ಮುಂಬೈ, ದೆಹಲಿಯಲ್ಲಿ ನಿರಂತರ ಮಳೆ: ಕೆಲ ಪ್ರದೇಶಗಳು ಜಲಾವೃತ- ಯೆಲ್ಲೋ ಅಲರ್ಟ್ ಘೋಷಣೆ

ನವದೆಹಲಿ ಅಕ್ಟೋಬರ್ 8: ಕಳೆದ ಕೆಲ ದಿನಗಳಿಂದ ಮತ್ತೆ ದೇಶದ ಹಲವೆಡೆ ಮಳೆಯ ಅರ್ಭಟ ಜೋರಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹಲವೆಡೆ ಕಳೆದ ದಿನ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನ ಜಾಲಹಳ್ಳಿ, ಪೀಣ್ಯ, ದಾಸರಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ. ಇನ್ನೂ ಕರ್ನಾಟಕದ ರಾಯಚೂರು, ಗುಲ್ಬರ್ಗದ ಕೆಲ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಿದೆ.

ದೆಹಲಿಯ ಕೆಲವು ಭಾಗಗಳಲ್ಲಿ ರಾತ್ರಿಯಿಡೀ ಮಳೆಯಾಗಿದೆ ಮತ್ತು ಶನಿವಾರ ಬೆಳಿಗ್ಗೆ ದೆಹಲಿಯ ಬಹುತೇಕ ಎಲ್ಲಾ ಪ್ರದೇಶಗಳು ನಿರಂತರ ಮಳೆಗೆ ಸಾಕ್ಷಿಯಾಗುತ್ತಿವೆ. ಮುಂದಿನ ಮೂರು ದಿನಗಳವರೆಗೆ ದೆಹಲಿಯಲ್ಲಿ ಹಗುರದಿಂದ ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ. ಇದೇ ವೇಳೆ ಮುಂಬೈನಲ್ಲೂ ನಿರಂತರ ಮಳೆಯಾಗುತ್ತಿದೆ.

ಶನಿವಾರ ಬೆಳಗ್ಗೆ ಎಡೆಬಿಡದೆ ಸುರಿದ ತೀವ್ರ ಮಳೆಯಿಂದಾಗಿ ಮುಂಬೈನ ಹಲವು ಭಾಗಗಳು ಜಲಾವೃತಗೊಂಡಿವೆ. ಮುಂದಿನ 24 ಗಂಟೆಗಳಲ್ಲಿ ನಗರ ಮತ್ತು ಉಪನಗರಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ತೀವ್ರ ಮಳೆಯಾಗಲಿದ್ದು ಹಲವೆಡೆ ಮೋಡ ಕವಿದ ವಾತಾವರಣವಿರುತ್ತದೆ" ಎಂದು ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ಬೆಳಿಗ್ಗೆ ತಿಳಿಸಿದೆ. ಇದರೊಂದಿಗೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮುಂಬೈನಲ್ಲಿ ಇಂದು ಇಡೀ ದಿನ ಮಳೆ

ಮುಂಬೈನಲ್ಲಿ ಇಂದು ಇಡೀ ದಿನ ಮಳೆ

ಮುಂಬೈನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಎಂಡಿ ಶನಿವಾರ ಹಳದಿ ಅಲರ್ಟ್ ಘೋಷಿಸಿದೆ. ಮುಂಬೈನಲ್ಲಿಂದು ಇಡೀ ದಿನ ಗುಡುಗು, ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ವರದಿ ಪ್ರಕಾರ, ಸತತ ತೀವ್ರ ಮಳೆಯಿಂದಾಗಿ ಮುಂಬೈನ ಹಲವು ಭಾಗಗಳು ಜಲಾವೃತವಾಗಿವೆ. ಮುಂಬೈನಲ್ಲಿ ಶುಕ್ರವಾರದಿಂದ ಮಳೆ ಸುರಿಯುತ್ತಿದೆ. ಕಳೆದ ಎರಡು ವಾರಗಳಿಂದ ಮುಂಬೈನಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ ಎಂದು ಐಎಂಡಿ ತಿಳಿಸಿದೆ.

ಶುಕ್ರವಾರ ಸಂಜೆ 5:30 ರವರೆಗೆ ಕೊಲಾಬಾ ಹವಾಮಾನ ವೀಕ್ಷಣಾಲಯದಲ್ಲಿ 22.4 ಮಿಮೀ (ಮಿಮೀ) ಮತ್ತು ಸಾಂಟಾ ಕ್ರೂಜ್ ವೀಕ್ಷಣಾಲಯದಲ್ಲಿ 32.6 ಮಿಮೀ ಮಳೆ ದಾಖಲಾಗಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನರಿಮನ್ ಪಾಯಿಂಟ್, ವಿಖ್ರೋಲಿ ಮತ್ತು ವರ್ಸೋವಾದಲ್ಲಿನ ತನ್ನ ವೀಕ್ಷಣಾಲಯಗಳಲ್ಲಿ 60 ಮಿಮೀ ಮಳೆಯನ್ನು ದಾಖಲಿಸಿದೆ.

ದೆಹಲಿಯಲ್ಲಿ ನಿರಂತರ ಮಳೆಗೆ ಕೆಲ ಪ್ರದೇಶಗಳು ಜಲಾವೃತ

ದೆಹಲಿಯಲ್ಲಿ ನಿರಂತರ ಮಳೆಗೆ ಕೆಲ ಪ್ರದೇಶಗಳು ಜಲಾವೃತ

ದೆಹಲಿಯ ಕೆಲವು ಭಾಗಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಮತ್ತು ಶನಿವಾರ ಬೆಳಿಗ್ಗೆ ವರುಣ ಅರ್ಭಟಿಸಿದ್ದಾನೆ. ದೆಹಲಿ-ನೋಯ್ಡಾದಲ್ಲಿ ನಿರಂತರ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಹಲವೆಡೆ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿದೆ. ದೆಹಲಿಯಲ್ಲಿ ಮಳೆಯಿಂದಾಗಿ ತಾಪಮಾನ ಕಡಿಮೆಯಾಗಿದೆ ಮತ್ತು ಗಾಳಿಯ ಗುಣಮಟ್ಟ ಸುಧಾರಿಸಿದೆ. ಮುಂದಿನ ಮೂರು ದಿನಗಳ ಕಾಲ ದೆಹಲಿಯಲ್ಲಿ ಸಾಧಾರಣ ಮಳೆ ಮುಂದುವರಿಯಬಹುದು ಎಂದು ಐಎಂಡಿ ಹೇಳಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 27.1 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಎರಡು ಮೂರು ದಿನಗಳವರೆಗೆ ದೆಹಲಿಯ ಹಲವು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.

ಎಲ್ಲೆಲ್ಲಿ ಮಳೆ ಸಾಧ್ಯತೆ

ಎಲ್ಲೆಲ್ಲಿ ಮಳೆ ಸಾಧ್ಯತೆ

ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. IMD ಪ್ರಕಾರ, ಮುಂದಿನ ನಾಲ್ಕೈದು ದಿನಗಳಲ್ಲಿ ಉತ್ತರಾಖಂಡ, ಉತ್ತರ ಪ್ರದೇಶ, ಪಶ್ಚಿಮ ಮಧ್ಯಪ್ರದೇಶ ಮತ್ತು ಪೂರ್ವ ರಾಜಸ್ಥಾನದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ತಮಿಳುನಾಡು, ಕರ್ನಾಟಕ, ಕರಾವಳಿ ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಐಎಂಡಿ ಭವಿಷ್ಯ

ಐಎಂಡಿ ಭವಿಷ್ಯ

ಇನ್ನೂ ಗುಜರಾತ್‌ನಲ್ಲಿ ಅಕ್ಟೋಬರ್ 08 ರಿಂದ 10 ನೇ ತಾರೀಖಿನಂದು ಗುಡುಗು ಮಿಂಚು ಸಹಿತ ಪ್ರತ್ಯೇಕವಾದ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಮಧ್ಯ ಮಹಾರಾಷ್ಟ್ರ ಮತ್ತು ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ 08 ರಿಂದ 09 ರಿಂದ; 8 ಮತ್ತು 9 ರಂದು ಮರಾಠವಾಡ; 08 ರಂದು ಕೊಂಕಣ ಮತ್ತು ಗೋವಾ ಮತ್ತು ತೆಲಂಗಾಣ; ರಾಯಲಸೀಮಾ ಮತ್ತು ತಮಿಳುನಾಡು, ಪುದುಚೇರಿ ಕಾರೈಕಲ್ ನಲ್ಲಿ 08-11 ರಂದು; ಉತ್ತರ ಕರ್ನಾಟಕ, 08, 09 ಮತ್ತು 10 ನೇ ತಾರೀಖಿನಂದು; ದಕ್ಷಿಣ ಕರ್ನಾಟಕ 9 ರಿಂದ 11 ನೇ ತಾರೀಖಿನಂದು; ಕೇರಳ ಅಕ್ಟೋಬರ್ 9 ಮತ್ತು 10 ತಾರೀಖಿನಂದು ಮಳೆ ಬೀಳಲಿದೆ" ಎಂದು IMD ಹೇಳಿದೆ. ಇದರಿಂದ ಮುಂಬೈನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಆಗಲಿದೆ ಎಂದು IMD ಭವಿಷ್ಯ ನುಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+