ಸಾಫ್ಟ್ ತೆರಿಗೆ: IBM ತಲೆಗೆ 5357 ಕೋಟಿ ತೆರಿಗೆ

2008-09ರ ಆರ್ಥಿಕ ವರ್ಷದಲ್ಲಿ ರಫ್ತು ಉತ್ತೇಜನಾ ಯೋಜನೆಯಡಿ IBM, ತನ್ನ ಆದಾಯ ಪ್ರಮಾಣವನ್ನು ಕಡಿಮೆಯಾಗಿ ತೋರಿಸಿದೆ. ಹಾಗಾಗಿ ಈ ಆದಾಯ ತೆರಿಗೆ ಬಾಕಿ ಮೊತ್ತವನ್ನು ಪಾವತಿಸುವಂತೆ ಇಲಾಖೆ ತಾಕೀತು ಮಾಡಿದೆ.
ಆದರೆ ಇದು ಇಲಾಖೆ ಮಂಡಿಸಿರುವ ಕರಡು ಲೆಕ್ಕಾಚಾರವಾಗಿದ್ದು, ತೆರಿಗೆ ಮೊತ್ತವನ್ನು ತಕ್ಷಣ ಪಾವತಿಸುವ ಅಗತ್ಯವಿಲ್ಲ. ಕಂಪನಿಯು ಸೂಕ್ತ ನ್ಯಾಯಾಧಿಕರಣದಲ್ಲಿ ಇಲಾಖೆಯ ಲೆಕ್ಕಾಚಾರವನ್ನು ಪ್ರಶ್ನಿಸಬಹುದಾಗಿದೆ ಎಂದು ತೆರಿಗೆ ಸಲಹಾಗಾರರು ಅಭಿಪ್ರಾಯಪಟ್ಟಿದ್ದಾರೆ.
'ತೆರಿಗೆ ಇಲಾಖೆಯ ಲೆಕ್ಕಾಚಾರವನ್ನು ತಮ್ಮ ಕಂಪನಿ ಸುತರಾಂ ಒಪ್ಪುವುದಿಲ್ಲ. ಅದನ್ನು ಸಮರ್ಥವಾಗಿ/ ನ್ಯಾಯೋಚಿತವಾಗಿ ಪ್ರಶ್ನಿಸಲಾಗುವುದು. ಹೋರಾಟ ಮುಂದುವರಿಸಲಿದ್ದೇವೆ' ಎಂದು IBM ವಕ್ತಾರರು ತಿಳಿಸಿದ್ದಾರೆ.
ಆದರೆ ಕಳೆದ ತಿಂಗಳು US Securities and Exchange Commission (SEC)ಗೆ ಸಲ್ಲಿಸಿರುವ ದಾಖಲೆಗಳಲ್ಲಿ '2013ರ ಸೆಪ್ಟೆಂಬರ್ 30 ರ ವೇಳೆಗೆ ಕಂಪನಿಯು 394 ದಶಲಕ್ಷ ಡಾಲರ್ (2,433 ಕೋಟಿ ರೂ) ಮುಂಗಡ ಆದಾಯ ತೆರಿಗೆ ಪಾವತಿಸಿದ್ದಾಗಿ ಹೇಳಿಕೊಂಡಿದೆ.












Click it and Unblock the Notifications