ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಅನ್ನು ವಿದೇಶಕ್ಕೆ ಮಾರುತ್ತಿದೆ ಕೇಂದ್ರ ಸರ್ಕಾರ!

|
Google Oneindia Kannada News

ನವದೆಹಲಿ, ಅಕ್ಟೋಬರ್ 05: ನಮ್ಮ ದೇಶದ ಜನರೇ 85-90 ರೂಪಾಯಿ ಕೊಟ್ಟು ಪೆಟ್ರೋಲ್ ಖರೀದಿಸುತ್ತಿದ್ದರೆ, ಭಾರತ ಸರ್ಕಾರವು ಕೇವಲ 32 ರೂಪಾಯಿಗೆ ಪೆಟ್ರೋಲ್ ಅನ್ನು ವಿದೇಶಕ್ಕೆ ರಫ್ತು ಮಾಡುತ್ತಿದೆ!

ಹೌದು, ಈ ಸುದ್ದಿ ಅಕ್ಷರಷಃ ಸತ್ಯ. ಈ ವಿಷಯವನ್ನು ಸ್ವತಃ ಸರ್ಕಾರವೇ ಒಪ್ಪಿಕೊಂಡು ಆರ್.ಟಿ.ಐ ಮಾಹಿತಿಯಲ್ಲಿ ನೀಡಿದೆ. ಸರ್ಕಾರ ನಡೆಸುವ ತೈಲ ಸಂಸ್ಕರಣಾ ಘಟಕಗಳು ನೀಡಿರುವ ಮಾಹಿತಿ ಪ್ರಕಾರ ಭಾರತವು 15 ದೇಶಗಳಿಗೆ ಪೆಟ್ರೋಲ್ ರಫ್ತು ಮಾಡಿದರೆ, 29 ದೇಶಗಳಿಗೆ ಡೀಸೆಲ್ ರಫ್ತು ಮಾಡುತ್ತದೆ.

ಇರಾನ್‌ನಿಂದ ತೈಲ ಖರೀದಿ ನಿಲ್ಲಿಸಲು ಭಾರತಕ್ಕೆ ಹೆಚ್ಚುವರಿ ಕಾಲಾವಕಾಶ: ಅಮೆರಿಕಇರಾನ್‌ನಿಂದ ತೈಲ ಖರೀದಿ ನಿಲ್ಲಿಸಲು ಭಾರತಕ್ಕೆ ಹೆಚ್ಚುವರಿ ಕಾಲಾವಕಾಶ: ಅಮೆರಿಕ

ಸಂಸ್ಕರಿಸಿದ ಪೆಟ್ರೋಲ್ ಅನ್ನು ಲೀಟರ್‌ಗೆ ಕೇವಲ 32 ರಿಂದ 34 ರೂಪಾಯಿಗಳಿಗೆ ಯುಎಇ, ಹಾಂಗಾಂಗ್‌, ಅಮೆರಿಕ, ಆಸ್ಟ್ರೇಲಿಯಾ, ಸಿಂಗಪುರದಂತಹ ಸ್ಥಿತಿವಂತ ರಾಷ್ಟ್ರಗಳಿಗೆ ಕೇಂದ್ರ ಸರ್ಕಾರ ರಫ್ತು ಮಾಡುತ್ತದೆ. ಇನ್ನು ಸಂಸ್ಕರಿಸಿದ ಡೀಸೆಲ್ ಅನ್ನು ಕೇವಲ 37 ರೂಪಾಯಿ ಪ್ರತಿ ಲೀಟರ್‌ನಂತೆ 29 ದೇಶಗಳಿಗೆ ರಫ್ತು ಮಾಡುತ್ತದೆ. ಕೋಟ್ಯಂತರ ಲೀಟರ್‌ ಇಂಧನವನ್ನು ಭಾರತ ವಿವಿಧ ದೇಶಗಳಿಗೆ ಮಾರುತ್ತಿದೆ.

ಭಾರತೀಯರಿಗೆ ಬೆಲೆ ವಿದೇಶಕ್ಕೆ ಕಡಿಮೆಗೆ ಮಾರಾಟ!

ಭಾರತೀಯರಿಗೆ ಬೆಲೆ ವಿದೇಶಕ್ಕೆ ಕಡಿಮೆಗೆ ಮಾರಾಟ!

ನಮ್ಮ ಜನರೇ 85-90 ರೂಪಾಯಿಗೂ ಹೆಚ್ಚು ಹಣ ಕೊಟ್ಟು ಪೆಟ್ರೋಲ್-ಡೀಸೆಲ್ ಖರೀದಿಸಬೇಕಾದರೆ ಸರ್ಕಾರವೇಕೆ ಬೇರೆ ದೇಶಗಳಿಗೆ ಅದೂಸ ಸ್ಥಿತಿವಂತ ದೇಶಗಳಿಗೆ ಅಷ್ಟು ಕಡಿಮೆ ಮೊತ್ತಕ್ಕೆ ರಫ್ತು ಮಾಡುತ್ತದೆ ಎಂಬುದು ಪ್ರಶ್ನಾರ್ಹ. ಆದರೆ ಇದಕ್ಕೆ ಉತ್ತರ ಅಷ್ಟು ಸುಲಭವಿಲ್ಲ.

2017ರಲ್ಲಿ 16 ಲಕ್ಷ ಕೋಟಿ ಮೌಲ್ಯದ ಇಂಧನ ರಫ್ತು ಮಾಡಲಾಗಿದೆ

2017ರಲ್ಲಿ 16 ಲಕ್ಷ ಕೋಟಿ ಮೌಲ್ಯದ ಇಂಧನ ರಫ್ತು ಮಾಡಲಾಗಿದೆ

ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಹಾಗೆಯೇ ಅತಿ ಹೆಚ್ಚು ಸಂಸ್ಕರಿಸಿದ ಇಂಧನವನ್ನು ರಫ್ತು ಮಾಡುವ ಪ್ರಮುಖ ರಾಷ್ಟ್ರವೂ ಹೌದು. ಕಚ್ಚಾ ತೈಲವನ್ನು ಕೊಲ್ಲಿ ರಾಷ್ಟ್ರಗಳಿಂದ ಪಡೆದುಕೊಂಡು ಇಲ್ಲಿ ಅದನ್ನು ಸಂಸ್ಕರಿಸಿ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. 2017ರಲ್ಲಿ ಭಾರತವು 16 ಲಕ್ಷ ಕೋಟಿ ರೂಪಾಯಿ ಮೌಲ್ಯದ ಇಂಧನವನ್ನು ರಫ್ತು ಮಾಡಿದೆ.

ಬಿಜೆಪಿ ಸುಳ್ಳುಗಳನ್ನು ದಾಖಲೆ ಮೂಲಕ ಹೊರಗೆಳೆದ ಕಾಂಗ್ರೆಸ್‌ನ ಸುರ್ಜೇವಾಲಾಬಿಜೆಪಿ ಸುಳ್ಳುಗಳನ್ನು ದಾಖಲೆ ಮೂಲಕ ಹೊರಗೆಳೆದ ಕಾಂಗ್ರೆಸ್‌ನ ಸುರ್ಜೇವಾಲಾ

ಇಂಧನ ರಫ್ತು ಮಾಡುವ ಪ್ರಮುಖ 10 ದೇಶಗಳಲ್ಲಿದೆ ಭಾರತ

ಇಂಧನ ರಫ್ತು ಮಾಡುವ ಪ್ರಮುಖ 10 ದೇಶಗಳಲ್ಲಿದೆ ಭಾರತ

ಭಾರತವು ಅತಿ ಹೆಚ್ಚು ರಫ್ತು ಮಾಡುವ ವಸ್ತುಗಳಲ್ಲಿ ವಸ್ತುಗಳಲ್ಲಿ ಎರಡನೇಯ ಸ್ಥಾನ ಪೆಟ್ರೋಲ್ ಮತ್ತು ಡೀಸೆಲ್‌ಗೆ ಸೇರುತ್ತದೆ. ನಮ್ಮ ದೇಶ ಪೆಟ್ರೋಲ್ ಡೀಸೆಲ್ ವಿದೇಶಕ್ಕೆ ರಫ್ತು ಮಾಡುವ 10ನೇ ಅತಿ ದೊಡ್ಡ ರಾಷ್ಟ್ರ. ಭಾಗೋಳಿಕ ಹಿನ್ನೆಲೆಯಿಂದ ವಿವಿಧ ದೇಶಗಳಿಗೆ ಹಂಚಿಕೆ ಸುಲಭವಾಗಲಿ ಎಂಬ ಕಾರಣದಿಂದ ಭಾರತವು ಕಚ್ಚಾ ತೈಲವನ್ನು ಸಂಸ್ಕರಿಸಿ ರಫ್ತು ಮಾಡುತ್ತಿದೆ.

ರಫ್ತು ಮಾಡುವ ಇಂಧನದ ಮೇಲೆ ಹೆಚ್ಚುವರಿ ತೆರಿಗೆ ಇಲ್ಲ

ರಫ್ತು ಮಾಡುವ ಇಂಧನದ ಮೇಲೆ ಹೆಚ್ಚುವರಿ ತೆರಿಗೆ ಇಲ್ಲ

ರಫ್ತು ಮಾಡುವ ಸಂಸ್ಕರಿಸಿದ ಪೆಟ್ರೋಲ್ ಹಾಗೂ ಡೀಸೆಲ್‌ಗಿಂತಲೂ ದೇಶದಲ್ಲಿ ಅತಿ ಹೆಚ್ಚು ಬೆಲೆ ಇರುವುದಕ್ಕೆ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ. ರಫ್ತು ಮಾಡುವ ಇಂಧನಕ್ಕೆ ಯಾವುದೇ ಹೆಚ್ಚುವರಿ ತೆರಿಗೆ ಇರುವುದಿಲ್ಲ ಹಾಗಾಗಿ ಸಂಸ್ಕರಣಾ ವೆಚ್ಚ ಮಾತ್ರವೇ ಸೇರಿದ ಇಂಧನ ಕಡಿಮೆ ಬೆಲೆಗೆ ರಫ್ತಾಗುತ್ತದೆ. ಅದರ ಬೆಲೆ ಸಹ ಅಂತರರಾಷ್ಟ್ರೀಯ ಬೇಡಿಕೆ ಮತ್ತು ಪೂರೈಕೆಯನ್ನು ಆಧರಿಸುತ್ತದೆ, ಸಂಸ್ಕರಣಾ ಘಟಕ ಅಥವಾ ಸಂಸ್ಥೆಗಳು ರಫ್ತಾಗುವ ಇಂಧನದ ಬೆಲೆ ನಿಯಂತ್ರಿಸಲಾರರು.

ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗೊಳಿಸುವುದಿಲ್ಲ : ಕುಮಾರಸ್ವಾಮಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗೊಳಿಸುವುದಿಲ್ಲ : ಕುಮಾರಸ್ವಾಮಿ

ಕಚ್ಚಾ ಪೆಟ್ರೋಲ್ ಬೆಲೆ ಕೇವಲ 35.90 ರೂಪಾಯಿ

ಕಚ್ಚಾ ಪೆಟ್ರೋಲ್ ಬೆಲೆ ಕೇವಲ 35.90 ರೂಪಾಯಿ

ಭಾರತೀಯ ತೈಲ ಸಂಸ್ಥೆಯ (ಐಓಸಿ) ನೀಡುವ ಮಾಹಿತಿ ಪ್ರಕಾರ (ಕಳೆದ ಆಗಸ್ಟ್‌ ತಿಂಗಳಲ್ಲಿ) ಒಂದು ಲೀಟರ್‌ ಕಚ್ಚಾ ಪೆಟ್ರೋಲ್‌ಗೆ ತೈಲ ಕಂಪೆನಿಗಳಿಗೆ 35.90 ರೂ. ಗೆ ಸಿಕ್ಕರೆ, ಕಚ್ಚಾ ಡೀಸೆಲ್ 38.25 ಪ್ರತಿ ಲೀಟರ್‌ಗೆ ಬೀಳುತ್ತದೆ ಅಷ್ಟೆ. ಆದರೆ ಆ ನಂತರ ಸಂಸ್ಕರಣಾ ವೆಚ್ಚ ಸಾಗಣೆ, ಕೇಂದ್ರ ಹಾಗೂ ರಾಜ್ಯಗಳ ತೆರಿಗೆಗಳು ಅದರ ಮೇಲೆ ಬಿದ್ದು ಲೀಟರ್‌ಗೆ ಪೆಟ್ರೋಲ್ 90 ದಾಟಿದರೆ ಡೀಸೆಲ್ 85 ದಾಟುತ್ತದೆ (ಅಬಕಾರಿ ಸುಂಕ 2.50 ಪೈಸೆ ಇಳಿಸಲಾಗಿದೆ).

ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ

ತೈಲ ಸಂಸ್ಕರಣಾ ಘಟಕಗಳು ಎಷ್ಟಿವೆ?

ತೈಲ ಸಂಸ್ಕರಣಾ ಘಟಕಗಳು ಎಷ್ಟಿವೆ?

ದೇಶದಲ್ಲಿ ಒಟ್ಟು 22 ತೈಲ ಸಂಸ್ಕರಣಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಖಾಸಗಿ ಹಾಗೂ ಸರ್ಕಾರಿ ಎರಡೂ ಸಂಸ್ಕರಣಾ ಘಟಕಗಳು ಇವೆ. ಮಂಗಳೂರಿನಲ್ಲೂ ಸಹ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕ ಇದೆ. ಇರುವ 22 ಸಂಸ್ಕರಣಾ ಘಟಕಗಳಲ್ಲಿ 18 ಘಟಕಗಳು ಸರ್ಕಾರಿ ಸ್ವಾಮ್ಯದ್ದಾಗಿವೆ.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ

English summary
India is one of the largest refined petrol and diesel export countries. It exporting refined petrol to 15 country for just 34 rupees per liter and exporting diesel to 29 countries for just 37 rupees per liter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X