• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಯೋಗ ದಿನಾಚರಣೆಗೆ ಬಿರುಸಿನ ಅಭ್ಯಾಸ

By Mahesh
|

ನವದೆಹಲಿ, ಜೂ.15: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೆಹಲಿಯ ರಾಜಪಥದಲ್ಲಿ ಬಿರುಸಿನ ಅಭ್ಯಾಸ ಜಾರಿಯಲ್ಲಿದೆ. ಮೋದಿ ಅವರ ಕನಸಿಗೆ ವಿಶ್ವ ಮಾನ್ಯತೆ ಸಿಕ್ಕಿರುವುದರಿಂದ ಜೂ.21ರಂದು ಬೃಹತ್ ಕಾರ್ಯಕ್ರಮ ನಡೆಸಲು ಎನ್ ಡಿಎ ಸರ್ಕಾರ ಸಜ್ಜಾಗಿದೆ.

ವಿಶ್ವದೆಲ್ಲೆಡೆ ಸುಮಾರು 190ಕ್ಕೂ ಅಧಿಕ ದೇಶಗಳ 250 ನಗರಗಳಲ್ಲಿ ಯೋಗ ದಿನಾಚರಣೆ ಆಯೋಜನೆಗೊಂಡಿದೆ.ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮಾದರಿಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ದೂರದರ್ಶನ ಕೂಡಾ ಸಿದ್ಧವಾಗಿದೆ.

ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮದ ಮಾದರಿಯಲ್ಲೇ ಮುಖ್ಯವೇದಿಕೆಯ ಕಾರ್ಯಕ್ರಮವನ್ನು ಸುಮಾರು 8 ಕ್ಯಾಮರಾಗಳು ರೆಕಾರ್ಡ್ ಮಾಡಲಿವೆ.

ಕಾರ್ಯಕ್ರಮದ ಪ್ರಸಾರಕ್ಕಾಗಿ ಆಯುಷ್ ಇಲಾಖೆ ಎಲ್.ಇ.ಡಿ ಸ್ಕ್ರೀನ್ ಗಳ ಸೌಲಭ್ಯ ಒದಗಿಸಲಿದೆ. ದೃಶ್ಯ ಮಾಧ್ಯಮದೊಂದಿಗೆ ಆಲ್ ಇಂಡಿಯಾ ರೇಡಿಯೋ ಸಹ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

 ಸಾಮೂಹಿಕ ಯೋಗಾಭ್ಯಾಸ

ಸಾಮೂಹಿಕ ಯೋಗಾಭ್ಯಾಸ

ಜೂ.21ರಂದು ಮೋದಿ ಅವರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ಪ್ರಧಾನಿ ಸಚಿವಾಲಯ ಹೇಳಿದೆ.ಯೋಗ ಗುರು ಬಾಬಾ ರಾಮ್ ದೇವ್ ಅವರು ಹೈಲೈಟ್ ಆಗುವ ಸಾಧ್ಯತೆ ನಿಚ್ಚಳವಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನ'

ಅಂತಾರಾಷ್ಟ್ರೀಯ ಯೋಗ ದಿನ'

ಜೂನ್ 21ರ ದಿನವನ್ನು `ಅಂತಾರಾಷ್ಟ್ರೀಯ ಯೋಗ ದಿನ'ವೆಂದು ವಿಶ್ವಸಂಸ್ಥೆ ಘೋಷಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಮೋದಿ, ಆ ಕ್ಷಣವನ್ನು ಐತಿಹಾಸಿಕವನ್ನಾಗಿಸಲು ನಿರ್ಧರಿಸಿದ್ದಾರೆ.

ಚೀನಾದಲ್ಲಿ ಯೋಗ ದಿನಾಚರಣೆ

ಚೀನಾದಲ್ಲಿ ಯೋಗ ದಿನಾಚರಣೆ

ಚೀನಾದಲ್ಲಿ ಯೋಗ ದಿನಾಚರಣೆ ಯುನಾನ್ ಮಿನ್ಜು ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಚಿತ್ರದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಹಾಗೂ ಯುನಾನ್ ಪ್ರಾಂತ್ಯದ ಉಪ ರಾಜ್ಯಪಾಲ ಡಿಂಗ್ ಶಯೊಕ್ಸಿಂಗ್ ರನ್ನು ಕಾಣಬಹುದು.

ನವದೆಹಲಿಯಲ್ಲಿ ಪೂರ್ವ ತಯಾರಿ ಅಭ್ಯಾಸ

ನವದೆಹಲಿಯಲ್ಲಿ ಪೂರ್ವ ತಯಾರಿ ಅಭ್ಯಾಸ

ನವದೆಹಲಿಯ ಜವಹಾರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಬಾಬಾ ರಾಮದೇವ್ ನೇತೃತ್ವದಲ್ಲಿ ಯೋಗ ಅಭ್ಯಾಸ ಜಾರಿಯಲ್ಲಿದೆ.

ಮಳೆಯ ನಡುವೆ ಯೋಗಾಭ್ಯಾಸ ನಿರಂತರ

ಮಳೆಯ ನಡುವೆ ಯೋಗಾಭ್ಯಾಸ ನಿರಂತರ

ಜವಹಾರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಮಳೆಯ ನಡುವೆ ಯೋಗಾಭ್ಯಾಸ ನಿರಂತರವಾಗಿ ಸಾಗಿದೆ

ಜವಹಾರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ

ಜವಹಾರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ

ದೆಹಲಿ ಜವಹಾರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಯೋಗ ಅಭ್ಯಾಸ ಚಿತ್ರಗಳು

ಬೆಂಗಳೂರಿನಲ್ಲಿ ಯೋಗ ಉತ್ಸಾಹಿಗಳು

ಬೆಂಗಳೂರಿನಲ್ಲಿ ಯೋಗ ಉತ್ಸಾಹಿಗಳು

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಯೋಗ ಉತ್ಸಾಹಿಗಳು

 ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು, ತಂತ್ರಜ್ಞರು

ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು, ತಂತ್ರಜ್ಞರು

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ರವಿಶಂಕರ್ ಗುರೂಜಿ ಅವರಿಂದ ಪ್ರೇರಿತರಾಗಿ ಅನೇಕ ವಿದ್ಯಾರ್ಥಿಗಳು, ಖಾಸಗಿ ಸಂಸ್ಥೆಯ ತಂತ್ರಜ್ಞರು ಯೋಗ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಚೀನಾದಲ್ಲಿ ಯೋಗ ಅಭ್ಯಾಸ

ಚೀನಾದಲ್ಲಿ ಯೋಗ ಅಭ್ಯಾಸ

ಚೀನಾದ ಶಾಂಘೈ ನಗರದಲ್ಲಿ ಯೋಗ ಅಭ್ಯಾಸ ನಿರತ ಉತ್ಸಾಹಿಗಳು

ಮುಂಜಾನೆ ವಿಹಾರಿಗಳಿಂದ ಯೋಗಾಭ್ಯಾಸ

ಮುಂಜಾನೆ ವಿಹಾರಿಗಳಿಂದ ಯೋಗಾಭ್ಯಾಸ

ದೆಹಲಿಯಲ್ಲಿ ಮುಂಜಾನೆ ವಿಹಾರಿಗಳಿಂದ ಯೋಗಾಭ್ಯಾಸ

ಆರ್ಟ್ ಆಫ್ ಲಿವಿಂಗ್ ಆಯೋಜನೆ

ಆರ್ಟ್ ಆಫ್ ಲಿವಿಂಗ್ ಆಯೋಜನೆ

ಬೆಂಗಳೂರು ಸೇರಿದಂತೆ ಸುಮಾರು 100 ನಗರಗಳಲ್ಲಿ ಯೋಗ ದಿನಾಚರಣೆಯ ಆಯೋಜನೆ ಹೊಣೆಯನ್ನು ಆರ್ಟ್ ಆಫ್ ಲಿವಿಂಗ್ ಹೊತ್ತುಕೊಂಡಿದೆ.

ಸೋನಿಪಟ್ ನಲ್ಲಿ ಸರ್ಕಾರಿ ಸಿಬ್ಬಂದಿಗಳು

ಸೋನಿಪಟ್ ನಲ್ಲಿ ಸರ್ಕಾರಿ ಸಿಬ್ಬಂದಿಗಳು

ಸೋನಿಪಟ್ ನಲ್ಲಿ ಸರ್ಕಾರಿ ಸಿಬ್ಬಂದಿಗಳು ಯೋಗಾಭ್ಯಾಸ ನಿರತರಾಗಿದ್ದಾರೆ. ಸರ್ಕಾರಿ ನೌಕರರು ಯೋಗಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆದೇಶ ಹೊರಡಿಸಲಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಬೇಕಾದರೆ ಸರ್ಕಾರಿ ನೌಕರರ ಕೊಡುಗೆ ಬೇಕಾಗುತ್ತದೆ. ಸುಮಾರು 48 ಲಕ್ಷ ಉದ್ಯೋಗಿಗಳು ಯೋಗ ನಿರತರಾದರೆ ಗಿನ್ನಿಸ್ ದಾಖಲೆ ನಿರ್ಮಾಣವಾಗುತ್ತದೆ.

ಅಮೆರಿಕದಲ್ಲೂ ಯೋಗದ ಬಗ್ಗೆ ಆಸಕ್ತಿ

ಅಮೆರಿಕದಲ್ಲೂ ಯೋಗದ ಬಗ್ಗೆ ಆಸಕ್ತಿ

ಅಮೆರಿಕನ್ನರಿಗೆ ಯೋಗದ ಬಗ್ಗೆ ಅಪಾರ ಆಸಕ್ತಿ ಇದ್ದು, ಈ ಬಾರಿ ವಿಶ್ವ ಯೋಗ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಚಿತ್ರದಲ್ಲಿ ಟೆನ್ನಿಸಿ ಪ್ರಾಂತ್ಯದಲ್ಲಿ ಯೋಗ ನಿರತ ಜನತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Public broadcaster Doordarshan has readied plans for a Republic Day-like coverage of International Yoga Day event to be held at Rajpath where Prime Minister Narendra Modi will also be present.The International Yoga Day will be observed in over 250 cities in 190 countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more