India-Pakistan Tensions: ವಿದೇಶಾಂಗ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಪಾಕ್ ಹೇಡಿತನದ ಮಾಹಿತಿ ಬಹಿರಂಗ
India-Pakistan Tensions: ಭಾರತ ತಕ್ಕ ತಿರುಗೇಟು ನೀಡಿದರೂ ಸಹ ನರಿ ಬುದ್ದೀ ಪಾಕ್ ಮತ್ತೆ ಕಾಲ್ಕೆರೆದುಕೊಂಡು ದಾಳಿಗೆ ಮುಂದಾಗುತ್ತಿದೆ. ಆದರೂ, ಬಗ್ಗದ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ತಕ್ಕ ಶಾಸ್ತಿಯನ್ನು ಮಾಡುತ್ತಲಿದೆ. ಪಾಕಿಸ್ತಾನದ ದಾಳಿಗಳನ್ನು ಪ್ರಯತ್ನಗಳ ವಿಫಲಗೊಳಿಸಿದ ಬಳಿಕ ಇದೀಗ ಇಂದು (ಮೇ 9) ವಿದೇಶಾಂಗ ಇಲಾಖೆ ಮಹತ್ವದ ಸುದ್ದಿಗೋಷ್ಠಿ ನಡೆಸಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಅಡಿಯಲ್ಲಿ ಪಾಕ್ ಉಗ್ರರ ಮೇಲೆ ನಡೆಸಿದ ಪ್ರತಿದಾಳಿಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ವಿದೇಶಾಂಗ ಸಚಿವಾಲಯ ಜೆಎನ್‌ಬಿಯ ಮೀಡಿಯಾ ಬ್ರೀಫಿಂಗ್ ಹಾಲ್‌ನಲ್ಲಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ, ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಡ್ರೋನ್‌ಗಳನ್ನು ಭಾರತೀಯ ಸೇನೆಯು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಕೈನೆಟಿಕ್ ಮತ್ತು ನಾನ್-ಕೈನೆಟಿಕ್ ವಿಧಾನಗಳನ್ನು ಬಳಸಿಕೊಂಡು ಈ ಡ್ರೋನ್‌ಗಳನ್ನು ನಾವು ತಡೆದಿದ್ದೇವೆ. ಈ ಡ್ರೋನ್‌ಗಳನ್ನು ಗುಪ್ತಚರ ಮಾಹಿತಿ ಸಂಗ್ರಹಿಸಲು ಬಳಸಲಾಗಿತ್ತು ಎಂದು ತಿಳಿಸಿದರು.
ಪಾಕಿಸ್ತಾನಕ್ಕೆ ಟರ್ಕಿ ಸಾಥ್: ಪಾಕಿಸ್ತಾನಕ್ಕೆ ಟರ್ಕಿ ಸಾಥ್ ಕೊಟ್ಟಿರುವುದು ಇಲ್ಲಿ ಸ್ಪಷ್ಟವಾಗಿದೆ ಎಂದು ಕರ್ನಲ್ ಖುರೇಷಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮೇ 8 ಮತ್ತು 9 ರಂದು ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಮತ್ತೊಮ್ಮೆ ಪ್ರಯತ್ನಿಸಿತು. ಅವರು 300 ರಿಂದ 400 ಡ್ರೋನ್‌ಗಳನ್ನು, ಟರ್ಕಿಶ್ ಯುಎವಿಗಳನ್ನು ಸೇರಿಸಿ, ಗಡಿಯಲ್ಲಿ 36 ಸ್ಥಳಗಳಲ್ಲಿ ಬಳಸಿದರು ಎಂದು ಕರ್ನಲ್ ಸೋಫಿಯಾ ಖುರೇಷಿ ಅವರು ಹೇಳಿದರು.
ಪಾಕಿಸ್ತಾನ ಸೇನೆಗೆ ದೊಡ್ಡ ನಷ್ಟ: ಪಾಕಿಸ್ತಾನ ಗುರವಾರ ರಾತ್ರಿ ಭಾರತ 36 ನಗರಗಳ ಮೇಲೆ ಡ್ರೋನ್ ದಾಳಿಗೆ ಮಾಡಲು ಯತ್ನಿಸಿತ್ತು. ಟರ್ಕಿ ನಿರ್ಮಿತ ಸುಮಾರು 300-400 ಡ್ರೋನ್‌ಗಳಿಂದ ದಾಳಿ ಮಾಡಿದೆ. ನಾವು ಆ ಎಲ್ಲಾ ಡ್ರೋನ್‌ಗಳನ್ನು ಧ್ವಂಸ ಮಾಡಿದ್ದೇವೆ. ಇದರಿಂದ ಪಾಕಿಸ್ತಾನ ಸೇನೆಗೆ ಬಹು ದೊಡ್ಡ ನಷ್ಟ ಉಂಟಾಗಿದೆ. ಆದರೆ, ಪಾಕಿಸ್ತಾನ ನಾವು ಭಾರತದ ಮೇಲೆ ದಾಳಿ ಮಾಡಿಲ್ಲ ಎಂದು ಹೇಳುತ್ತಿದೆ. ಬೇಜಾವಾಬ್ದಾರಿಯುತವಾಗಿ ವರ್ತಿಸುವುದನ್ನು ಮುಂದುವರಿಸಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮ್ಯಾಂಡರ್ ವ್ಯೂಮಿಕಾ ಸಿಂಗ್ ತಿಳಿಸಿದರು.
ಮತ್ತೆ ಮತ್ತೆ.. ನರಿ ಬುದ್ಧಿ ತೋರಿಸುತ್ತಿರುವ ಪಾಕ್: ಮೇ 8 ಹಾಗೂ ಮೇ 9ರ ಮಧ್ಯರಾತ್ರಿ ಪಾಕಿಸ್ತಾನಿ ಸೇನೆ ಪಶ್ಚಿಮ ಗಡಿಗಳಲ್ಲಿನ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಲೇಹ್‌ನಿಂದ ಸರ್ ಕ್ರೀಕ್‌ವರೆಗೆ, ಪಾಕಿಸ್ತಾನಿ ಸೇನೆಯು ಒಳನುಸುಳುವಿಕೆಗಾಗಿ ಡ್ರೋನ್‌ಗಳನ್ನು ಬಳಸಿದೆ ಎಂದು ಖುರೇಷಿ ತಿಳಿಸಿದರು.
ಪಾಕ್ ಕಳ್ಳಾಟ ಬಯಲು: ಮೇ 7 ಮತ್ತು 8 ರ ರಾತ್ರಿ ಎರಡೂ ದಿನವೂ ಪಾಕಿಸ್ತಾನಿ ಸೇನೆಯು ಪಶ್ಚಿಮ ಗಡಿಯಲ್ಲಿ ಭಾರತೀಯ ವಾಯುಪ್ರದೇಶವನ್ನು ಪದೇ ಪದೇ ಉಲ್ಲಂಘಿಸಿ, ಮಿಲಿಟರಿ ಮೂಲಸೌಕರ್ಯವನ್ನು ಟಾರ್ಗೆಟ್ ಮಾಡುತ್ತಿದೆ. ಅಷ್ಟೇ ಅಲ್ಲದೆ, ನಿಯಂತ್ರಣ ರೇಖೆಯುದ್ದಕ್ಕೂ ಭಾರೀ-ಕ್ಯಾಲಿಬರ್ ಶಸ್ತ್ರಾಸ್ತ್ರಗಳನ್ನು ಹಾರಿಸಿದೆ. ಸುಮಾರು 36 ಸ್ಥಳಗಳನ್ನ ಗುರಿಯಾಸಿಕೊಂಡು ಸುಮಾರು 300 ರಿಂದ 400 ಡ್ರೋನ್‌ಗಳಿಂದ ದಾಳಿ ಮಾಡಿದೆ. ಆದರೆ ಇದನ್ನು ನಾವು ವಿಫಲಗೊಳಿಸಿದೆವು ಎಂದು ತಿಳಿಸಿದರು.
ಹೀಗೆ ಪಾಕಿಸ್ತಾನ ಕಳ್ಳಾಟ ಆಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿ ದಾಳಿ ಮಾಡಲು ಯತ್ನಿಸುತ್ತಲೇ ಇದೆ. ಆದರೆ, ಇದಕ್ಕೆ ತಕ್ಕ ಪ್ರತ್ಯುತ್ತರವಾಗಿ ಭಾರತೀಯ ಸೇನೆಯು ಸಹ ತಿರುಗೇಟು ನೀಡುವ ಕೆಲಸವನ್ನು ಮಾಡುತ್ತಿದೆ.












Click it and Unblock the Notifications