PM Narendra Modi: 3ನೇ ಅವಧಿಗೆ ಅಧಿಕಾರ ನೀಡಿದ್ರೆ ದೇಶದ ಆರ್ಥಿಕತೆ 3ನೇ ಸ್ಥಾನಕ್ಕೆ : ಪ್ರಧಾನಿ ಮೋದಿ ಗ್ಯಾರಂಟಿ

ಹೊಸದಿಲ್ಲಿ, ಜುಲೈ 26: ದೇಶದ ಜನತೆ ಎನ್‌ಡಿಎಗೆ ಮೂರನೇ ಬಾರಿ ಅಧಿಕಾರ ನೀಡಿದರೆ ಜಾಗತಿಕವಾಗಿ ಭಾರತದ ಅರ್ಥ ವ್ಯವಸ್ಥೆಯನ್ನು ಮೂರನೇ ಸ್ಥಾನಕ್ಕೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೊಸ ಭರವಸೆ ನೀಡಿದ್ದಾರೆ.

ದೆಹಲಿಯ ಪ್ರಗತಿ ಮೈದಾನದಲ್ಲಿ ಐಇಸಿಸಿ ಕಾಂಪ್ಲೆಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅಭಿವೃದ್ಧಿ ಹೊಂದಲು ಭಾರತೀಯರು ದೊಡ್ಡದಾಗಿ ಯೋಚಿಸಬೇಕು ಮತ್ತು ದೊಡ್ಡ ಗುರಿಗಳನ್ನು ಸಾಧಿಸಬೇಕು ಎಂದು ಹೇಳಿದರು.

pm-modi-guarantees

ದೊಡ್ಡದಾಗಿ ಯೋಚಿಸಿ, ದೊಡ್ಡದಾಗಿ ಕನಸು ಕಾಣಿ, ದೊಡ್ಡದಾಗಿ ವರ್ತಿಸಿಎಂಬ ತತ್ವದೊಂದಿಗೆ ಭಾರತ ಮುನ್ನಡೆಯುತ್ತಿದೆ ಎಂದು ಹೇಳಿದ ಅವರು, ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ, ಭಾರತದ ಮೂಲಸೌಕರ್ಯ ಬದಲಾಗುತ್ತಿದೆ. ಭಾರತದಲ್ಲಿ ವಿಶ್ವದ ಅತಿ ಎತ್ತರದ ರೈಲು ಸೇತುವೆ, ಅತಿ ಎತ್ತರದ ಉದ್ದದ ಸುರಂಗ ಭಾರತದಲ್ಲಿದೆ, ಅತಿ ಎತ್ತರದ ಮೋಟಾರು ರಸ್ತೆ, ಅತಿದೊಡ್ಡ ಕ್ರೀಡಾಂಗಣ, ಅತೀ ದೊಡ್ಡ ಪ್ರತಿಮೆ ಇವೆಲ್ಲವೂ ಭಾರತದಲ್ಲಿದೆ. ಹಾಗೂ ಆರ್ಥಿಕ ಬೆಳವಣಿಗೆಯು ದೇಶದ ಆಕಾಂಕ್ಷೆಗಳಿಗೆ ಅನುಗುಣವಾಗಿರುತ್ತದೆ ಎಂದು ಪ್ರಧಾನಿ ಹೇಳಿದರು.

ನಮ್ಮ ಮೊದಲ ಅವಧಿಯಲ್ಲಿ ಭಾರತ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು. ನನ್ನ ಎರಡನೇ ಅವಧಿಯಲ್ಲಿ, ಐದನೇ ಸ್ಥಾನಕ್ಕೇರಿದೆ. ಮೂರನೇ ಅವಧಿಯಲ್ಲಿ, ಆರ್ಥಿಕತೆಯು ವಿಶ್ವದ ಅಗ್ರ ಮೂರನೇ ಸ್ಥಾನಕ್ಕೆ ಬರುವುದು ಖಚಿತ. ನನ್ನ ಮೂರನೇ ಅವಧಿಯಲ್ಲಿ, ಭಾರತವು ಅಗ್ರ ಮೂರು ಆರ್ಥಿಕತೆಗಳಲ್ಲಿ ನಿಲ್ಲುತ್ತದೆ ಇದು ಗ್ಯಾರಂಟಿ ಎಂದು ಪ್ರಧಾನಿ ಮೋದಿ ಹೇಳಿದರು.

ವರ್ಷಗಳಲ್ಲಿ, ದೇಶದಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. "ಅಂತರರಾಷ್ಟ್ರೀಯ ಏಜೆನ್ಸಿಗಳು ಭಾರತದಲ್ಲಿ ತೀವ್ರ ಬಡತನವು ಕೊನೆಗೊಳ್ಳುವ ಅಂಚಿನಲ್ಲಿದೆ ಎಂದು ಹೇಳುತ್ತಿವೆ. ಕಳೆದ 9 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ನೀತಿಗಳು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.

pm-modi-guarantees

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಭಾಷಣ ಆರಂಭಿಸಿದ ಅವರು, ಕಾರ್ಗಿಲ್ ವಿಜಯ್ ದಿವಸ್ ಆಗಿರುವುದರಿಂದ ಇಂದು ಐತಿಹಾಸಿಕ ದಿನವಾಗಿದೆ. ನಮ್ಮ ವೀರ ಪುತ್ರರು ಮತ್ತು ಪುತ್ರಿಯರಿಂದ ದೇಶದ ಶತ್ರುಗಳನ್ನು ಸೋಲಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ವೀರರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಗೌರವಿಸಿದರು.

ಪ್ರಧಾನಮಂತ್ರಿಯವರು ಇಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂಟರ್ನ್ಯಾಷನಲ್ ಎಕ್ಸಿಬಿಷನ್-ಕಮ್-ಕನ್ವೆನ್ಷನ್ ಸೆಂಟರ್ (ಐಇಸಿಸಿ) ಸಂಕೀರ್ಣವನ್ನು ಉದ್ಘಾಟಿಸಿದರು. ಅವರು ಜಿ-20 ನಾಣ್ಯ ಮತ್ತು ಜಿ-20 ಸ್ಟಾಂಪ್ ಅನ್ನು ಅನಾವರಣಗೊಳಿಸಿದರು. ಡ್ರೋನ್ ಮೂಲಕ ನಡೆಸಲಾದ ಕನ್ವೆನ್ಷನ್ ಸೆಂಟರ್‌ಗೆ 'ಭಾರತ್ ಮಂಟಪ' ಎಂದು ನಾಮಕರಣ ಮಾಡುವ ಸಮಾರಂಭ ಮತ್ತು ಈ ಸಂದರ್ಭದಲ್ಲಿ ಪ್ರದರ್ಶಿಸಲಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಪ್ರಧಾನ ಮಂತ್ರಿಗಳು ಸಾಕ್ಷಿಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+