ಲಾಕ್ ಡೌನ್; ಬೆರಗುಗೊಳಿಸುವ 5 ಚಿತ್ರಗಳು
ನವದೆಹಲಿ, ಏಪ್ರಿಲ್ 26 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ 2ನೇ ಹಂತದ ಲಾಕ್ ಡೌನ್ ಮುಂದಿನ ಭಾನುವಾರ ಅಂತ್ಯಗೊಳ್ಳಲಿದೆ. ಲಾಕ್ ಡೌನ್ ದೇಶದ ಚಿತ್ರಣವನ್ನು ಬದಲಿಸಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಹೇಳಿದಂತೆ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಉಪಯೋಗ ಹೆಚ್ಚಿದೆ. ಲಾಕ್ ಡೌನ್ ಮುಂದುವರೆಯಲಿದೆಯೇ? ಎಂಬುದು ಸದ್ಯದ ಪ್ರಶ್ನೆ.
ಲಾಕ್ ಡೌನ್‌ನಿಂದಾಗಿ ಸಾರಿಗೆ ವ್ಯವಸ್ಥೆ ಬಂದ್ ಆಗಿದೆ. ಅಗತ್ಯ ವಸ್ತುಗಳ ಸರಬರಾಜು ಆಗುತ್ತಿದೆ. ಜನರು ಮನೆಯಲ್ಲಿಯೇ ಇದ್ದಾರೆ. ಸಂಘ ಸಂಸ್ಥೆಗಳು, ಪೊಲೀಸರು, ಮಾಧ್ಯಮದವರು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಕರ್ತವ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಲಾಕ್ ಡೌನ್ ವೇಳೆ ದೇಶದ ವಿವಿಧ ಭಾಗದಲ್ಲಿ ಹಲವಾರು ಚಿತ್ರಣಗಳು ಕಂಡು ಬರುತ್ತದೆ. ಪಿಟಿಐ ಛಾಯಾಗ್ರಾಹಕರು ಸೆರೆ ಹಿಡಿದ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ...

ನಾಯಿಗಳಿಗೆ ಆಹಾರ
ಲಾಕ್ ಡೌನ್ ಸಂದರ್ಭದಲ್ಲಿ ಬೀದಿ ನಾಯಿಗಳು ಸಂಕಷ್ಟಕ್ಕೆ ಸಿಲುಕಿವೆ. ಕೋಲ್ಕತ್ತಾದಲ್ಲಿ ಮಹಿಳೆಯೊಬ್ಬರು ನಾಯಿಗಳಿಗೆ ಆಹಾರ ಹಾಕುವಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.

ಬದುಕಿನ ದೋಣಿ ಪಯಣ
ತರಕಾರಿ ವ್ಯಾಪಾರಿಗಳು ದೋಣಿಯಲ್ಲಿ ಬುಟ್ಟಿಗಳನ್ನು ಇಟ್ಟುಕೊಂಡು ಪಾಟ್ನಾದಲ್ಲಿ ಗಂಗಾ ನದಿ ದಾಟುವಾಗ ಕಂಡಿದ್ದು ಹೀಗೆ.

ಹೊತ್ತಿನ ಊಟಕ್ಕಾಗಿ ಕಸರತ್ತು
ಸಂಘ ಸಂಸ್ಥೆಗಳು ವಿತರಣೆ ಮಾಡುವ ಆಹಾರವನ್ನು ಪಡೆಯಲು ಜನರು ಪಾತ್ರೆಗಳನ್ನು ಇಟ್ಟಿರುವ ದೃಶ್ಯ ಕಂಡು ಬಂದಿದ್ದು ನೋಯ್ಡಾದಲ್ಲಿ.

ಒಂದು ಹೊತ್ತಿನ ಊಟ ಸಿಕ್ಕಿತು
ಲಾಕ್ ಡೌನ್ ಸಂದರ್ಭದಲ್ಲಿ ಮಂಗವೊಂದು ಜನರು ನೀಡಿದ ಆಹಾರ ತೆಗೆದುಕೊಂಡು ಹೋಗುವಾಗ ಕಂಡಿದ್ದು ಹೀಗೆ.

ಕೆಲಸದ ಮಧ್ಯೆ ಬಿಡುವು
ಲಕ್ನೋದಲ್ಲಿ ಕಾರ್ಮಿಕರು ಗೂಡ್ಸ್ ರೈಲಿನಡಿ ಊಟಕ್ಕೆ ಕುಳಿತಾಗ ಕಂಡಿದ್ದು ಹೀಗೆ. ಅಗತ್ಯ ವಸ್ತುಗಳ ಸರಬರಾಜಿಗಾಗಿ ಗೂಡ್ಸ್ ರೈಲುಗಳನ್ನು ಓಡಿಸಲಾಗುತ್ತಿದೆ.












Click it and Unblock the Notifications