• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮ್ಮು-ಕಾಶ್ಮೀರ ತನ್ನದು ಎಂದ ಪಾಕಿಸ್ತಾನಕ್ಕೆ ಭಾರತದ ಉತ್ತರವೇನು?

|
Google Oneindia Kannada News

ನವದೆಹಲಿ, ಆಗಸ್ಟ್.04: ಜಮ್ಮು-ಕಾಶ್ಮೀರದ ವಿಚಾರದಲ್ಲಿ ಹೊಸ ನಕ್ಷೆಯ ಮೂಲಕ ಪಾಕಿಸ್ತಾನವು ಕ್ಯಾತೆ ತೆಗೆಯಲು ಮುಂದಾಗಿದೆ. ಪ್ರಧಾನಮಂತ್ರಿ ಇಮ್ರಾನ್ ಖಾನ್ ಬಿಡುಗಡೆಗೊಳಿಸಿರುವ ಪಾಕಿಸ್ತಾನದ ಹೊಸ ನಕ್ಷೆಯನ್ನು ಭಾರತವು ತಿರಸ್ಕರಿಸಿದೆ.

ಜಮ್ಮು-ಕಾಶ್ಮೀರಕ್ಕೆ 370ರ ಕಾಯ್ದೆಯ ಅಡಿಯಲ್ಲಿ ಮೊದಲಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಆಗಸ್ಟ್.05ರ ಬುಧವಾರಕ್ಕೆ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಹೊಸ ನಕ್ಷೆಯು ವಿವಾದದ ಕಿಡಿ ಹೊತ್ತಿಸುತ್ತಿದೆ.

ಹೊಸ ನಕ್ಷೆ: ಪಾಕಿಸ್ತಾನಕ್ಕೆ ಸೇರಿತಾ ಭಾರತದ ಜಮ್ಮು-ಕಾಶ್ಮೀರ?ಹೊಸ ನಕ್ಷೆ: ಪಾಕಿಸ್ತಾನಕ್ಕೆ ಸೇರಿತಾ ಭಾರತದ ಜಮ್ಮು-ಕಾಶ್ಮೀರ?

ಪಾಕಿಸ್ತಾನದ ಹೊಸ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಗುಜರಾತ್ ನ ಜುನಾಘರ್ ಕೂಡಾ ಪಾಕಿಸ್ತಾನಕ್ಕೆ ಸೇರಿದ್ದು ಎನ್ನುವಂತೆ ಚಿತ್ರಿಸಲಾಗಿದೆ. ಹಾಗೆಂದರೆ 1948ರ ಜನಾಭಿಪ್ರಾಯವನ್ನೇ ಪಾಕಿಸ್ತಾನವು ಪ್ರಶ್ನೆ ಮಾಡುತ್ತಿದೆಯೇ ಎಂದು ಭಾರತ ತಿರುಗೇಟು ನೀಡಿದೆ.

ಪಾಕಿಸ್ತಾನದಿಂದ 'ರಾಜಕೀಯ ಅಸಂಬದ್ಧತೆಯ ವ್ಯಾಯಾಮ'

ಪಾಕಿಸ್ತಾನದಿಂದ 'ರಾಜಕೀಯ ಅಸಂಬದ್ಧತೆಯ ವ್ಯಾಯಾಮ'

ಪಾಕಿಸ್ತಾನದ ಹೊಸ ನಕ್ಷೆಯನ್ನು "ರಾಜಕೀಯ ಅಸಂಬದ್ಧತೆಯ ವ್ಯಾಯಾಮ" ಎಂದು ಭಾರತ ತಳ್ಳಿಹಾಕಿದೆ. ಈ ನಕ್ಷೆಯು ಭಾರತದ ಗುಜರಾತ್ ಮತ್ತು "ನಮ್ಮ ಕೇಂದ್ರ ಪ್ರದೇಶಗಳಾದ ಜಮ್ಮು- ಕಾಶ್ಮೀರ ಮತ್ತು ಲಡಾಖ್"ಗೆ ಒಪ್ಪಲಾಗದ ಹಕ್ಕುಗಳನ್ನು ನೀಡುತ್ತಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ (ಎಂಇಎ) ಹೇಳಿಕೆಯು "ಈ ಹಾಸ್ಯಾಸ್ಪದ ಪ್ರತಿಪಾದನೆಗಳು ಕಾನೂನು ಮಾನ್ಯತೆ ಅಥವಾ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ" ಎಂದು ಹೇಳಿದೆ. "ವಾಸ್ತವವಾಗಿ, ಈ ಹೊಸ ಪ್ರಯತ್ನವು ಗಡಿಯಾಚೆಗಿನ ಭಯೋತ್ಪಾದನೆಯಿಂದ ಬೆಂಬಲಿತವಾಗಿದೆ. ಪ್ರಾದೇಶಿಕ ಉಲ್ಬಣಗೊಳ್ಳುವಿಕೆಯ ಬಗ್ಗೆ ಪಾಕಿಸ್ತಾನದ ಗೀಳಿನ ವಾಸ್ತವತೆಯನ್ನು ಖಚಿತಪಡಿಸುತ್ತದೆ" ಎಂದು ಭಾರತೀಯ ಸಚಿವಾಲಯವು ತಿಳಿಸಿದೆ.

ಪಾಕಿಸ್ತಾನದ ಪಾಲಿಗೆ ಇದೊಂದು ಐತಿಹಾಸಿಕ ದಿನ

ಪಾಕಿಸ್ತಾನದ ಪಾಲಿಗೆ ಇದೊಂದು ಐತಿಹಾಸಿಕ ದಿನ

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಆಗಸ್ಟ್.04 ದೇಶದ ಪಾಲಿಗೆ ಐತಿಹಾಸಿಕ ದಿನ ಎಂದು ಕರೆದಿದ್ದಾರೆ. ಅಲ್ಲದೇ ಹೊಸ ನಕ್ಷೆಯು ಪಾಕಿಸ್ತಾನಿ ಪ್ರಜೆಗಳ ಮಹತ್ವಾಕಾಂಕ್ಷೆ ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ಆಗಸ್ಟ್.04ರಂದು ಪ್ರಧಾನಮಂತ್ರಿ ಇಮ್ರಾನ್ ಖಾನ್ ಬಿಡುಗಡೆಗೊಳಿಸಿರುವ ರಾಜಕೀಯ ಪ್ರೇರಿತ ಹೊಸ ನಕ್ಷೆಯನ್ನೇ ಪಾಕಿಸ್ತಾನದ ಶಾಲೆಗಳಲ್ಲಿನ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಲಾಗುತ್ತದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ತಿಳಿಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ ಸರ್ಕಾರ ಆಗಸ್ಟ್.5ರಂದು ಅನುಸರಿಸಬೇಕಾದ ನಿರ್ದೇಶನಗಳನ್ನು ಹೊರಡಿಸಿತ್ತು. ಆಗಸ್ಟ್ 5 ಅನ್ನು ಈಗ ಯೂಮ್-ಇ-ಇಸ್ತೇಸಲ್ ಮತ್ತು ಘಸ್ಬಾನಾ ಕಬ್ಜಾ ಎಂದು ಕರೆಯಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇಮ್ರಾನ್ ಖಾನ್ ವಿರುದ್ಧ ವಿಜಯ್ ರೂಪಾನಿ ಸಿಡಿಮಿಡಿ

ಪ್ರಧಾನಮಂತ್ರಿ ಇಮ್ರಾನ್ ಖಾನ್ ಇಂದು ಬಿಡುಗಡೆ ಮಾಡಿದ ಪಾಕಿಸ್ತಾನದ ರಾಜಕೀಯ ನಕ್ಷೆಯು ಪಾಕಿಸ್ತಾನ ಪ್ರಧಾನಿ ನೆಲದ ವಾಸ್ತವತೆಗಳೊಂದಿಗೆ ಎಷ್ಟರ ಮಟ್ಟಿಗೆ ಸಂಪರ್ಕ ಕಳೆದುಕೊಂಡಿದ್ದಾರೆ ಎನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕಿಡಿ ಕಾರಿದ್ದಾರೆ. ಅಲ್ಲದೇ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಹಾಳುಮಾಡುವ ದುಷ್ಟ ಕಾರ್ಯದಲ್ಲಿ ಪಾಕಿಸ್ತಾನ ಎಂದಿಗೂ ಯಶಸ್ವಿಯಾಗುವುದಿಲ್ಲ" ಎಂದು ರೂಪಾನಿ ಟ್ವೀಟ್ ಮಾಡಿದ್ದಾರೆ.

ಭಾರತ ಆಕ್ರಮಿಕ ಜಮ್ಮು ಕಾಶ್ಮೀರ ಎಂದು ಉಲ್ಲೇಖ

ಭಾರತ ಆಕ್ರಮಿಕ ಜಮ್ಮು ಕಾಶ್ಮೀರ ಎಂದು ಉಲ್ಲೇಖ

ಪಾಕಿಸ್ತಾನದಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಬಳಸಬೇಕಾದ ಪದಗಳ ಬಗ್ಗೆಯೂ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. IIOJK (Indian llegally Occupied Jammu And Kashmir), ಅಥವಾ IOJK (Indian Occupied Jammu And Kashmir) ಅಥವಾ IOK (Indian Occupied Kashmir) ಎಂದು ಬಳಸುವಂತೆ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಕನ್ನಡದ ಅರ್ಥವು ಹೀಗೆ ಇರುತ್ತದೆ.

IIOJK - ಭಾರತೀಯ ಅಕ್ರಮವಾಗಿ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ

IOJK - ಭಾರತೀಯ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ

IOK - ಭಾರತೀಯ ಆಕ್ರಮಿತ ಕಾಶ್ಮೀರ

ಪಾಕ್ ಟಿವಿ ನಿರೂಪಕರಿಗೆ ಕಪ್ಪು ಪಟ್ಟಿ ಧರಿಸಲು ಸೂಚನೆ

ಪಾಕ್ ಟಿವಿ ನಿರೂಪಕರಿಗೆ ಕಪ್ಪು ಪಟ್ಟಿ ಧರಿಸಲು ಸೂಚನೆ

ಎಲ್ಲಾ ಟಿವಿ ಮತ್ತು ರೇಡಿಯೊ ಚಾನೆಲ್‌ಗಳು ಆಗಸ್ಟ್.5ರಂದು ಒಂದು ನಿಮಿಷ ಮೌನವಾದ ಕೂಡಲೇ ಪಾಕಿಸ್ತಾನ ಮತ್ತು ಎಜೆಕೆ ರಾಷ್ಟ್ರಗೀತೆಗಳನ್ನು ಪ್ರಸಾರ ಮಾಡಸಬೇಕು. ಟಿವಿ ಚಾನೆಲ್‌ಗಳು ನಿರೂಪಕರು ಒಗ್ಗಟ್ಟಾಗಿ ಕಪ್ಪು ಬ್ಯಾಂಡ್‌ಗಳನ್ನು ಧರಿಸಬೇಕೆು. ಕಾಶ್ಮೀರದಲ್ಲಿ ಭಾರತೀಯ ದೌರ್ಜನ್ಯವನ್ನು ಖಂಡಿಸಲು ಚಾನೆಲ್ ಲೋಗೊಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸಬೇಕು ಎಂದು ಪಾಕಿಸ್ತಾನ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

English summary
India Dismisses Pakistan’s New Map Claiming All Of Jammu Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X