಟ ತಂತ್ರಜ್ಞಾನ, ತಂತ್ರಾಂಶ ಹಾಗೂ ವ್ಯವಸ್ಥೆ ಮೇಲೆ ನಿಯಂತ್ರಣ.

* 1987ರಲ್ಲಿ ಜಿ 7 ಸದಸ್ಯರಾಷ್ಟ್ರಗಳಿಂದ ಆರಂಭವಾದ ಎಂಟಿಸಿಆರ್ ನಲ್ಲಿ ಸದಸ್ಯರಾಷ್ಟ್ರಗಳ ನಡುವೆ ಮುಕ್ತ ಚರ್ಚೆ ಸಾಧ್ಯವಿದೆ. ಆದರೆ, ಹೊಸ ಸದಸ್ಯರಾಷ್ಟ್ರ ಸೇರ್ಪಡೆಗೆ ಉಳಿದ ರಾಷ್ಟ್ರಗಳ ಇಪ್ಪಿಗೆ ಅಗತ್ಯ. ಹೆಚ್ಚಿನ ಮಾಹಿತಿಯನ್ನು ಎಂಟಿಸಿಆರ್ ವೆಬ್ ಸೈಟ್ ನಿಂದ ಪಡೆದುಕೊಳ್ಳಬಹುದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Top things to know: The Missile Technology Control Regime (MTCR) has officially declared India’s membership. MTCR membership will enable India to buy high-end missile technology and also enhance its joint ventures with Russia.
Please Wait while comments are loading...