Get Updates
Get notified of breaking news, exclusive insights, and must-see stories!

India VS Pakistan: ಯುದ್ಧಕ್ಕೆ ಸನ್ನದ್ಧವಾದ ಪಾಪಿ ಪಾಪಿಸ್ತಾನ.. ಕರಾಚಿ ಬಳಿ ಬಾಂಬ್‌ & ಮಿಸೈಲ್‌ ಪರೀಕ್ಷೆ ಶುರು!

ಭಾರತ ಅದೆಷ್ಟೇ ಶಾಂತ ರೀತಿಯಲ್ಲಿ ಇದ್ದರೂ ಪಾಪಿ ಪಾಕಿಸ್ತಾನ ಮಾತ್ರ ತನ್ನ ಊಸರವಳ್ಳಿ ಬುದ್ಧಿ ತೋರಿಸುತ್ತಾ ಕಿರಿಕ್ ಮಾಡುತ್ತಲೇ ಇದೆ. ಪದೇ ಪದೇ ಭಾರತದ ಬಗ್ಗೆ ವಿಷ ಕಾರುತ್ತಾ ಪಾಪಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲೂ ದೊಡ್ಡ ವಿಲನ್ ಆಗಿದೆ. ಇಂತಹ ಸಮಯದಲ್ಲೇ ಯುದ್ಧಕ್ಕೆ ಸನ್ನದ್ಧವಾದ ಪಾಪಿ ಪಾಪಿಸ್ತಾನ, ಕರಾಚಿ ಬಳಿ ಬಾಂಬ್‌ & ಮಿಸೈಲ್‌ ಪರೀಕ್ಷೆ ಶುರು ಮಾಡಿದೆ ಎಂಬ ಸುದ್ದಿ 3ನೇ ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸಿದೆ.

ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಹಲವು ಬಾರಿ ಮಣ್ಣು ಮುಕ್ಕಿಸಿದ್ದು, ಭಾರತದ ಜೊತೆ ಯುದ್ಧ ಮಾಡಿ ಪಾಪಿ ಪಾಕಿಸ್ತಾನ ಹೀನಾಯವಾಗಿ ಸೋತಿದೆ. 1947ರ ಸಮಯದಲ್ಲಿ ಮೊದಲ ಬಾರಿ ಪಾಪಿ ಪಾಕಿಸ್ತಾನ ಹೀನಾಯವಾಗಿ ಭಾರತದ ಎದುರು ಸೋತು ಹೋಗಿತ್ತು, ಆ ನಂತರ 1965 ರಲ್ಲಿ ಕೂಡ ಮಣ್ಣು ಮುಕ್ಕಿದ್ದ ಪಾಪಿ ಪಾಕಿಸ್ತಾನ 1971 & 1999 ಯುದ್ಧದಲ್ಲೂ ಹೀನಾಯವಾಗಿ ಸೋತು ಹೋಗಿದೆ. ಹೀಗಿದ್ದರೂ ಮತ್ತೆ ಮತ್ತೆ ತನ್ನ ಕೊಳಕು ಬುದ್ಧಿ ತೋರಿಸುತ್ತಿರುವ ಪಾಪಿ ಪಾಕ್, ಇದೀಗ ಭಾರತದ ವಿರುದ್ಧ ಮತ್ತೊಂದು ಯುದ್ಧಕ್ಕಾಗಿ ಕ್ಷಿಪಣಿಗಳ ಟೆಸ್ಟಿಂಗ್ ಆರಂಭ ಮಾಡಿದೆ.

India And Pakistan Tensions Rise Following Missile Test Near Karachi

ಪಾಕಿಸ್ತಾನ ಉಡೀಸ್ ಆಗೋದು ಗ್ಯಾರಂಟಿ!

ಭಾರತ ನಿನ್ನೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮೊದಲ ಹಂತವಾಗಿ ಪಾಕಿಸ್ತಾನಕ್ಕೆ ಈ ಸಮಯದಲ್ಲಿ ಹರಿದು ಹೋಗುತ್ತಿರುವ ನದಿ ನೀರು ನಿಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಆ ಮೂಲಕ ಪಾಕಿಸ್ತಾನಕ್ಕೆ ಮೊದಲ ಆಘಾತ ಎದುರಾಗಿದೆ. ಮುಂದುವರಿದು ಪಾಕಿಸ್ತಾನ ಪ್ರಜೆ & ರಾಜತಾಂತ್ರಿಕರನ್ನ ಕೂಡ ಹೊರಗೆ ಹಾಕಲಾಗುತ್ತಿದೆ. ಇದೇ ಸಮಯದಲ್ಲಿ ಪಾಪಿ ಪಾಕ್‌ನ ಬುದ್ಧಿ ಏನು ಅನ್ನೋದು ಬಟಾಬಯಲಾಗಿದೆ. ಭಾರತದ ವಿರುದ್ಧ ಯುದ್ಧಕ್ಕೆ ಪಾಪಿ ಪಾಕ್ ಇದೀಗ ಸಿದ್ಧತೆ ಆರಂಭಿಸಿದೆ!

ಯುದ್ಧ ಮಾಡಲು ಪಾಪಿ ಪಾಕ್ ಕುತಂತ್ರ?

ಪಹಲ್ಗಾಮ್ ಮೇಲೆ ಉಗ್ರರು ದಾಳಿ ಮಾಡಿದ ನಂತರ ಪಾಕಿಸ್ತಾನವನ್ನು ಕಟ್ಟಿಹಾಕಲು ಭಾರತ ಈಗ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಇದೇ ಸಮಯದಲ್ಲಿ ಕರಾಚಿ ಬಳಿ ಪಾಕಿಸ್ತಾನ ಕ್ಷಿಪಣಿಯ ಪರೀಕ್ಷೆ ಕೂಡ ನಡೆದಿದೆ. ಮತ್ತೊಂದು ಕಡೆ ಭಾರತ ಕೈಗೊಂಡಿರುವ ಕ್ರಮದ ವಿರುದ್ಧ ಪಾಪಿ ಪಾಕಿಸ್ತಾನ ಕುತಂತ್ರ ಶುರು ಮಾಡಿದ್ದು, ಪಾಕಿಸ್ತಾನದ ಭದ್ರತೆ & ಸೇನೆ ವಿಭಾಗದ ಅಧಿಕಾರಿಗಳು ಸಭೆ ನಡೆಸಲು ಮುಂದಾಗಿದ್ದಾರೆ. ಪಾಕಿಸ್ತಾನದ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕರು ಸಭೆ ನಡೆಸಲಿದ್ದು, ಏಪ್ರಿಲ್ 24 ಅಂದ್ರೆ ಇಂದೇ ಮೀಟಿಂಗ್ ಆಗಲಿದೆ ಎಂದು ರಕ್ಷಣಾ ಸಚಿವ ಆಸಿಫ್ ಹೇಳಿದ್ದಾರೆ. ಹೀಗಾಗಿ ಯುದ್ಧ ಗ್ಯಾರಂಟಿ ಎಂಬ ಮಾತು ಕೇಳಿ ಬರುತ್ತಿದ್ದು, ಈ ಬಾರಿ ಕೂಡ ಪಾಕಿಸ್ತಾನ ಉಡೀಸ್ ಆಗುವುದು ಗ್ಯಾರಂಟಿ ಎನ್ನಲಾಗಿದೆ.

ಒಟ್ನಲ್ಲಿ ಪಾಕಿಸ್ತಾನ ಏನೇ ಮಾಡಿದರೂ ಭಾರತದ ಸೇನಾ ಶಕ್ತಿಯ ಎದುರು ಧೂಳ್ ಧೂಳ್ ಆಗಿ ಹೋಗುವುದು ಗ್ಯಾರಂಟಿ. ಈ ಸತ್ಯ ಗೊತ್ತಿದ್ದರೂ ಪಾಕಿಸ್ತಾನ ಎಗರಾಡುತ್ತಿದ್ದು, ಇದೇ ಕಾರಣಕ್ಕೆ ಭಾರತ ಕೂಡ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಯುದ್ಧ ಶುರುವಾದರೆ ಅಲ್ಲಿಂದ 3ನೇ ಮಹಾಯುದ್ಧದ ಬರಸಿಡಿಲು ಬಡಿಯುವ ಭಯ ಕೂಡ ಕಾಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+