24 ಗಂಟೆಯಲ್ಲಿ ಉ.ಪ್ರ 6 ಎನ್ ಕೌಂಟರ್ ನಲ್ಲಿ ಇಬ್ಬರು ಸಾವು

ಲಖನೌ, ಮಾರ್ಚ್ 25: ಇಪ್ಪತ್ನಾಲ್ಕು ಗಂಟೆಯ ಅವಧಿಯಲ್ಲಿಪಶ್ಚಿಮ ಉತ್ತರಪ್ರದೇಶ ಭಾಗದಲ್ಲಿ ನಡೆದ 6 ಎನ್ ಕೌಂಟರ್ ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನೋಯ್ಡಾದಲ್ಲಿ ಒಬ್ಬ ಹಾಗೂ ಸಹರಾನ್ ಪುರ್ ನಲ್ಲಿ ಮೃತಪಟ್ಟಿದ್ದು, ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಐವರು ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾರೆ.

ನೋಯ್ಡಾ ಹಾಗೂ ದೆಹಲಿಯಲ್ಲಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಶ್ರವಣ್ ಚೌಧರಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆತನನ್ನು ಬಂಧಿಸಿದರೆ ಐವತ್ತು ಸಾವಿರ ಬಹುಮಾನ ಇತ್ತು. AK 47 ಮತ್ತು ಸಿಂಗಲ್ ಬ್ಯಾರಲ್ ರೈಫಲ್ ಆತನ ಬಳಿ ಪತ್ತೆಯಾಗಿದೆ.

ದಾದ್ರಿಯಲ್ಲಿ ನಡೆದ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ಜಿತೇಂದರ್ ಎಂಬಾತನನ್ನು ಬಂಧಿಸಲಾಗಿದೆ. ಆತನ ಬಂಧನಕ್ಕೆ ಇಪ್ಪತ್ತೈದು ಸಾವಿರ ಬಹುಮಾನ ಇತ್ತು. ಇನ್ನು ಸಹರಾನ್ ಪುರ್ ನಲ್ಲಿ ಅಹ್ಸಾನ್ ಎಂಬಾತ ಎನ್ ಕೌಂಟರ್ ಆಗಿದ್ದಾನೆ. ಪೊಲೀಸರ ಜತೆಗೆ ಆತ ಗುಂಡಿನ ಚಕಮಕಿ ನಡೆಸಿದ್ದಾನೆ.

In Six Encounters, Two Shot Dead In UP Within 24 Hours

ರಾಹುಲ್, ಸೋನು, ರಹೀಸ್, ಜಾವೇದ್ ಎಂಬ ಅಪರಾಧ ಹಿನ್ನೆಲೆಯವರಿಗೆ ಗುಂಡೇಟು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಕಾರ್ಯಾಚರಣೆಗಳ ವೇಳೆ ಪೊಲೀಸರಾದ ಸಚಿನ್, ಶೊವೀರ್ ಹಾಗೂ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಳೆದ ಫೆಬ್ರವರಿಯಲ್ಲಿ ಉತ್ತರಪ್ರದೇಶ ಪೊಲೀಸರು ನಲವತ್ತೆಂಟು ಗಂಟೆ ಅವಧಿಯಲ್ಲಿ ಹದಿನೆಂಟು ಎನ್ ಕೌಂಟರ್ ಮಾಡಿದ್ದರು. ಇಪ್ಪತ್ತೈದು ಮಂದಿಯನ್ನು ಬಂಧಿಸಿದ್ದರು. ಒಬ್ಬ ಮೃತಪಟ್ಟಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+