ಎಲ್ಲಾ ಶಿವಮಯವೋ ಜಗವೆಲ್ಲ ಶಿವಮಯವೋ
ಬೆಂಗಳೂರು, ಫೆ.27: ಮಾಘ ಕೃಷ್ಣ ಚತುರ್ದಶಿ ದಿನವಾದ ಗುರುವಾರ(ಫೆ.27) ದೇಶದೆಲ್ಲೆಡೆ ಮಹಾ ಶಿವರಾತ್ರಿ ಸಂಭ್ರಮಾಚರಣೆ ಕಾಣಬಹುದಾಗಿದೆ. ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ವೇದ ಮಂತ್ರ ಘೋಷ, ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಆಯೋಜನೆಗೊಂಡಿದೆ.
ಮಹಾ ಶಿವರಾತ್ರಿ ಹಬ್ಬದಲ್ಲಿ ಪ್ರಳಯಕಾಲಕನಾದ ಪರಶಿವನನ್ನು ಅನನ್ಯ ಶ್ರದ್ಧಾ ಮತ್ತು ಭಕ್ತಿಯಿಂದ ದಿನದ ನಾಲ್ಕು ಯಾಮಗಳಲ್ಲಿ ಪೂಜಿಸಿದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಈ ದಿನ ಶಿವನಿಗೆ ಅತ್ಯಂತ ಇಷ್ಟವಾದ ಬಿಲ್ವಪತ್ರೆಯನ್ನು ಅರ್ಪಿಸಿ, ಉಪವಾಸವನ್ನೂ ಆಚರಿಸಲಾಗುತ್ತದೆ. ಭಕ್ತಾದಿಗಳು ರಾತ್ರಿ ಇಡೀ ಎಚ್ಚರವಿದ್ದು ಶಿವಜಪ, ಭಜನೆಗಳನ್ನು ಮಾಡುತ್ತಾ ಆ ಪರಶಿವನ ಕೃಪೆಗೆ ಪಾತ್ರರಾಗುತ್ತಾರೆ. [ಶಿವನನ್ನು ಲಿಂಗರೂಪದಲ್ಲಿ ಏಕೆ ಪೂಜಿಸುತ್ತಾರೆ?]
ಪ್ರತಿ ತಿಂಗಳೂ ಚತುರ್ದಶಿಯಂದು ಮಾಸ ಶಿವರಾತ್ರಿ ಆಚರಿಸಲಾಗುತ್ತದೆ. ಆದರೆ, ಮಾಘ ಕೃಷ್ಣ ಚತುರ್ದಶಿಯಂದು ಮಹಾಶಿವರಾತ್ರಿ. ಮಹಾಶಿವರಾತ್ರಿಯಂದು ಲಯಕರ್ತನಾದ ಶಿವ ಹುಟ್ಟಿದನೆಂಬ ನಂಬಿಕೆ ಕೆಲವರದು. ಸಮುದ್ರ ಮಂಥನ ಕಾಲದಲ್ಲಿ ಶಿವನು ಹಾಲಾಹಲ ಕುಡಿದ ದಿನವೇ ಶಿವರಾತ್ರಿ ಎಂಬುದು ಇನ್ನು ಕೆಲವರ ವಾದ. ಮತ್ತೆ ಕೆಲವರು ಶಿವ ಪಾರ್ವತಿಯನ್ನು ವರಿಸಿದ ದಿನ ಶಿವರಾತ್ರಿ ಎನ್ನುತ್ತಾರೆ. ಆದರೆ, ಶಿವರಾತ್ರಿಯ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ರಾತ್ರಿಯಿಡೀ ಪೂಜಿಸುವುದು ವಾಡಿಕೆ. ಇದಕ್ಕೆ ಬೇಡರ ಕಣ್ಣಪ್ಪನ ತ್ಯಾಗದ ಕತೆಯೂ ಪೂರಕವಾಗಿದೆ.[ಶಿವರಾತ್ರಿ ಮಹಾತ್ಮೆ ಓದಿ]
ಶಿವರಾತ್ರಿ ದಿನ ದೇಶದ ವಿವಿಧೆಡೆ ಭಕ್ತರು ಶಿವನನ್ನು ಆರಾಧಿಸಿದ ಬಗೆ, ಅಭಿಷೇಕ, ಪೂಜೆ, ಪುನಸ್ಕಾರ ಸಲ್ಲಿಸಿದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಶಿವರಾತ್ರಿ ಪ್ರಯುಕ್ತ : ಶಿವ ಹಾಗೂ ಕಾಳಿ ನೃತ್ಯ
ಮಹಾ ಶಿವರಾತ್ರಿ ಪ್ರಯುಕ್ತ ಪಟಿಯಾಲದಲ್ಲಿ ಶಿವ ಹಾಗೂ ಮಾತೆ ಕಾಳಿ ದೇವಿ ಶೋಭಾ ಯಾತ್ರೆ ನಡುವೆ ನರ್ತಿಸಿದರು.

ಶಿವರಾತ್ರಿ ಪ್ರಯುಕ್ತ : ವಾರಣಸಿಯಲ್ಲಿ ಜನ ಜಂಗುಳಿ
ಮಹಾ ಶಿವರಾತ್ರಿ ಪ್ರಯುಕ್ತ ವಾರಣಸಿಯಲ್ಲಿ ಸೇರಿರುವ ಜನ ಜಂಗುಳಿ. ಪಿಟಿಐ ಚಿತ್ರ

ಉಜ್ಜಯಿನಿಯಲ್ಲಿ ಅವಿರತವಾಗಿ ಶಿವ ಪೂಜೆ
ಉಜ್ಜಯಿನಿಯಲ್ಲಿ ಮಹಾಕಾಳ ರೂಪ ಶಿವನಿಗೆ ಅವಿರತವಾಗಿ ಪೂಜೆ ಸಲ್ಲಿಸಲಾಗಿದೆ.

ರಾಜಸ್ಥಾನದ ಕೋಟಾದಲ್ಲಿ ಶಿವನ ಪೂಜೆ
ರಾಜಸ್ಥಾನದ ಕೋಟಾದಲ್ಲಿ ಶಿವರಾತ್ರಿ ಅಂಗವಾಗಿ ನಡೆದಿರುವ ನಿರಂತರ ಪೂಜೆ

ಮುಂಬೈನ ಕೋಪಿನೇಶ್ವರ ದೇಗುಲ
ಮುಂಬೈ: ಥಾಣೆಯಲ್ಲಿರುವ ಕೋಪಿನೇಶ್ವರ ದೇಗುಲದಲ್ಲಿ ಭಕ್ತರಿಂದ ನಮನ

ಹರಿದ್ವಾರದಲ್ಲಿ ಭಕ್ತರಿಂದ ಪವಿತ್ರ ಸ್ನಾನ
ಮಹಾ ಶಿವರಾತ್ರಿ ಅಂಗವಾಗಿ ಹರಿದ್ವಾರದಲ್ಲಿ ಪವಿತ್ರ ಸ್ನಾನ ಕೈಗೊಳ್ಳುತ್ತಿರುವ ಭಕ್ತಾದಿಗಳು

ಗುರ್ ಗಾಂವ್ ನಲ್ಲಿ ಪವಿತ್ರ ಅಭಿಷೇಕ
ಮಹಾ ಶಿವರಾತ್ರಿ ಅಂಗವಾಗಿ ಗುರ್ ಗಾಂವ್ ನಲ್ಲಿ ಭಕ್ತರಿಂದ ಅಭಿಷೇಕ

ಕಾಶ್ಮೀರಿ ಪಂಡಿತರಿಂದ ಶಿವರಾತ್ರಿ ಆಚರಣೆ
ಕಾಶ್ಮೀರಿ ಪಂಡಿತರಿಂದ ಶ್ರೀನಗರದ ಹಬ್ಬಲ್ ಕಡಲ್ ಪ್ರದೇಶದಲ್ಲಿ ಮಹಾ ಶಿವರಾತ್ರಿ ಆಚರಣೆ, ಪಂಡಿತ ದಂಪತಿಗಳಿಂದ ಪೂಜೆ ಸಲ್ಲಿಕೆ

ಅಲಹಾಬಾದಿನಲ್ಲಿ ಶಿವನಿಗೆ ಅಭಿಷೇಕ
ಅಲಹಾಬಾದಿನ ಮನ್ ಕಾಮೇಶ್ವರ ದೇಗುಲದಲ್ಲಿ ಭಕ್ತಾದಿಗಳಿಂದ ವಿಶೇಷ ಪೂಜೆ

ಅಲಹಾಬಾದಿನಲ್ಲಿ ಶಿವರಾತ್ರಿ ಆಚರಣೆ
ಅಲಹಾಬಾದಿನ ಮನ್ ಕಾಮೇಶ್ವರ ದೇಗುಲದಲ್ಲಿ ಭಕ್ತಾದಿಗಳಿಂದ ವಿಶೇಷ ಪೂಜೆ ಶಿವರಾತ್ರಿ ಆಚರಣೆ











Click it and Unblock the Notifications