ಚಿತ್ರಗಳು : ಸಂಸತ್ ಭವನದಲ್ಲಿ ಅಮಿತ್ ಶಾಗೆ ಭವ್ಯ ಸ್ವಾಗತ

Posted By: Gururaj
Subscribe to Oneindia Kannada

ನವದೆಹಲಿ, ಅ.10 : ರಾಜ್ಯಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ ದೊರೆಯಿತು. ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾಗೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಿದರು.

ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಗುಜರಾತ್ ನಿಂದ ಅಮಿತ್ ಶಾ ಮತ್ತು ಸಚಿವೆ ಸ್ಮೃತಿ ಇರಾನಿ ಜಯಗಳಿಸಿದ್ದರು. ಗುರುವಾರ ಸಂಸತ್ ಭವನದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅಮಿತ್ ಶಾ ಅವರನ್ನು ಸನ್ಮಾನಿಸಲಾಯಿತು.

ಅಹ್ಮದ್ ಪಟೇಲ್ ಗೆಲುವು ಪ್ರಶ್ನಿಸಿ ನ್ಯಾಯಲಯಕ್ಕೆ ಬಿಜೆಪಿ ದೂರು

ಗುರುವಾರ ಸಂಸತ್ ಕಲಾಪ ಆರಂಭಕ್ಕೂ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಿತು. ಸಂಸತ್ ಗೆ ಆಗಮಿಸಿದ ಅಮಿತ್ ಶಾ, ಸ್ಮೃತಿ ಇರಾನಿ ಅವರಿಗೆ ಹಲವು ಸಚಿವರು ಅಭಿನಂದನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹಲವು ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಗುಜರಾತ್ ರಾಜ್ಯಸಭೆ ಚುನಾವಣೆ,ಕಾಂಗ್ರೆಸ್ ನ ಅಹ್ಮದ್ ಪಟೇಲ್ ಗೆ ಗೆಲುವು

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆದ ಚುನಾವಣೆ ದೇಶದ ಗಮನ ಸೆಳೆದಿತ್ತು. ಅಮಿತ್ ಶಾ, ಸ್ಮ್ಮೃತಿ ಇರಾನಿ, ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸ್ಪರ್ಧೆ ಕುತೂಹಲ ಮೂಡಿಸಿತ್ತು. ಅಮಿತ್ ಶಾ, ಸ್ಮೃತಿ ಇರಾನಿ ಮತ್ತು ಅಹಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅಮಿತ್ ಶಾಗೆ ಸ್ವಾಗತ ಚಿತ್ರಗಳಲ್ಲಿ ನೋಡಿ...[ಪಿಟಿಐ ಚಿತ್ರಗಳು]

ಸಂಸತ್ ಗೆ ಆಗಮಿಸಿದ ಅಮಿತ್ ಶಾ

ಸಂಸತ್ ಗೆ ಆಗಮಿಸಿದ ಅಮಿತ್ ಶಾ

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುರುವಾರ ಸಂಸತ್‌ಗೆ ಆಗಮಿಸಿದರು. ಈ ಸಂರ್ಭದಲ್ಲಿ ಹಲವು ಸಚಿವರು ಅವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಧಾನಿ ಮೋದಿಯಿಂದ ಸನ್ಮಾನ

ಪ್ರಧಾನಿ ಮೋದಿಯಿಂದ ಸನ್ಮಾನ

ಸಂಸತ್ ಭವನದಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಸನ್ಮಾನ ಮಾಡಿದರು.

ಸಂಸತ್‌ಗೆ ಆಗಮಿಸಿದ ಸ್ಮೃತಿ ಇರಾನಿ

ಸಂಸತ್‌ಗೆ ಆಗಮಿಸಿದ ಸ್ಮೃತಿ ಇರಾನಿ

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಗೊಂಡ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಇಂದು ಸಂಸತ್ ಗೆ ಆಗಮಿಸಿದಾಗ ಹಲವು ಸಚಿವರು ಅಭಿನಂದನೆ ಸಲ್ಲಿಸಿದರು.

ಅಮಿತ್ ಶಾ ಅಭಿನಂದಿಸಿದ ನಾಯಕರು

ಅಮಿತ್ ಶಾ ಅಭಿನಂದಿಸಿದ ನಾಯಕರು

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಅಮಿತ್ ಶಾ ಅವರನ್ನು ಎಲ್ಲಾ ನಾಯಕರು ಅಭಿನಂದಿಸಿದರು.

Amit Shah Says, "Karnataka Is Our Next Target" To Win The Election | Oneindia Kannada
ಮೂರು ಸ್ಥಾನಗಳಿಗೆ ಚುನಾವಣೆ

ಮೂರು ಸ್ಥಾನಗಳಿಗೆ ಚುನಾವಣೆ

ಅಮಿತ್ ಶಾ, ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್ ನ ಅಹಮದ್ ಪಟೇಲ್ ಆಯ್ಕೆಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In pics : Prime Minister Narendra Modi felicitates BJP President Amit Shah on his election as Rajya Sabha member, during the BJP parliamentary party meeting in New Delhi on August 10, 2017.
Please Wait while comments are loading...