ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಾಕ್‌ಡೌನ್: ಏಪ್ರಿಲ್‌ನಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ ಶೇ.66ರಷ್ಟು ಕುಸಿತ

|
Google Oneindia Kannada News

ನವದೆಹಲಿ, ಏಪ್ರಿಲ್ 9: ಕೇವಲ ಏಪ್ರಿಲ್ ಒಂದೇ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ ಶೇ.66ರಷ್ಟು ಕುಸಿತ ಕಂಡಿದೆ.

Recommended Video

Excise duty on petrol and diesel was hiked by Rs 3 per litre |ONEINDIA KANNADA

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ನಿತ್ಯ ಕಚೇರಿ ಕೆಲಸಗಳಿಗೆ ಓಡಾಡುವುದು ನಿಂತಿದೆ. ಬೇಸಿಗೆ ರಜೆ ಎಂದು ಟ್ರಿಪ್‌ಗಳಿಗೂ ಯಾರೂ ಹೋಗುವ ಪರಿಸ್ಥಿತಿ ಇಲ್ಲ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಬೇಡಿಕೆ ಶೇ.66ರಷ್ಟು ಕುಸಿತ ಕಂಡಿದೆ.

ಏಪ್ರಿಲ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಇಳಿಕೆಯಾದರೆ, ವಿಮಾನಗಳಿಗೆ ಬಳಕೆಯಾಗುವ ಏವಿಯೇಷನ್ ಟರ್ಬೈನ್ ಫ್ಯೂಯೆಲ್ ಬೇಡಿಕೆ ಶೇ.90ರಷ್ಟು ಕಡಿತಗೊಂಡಿದೆ.

ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ

ಪ್ರಯಾಣಿಕರ ವಿಮಾನ ಹಾಗೂ ಖಾಸಗಿ ವಾಣಿಜ್ಯ ಬಳಕೆ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ತೈಲ ಬಳಕೆ ಕುಸಿದಿರುವುದಾಗಿ ವಿಮಾನಯಾನ ವಲಯದ ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ ಡೀಸೆಲ್ ಬಳಕೆ ಅತಿ ಹೆಚ್ಚು

ದೇಶದಲ್ಲಿ ಡೀಸೆಲ್ ಬಳಕೆ ಅತಿ ಹೆಚ್ಚು

ದೇಶದಲ್ಲಿ ಡೀಸೆಲ್ ಬಳಕೆ ಅತಿ ಹೆಚ್ಚು, ಆದರೆ ಲಾಕ್‌ಡೌನ್‌ನಿಂದ ಬಹುತೇಕ ಟ್ರಕ್‌ಗಳು ಹಾಗೂ ರೈಲುಗಳ ಸಂಚಾರ ಸಹ ಸ್ಥಗಿತಗೊಂಡಿರುವುದರಿಂದ ಬೇಡಿಕೆಯಲ್ಲಿ ಶೇ.24.23 ಕಡಿತಗೊಂಡು 5.65 ಮಿಲಿಯನ್ ಟನ್‌ಗೆ ಇಳಿದಿದೆ. ಇನ್ನೂ ಬಹುತೇಕ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರ ಇಲ್ಲದಿರುವುದರಿಂದ ಪೆಟ್ರೋಲ್ ಮಾರಾಟ ಶೇ.16.37ರಷ್ಟು ಇಳಿಕೆಯಾಗಿ 2.15 ಮಿಲಿಯನ್ ಟನ್‌ಗಳಿಗೆ ಕುಸಿದಿದೆ.

ಹೆಚ್ಚು ತೈಲ ಬಳಕೆ ಮಾಡುವ ಮೂರನೇ ರಾಷ್ಟ್ರ ಭಾರತ

ಹೆಚ್ಚು ತೈಲ ಬಳಕೆ ಮಾಡುವ ಮೂರನೇ ರಾಷ್ಟ್ರ ಭಾರತ

ಜಗತ್ತಿನಲ್ಲಿಯೇ ಅತಿ ಹೆಚ್ಚು ತೈಲ ಬಳಕೆ ಮಾಡುವ ಮೂರನೇ ರಾಷ್ಟ್ರ ಭಾರತವಾಗಿದೆ. ಕಳೆದ ಹತ್ತು ವರ್ಷಗಳಲ್ಲೇ ಅತಿ ಕಡಿಮೆ ತೈಲ ಮಾರಾಟ ದಾಖಲಾಗಿದೆ. ಮಾರ್ಚ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಶೇ.17.79 ರಷ್ಟು ಇಳಿಕೆಯಾಗಿ 16.08 ಮಿಲಿಯನ್ ಟನ್‌ಗಳಿಗೆ ಇಳಿಕೆಯಾಗಿದೆ.

2019ರ ಏಪ್ರಿಲ್‌ನಲ್ಲಿ ಹೇಗಿತ್ತು?

2019ರ ಏಪ್ರಿಲ್‌ನಲ್ಲಿ ಹೇಗಿತ್ತು?

2019ರ ಏಪ್ರಿಲ್‌ನಲ್ಲಿ ಭಾರತ 2.4 ಮಿಲಿಯನ್ ಟನ್ ಪೆಟ್ರೋಲ್ , 7.3 ಮಿಲಿಯನ್ ಟನ್ ಡೀಸೆಲ್ ಹಾಗೂ 6.45 ಲಕ್ಷ ಟನ್ ಎಟಿಎಫ್ ಬಳಕೆಯಾಗಿತ್ತು.

ಎಲ್‌ಪಿಜಿ ಅನಿಲ ಸಿಲಿಂಡರ್ ಬೇಡಿಕೆ ಹೆಚ್ಚಳ

ಎಲ್‌ಪಿಜಿ ಅನಿಲ ಸಿಲಿಂಡರ್ ಬೇಡಿಕೆ ಹೆಚ್ಚಳ

ಲಾಕ್‌ಡೌನ್‌ನಿಂದ 21 ದಿನಗಳು ಎಲ್ಲರೂ ಮನೆಯಲ್ಲಿಯೇ ಇರಬೇಕಾದ ಕಾರಣ, ಅಡುಗೆ ಹಾಗೂ ಇತರೆ ಬಳಕೆಗಳಿಗೆ ಎಲ್‌ಪಿಜಿ ಅನಿಲ ಸಿಲಿಂಡರ್ ಬೇಡಿಕೆ ಹೆಚ್ಚಾಗಿದೆ. ಮಾರ್ಚ್‌ನಲ್ಲಿ ಎಲ್‌ಪಿಜಿ ಶೇ.1.9ರಷ್ಟು ಏರಿಕೆಯಾಗಿ ಬಳಕೆ 2.3 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಏಪ್ರಿಲ್‌ನಲ್ಲಿ ಎಲ್‌ಪಿಜಿ ಮಾರಾಟ ಶೇ.30ರಷ್ಟು ಹೆಚ್ಚಳವಾಗಿದೆ.

English summary
India’s fuel consumption slumped by over 66% in April as a nationwide lockdown halted economic activity and travel, which eviscerated demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X