ಚಿತ್ರಗಳು: ಸಾವಿತ್ರಿ ನದಿ ಸೇತುವೆ ಕೊಚ್ಚಿಹೋದ ನಂತರ

Subscribe to Oneindia Kannada

ಮುಂಬೈ, ಆಗಸ್ಟ್ 12: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ಬಳಿ ಮಹಾರಾಷ್ಟ್ರ-ಗೋವಾ ಹೆದ್ದಾರಿ ಸೇತುವೆ ಕೊಚ್ಚಿಹೋದ ಪರಿಣಾಮ ನಾಪತ್ತೆಯಾಗಿದ್ದ ಎರಡು ಬಸ್ಸಿನ ಅವಶೇಷಗಳು ಪತ್ತೆಯಾಗಿವೆ.

ನಿಸರ್ಗದ ಮುನಿಸಿಗೆ ತುತ್ತಾಗಿ ನಾಪತ್ತೆಯಾದವರಲ್ಲಿ ಹಲವರ ಶವ ಇನ್ನು ಸಿಕ್ಕಿಲ್ಲ. ನೌಕಾ ಪಡೆ ಬಸ್ಸಿನ ಅವಶೇಷಗಳನ್ನು ನದಿಯ ಆಳದಲ್ಲಿ ಪತ್ತೆ ಮಾಡಿ ದಡಕ್ಕೆ ತಂದಿವೆ.[ಸಾವಿತ್ರಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಸೇತುವೆ]

ನದಿಯಲ್ಲಿ ಶೋಧ ಕಾರ್ಯ ಇನ್ನು ಮುಂದುವರಿದಿದೆ.ಕಳೆದ ಬುಧವಾರ(ಆಗಸ್ಟ್ 3) ಮುಂಜಾನೆ 2 ಗಂಟೆ ಸುಮಾರಿಗೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡವಾಗಿದ್ದ ಬ್ರಿಟಿಷರ ಕಾಲದ ಸೇತುವೆ ಭಾರೀ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋಗಿತ್ತು. ಸೇನಾಪಡೆಯ ಕಾರ್ಯಾಚರಣೆಯ ಚಿತ್ರಗಳನ್ನು ನೋಡಿಕೊಂಡು ಬನ್ನಿ...

ನಾಪತ್ತೆಯಾಗಿದ್ದ ಬಸ್

ನಾಪತ್ತೆಯಾಗಿದ್ದ ಬಸ್

ಸಾವಿತ್ರಿ ನದಿ ಸೇತುಕೆ ಕೊಚ್ಚಿಹೋದ ಪರಿಣಾಮ ನಾಪತ್ತೆಯಾಗಿದ್ದ ಬಸ್ ನ ಅವಶೇಷ.

ನದಿಯಾಳದಲ್ಲಿ ಪತ್ತೆ

ನದಿಯಾಳದಲ್ಲಿ ಪತ್ತೆ

ಸೇತುವೆ ಕುಸಿದಲ್ಲಿಂದ ಸುಮಾರು 170ರಿಂದ 200 ಮೀಟರ್‌ ದೂರದಲ್ಲಿಯೇ ಬಸ್ ಗಳ ಅವಶೇಷ ಪತ್ತೆಯಾಗಿದೆ.

ನದಿಯಲ್ಲಿ ಕಾರ್ಯಾಚರಣೆ

ನದಿಯಲ್ಲಿ ಕಾರ್ಯಾಚರಣೆ

ನಾಪತ್ತೆಯಾದ ಬಸ್ ಗಳ ಶೋಧಮಾಡಲು ನೌಕಾಸೇನೆ ಸಿಬ್ಬಂದಿ ಸಜ್ಜಾಗಿರುವುದು.

ಹುಡುಕಾಟಕ್ಕೆ ಹೊರಟರು

ಹುಡುಕಾಟಕ್ಕೆ ಹೊರಟರು

ಧಾರಾಕಾರ ಮಳೆ ಕಡಿಮೆಯಾಗಿದ್ದು ಯೋಧರು ಉಳಿದ ಶವಗಳ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಶೇ. 80 ಸೇತುವೆ ಧ್ವಂಸ

ಶೇ. 80 ಸೇತುವೆ ಧ್ವಂಸ

ಸೇತುವೆಯ ಸುಮಾರರು ಶೇ.80ರಷ್ಟು ಭಾಗ ನೀರಿನಲ್ಲಿ ಕೊಚ್ಚಿ ಹೋಗಿತ್ತು.

8 ದಿನಗಳ ಕಾರ್ಯಾಚರಣೆ

8 ದಿನಗಳ ಕಾರ್ಯಾಚರಣೆ

ನಿರಂತರ ಎಂಟು ದಿನಗಳ ಕಾರ್ಯಾಚರಣೆ ನಂತರ ಕಣ್ಮರೆಯಾಗಿದ್ದ ಎರಡು ಬಸ್ ಗಳ ಅವಶೇಷ ಪತ್ತೆಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In Pics: More than a week after the bridge at Mahad on the Mumbai-Goa highway collapsed, the Navy's divers have located the wreckages of both the buses. Two wreckages that seem to be parts of buses and were found approximately 170 and 200 meters from the collapsed bridge, in Savitri river.
Please Wait while comments are loading...