Cyclone Alert: ದಕ್ಷಿಣ ಭಾರತಕ್ಕೆ ಚಂಡಮಾರುತ ಆತಂಕ! ಅ.28ರವರೆಗೆ ಈ ರಾಜ್ಯಗಳಿಗೆ ಧಾರಾಕಾರ ಮಳೆ, ರೆಡ್ ಅಲರ್ಟ್!

IMD Weather Forecast: ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ಸ್ವರೂಪದ ಹವಾಮಾನ ಬದಲಾವಣೆ ಎದುರಾಗಿದ್ದು, ಎಲ್ಲೆಡೆ ಮಳೆ, ತಂಪು ವಾತಾವರಣ ಕಂಡು ಬಂದಿದೆ. ಹಿಂಗಾರು ಮಳೆ ಎಲ್ಲೆಡೆ ಸಕ್ರಿಯವಾಗಿದೆ. ಮುಂದಿನ 24 ಗಂಟೆಗಳಲ್ಲಿ ಸಮುದ್ರಮಟ್ಟದಲ್ಲಿ ಚಂಡಮಾರುತ ನಿರ್ಮಾಣವಾಗಲಿದೆ. ಭಾರತೀಯ ಹವಾಮಾನ ಇಲಾಖೆಯು (IMD) ವಿವಿಧ ರಾಜ್ಯಗಳಿಗೆ ಹಗುರ, ಭಾರೀ, ಧಾರಾಕಾರ ಮಳೆ ಮುನ್ಸೂಚನೆ ಕೊಟ್ಟಿದೆ. ಮೀನುಗಾರರನ್ನು ಎಚ್ಚರಿಸಿದೆ.

ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವೊಂದು ರೂಪುಗೊಂಡಿದೆ, ಅದು ಅದು ಅಕ್ಟೋಬರ್ 26 ರ ವೇಳೆಗೆ ಚಂಡಮಾರುತವಾಗಿ (cyclonic storm) ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೇಶದ ದಕ್ಷಿಣ ಭಾರತದ ಭಾಗಗಳಿಗೆ ಭಾರೀ ಮಳೆಯ ಪ್ರಯುಕ್ತ ಇಲಾಖೆಯು 'ರೆಡ್ ಅಲರ್ಟ್' ಘೋಷಿಸಲಾಗಿದೆ.

IMD Weather Forecast

'ರೆಡ್ ಅಲರ್ಟ್' ರಾಜ್ಯಗಳು ಯಾವುವು?

ಚಂಡಮಾರುತದ ಕಾರಣದಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗುವ ಲಕ್ಷಣಗಳು ಕಾಣಿಸುತ್ತಿದ್ದು, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರೀ ಮಳೆಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಕರ್ನಾಟಕದಲ್ಲೂ ಭಾರಿ ಮಳೆಯಾಗಬಹುದು. ಈ ವಾರದ ನಂತರ ಪೂರ್ವ ಕರಾವಳಿಯುದ್ದಕ್ಕೂ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.

ರಾಜಧಾನಿ ದೆಹಲಿ ಹಾಗೂ ದೆಹಲಿ-ಎನ್‌ಸಿಆರ್ ಭಾಗದಲ್ಲಿ ಶನಿವಾರ ಬಿರುಗಾಳಿ ಮಳೆ ಆಗಿದೆ. ಗುಡುಗು ಸಹಿತ ಹಗುರ, ಸಾಧಾರಣ ಮಳೆ ಆದರೆ ಕೆಲವೆಡೆ ಜೋರು ಮಳೆ ದಾಖಲಾಗಿದೆ. ಭಾನುವಾರ ಆಯಾ ಪ್ರದೇಶದಲ್ಲಿ ಕೊಂಚ ಒಣಹವೆ ಕಂಡು ಬಂದಿತು.

ಚಂಡಮಾರುತ, ಪ್ರತಿಕೂಲ ಹವಾಮಾನ ಮುನ್ನೆಚ್ಚರಿಕೆ

ಅಕ್ಟೋಬರ್ 26ರ ಹೊತ್ತಿಗೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿರುವ ಕಡಿಮೆ ಒತ್ತಡದ ಪ್ರದೇಶವು ಭಾರೀ ಪ್ರಮಾಣದಲ್ಲಿ ತೀವ್ರಗೊಳ್ಳಲಿದೆ. ಅದು ಪರಿವರ್ತನೆಗೊಂಡು ಸ್ಪಷ್ಟ ಚಂಡಮಾರುತವಾಗಿ (cyclonic storm) ರೂಪುಗೊಳ್ಳುವ ನಿರೀಕ್ಷೆಗಳು ಇವೆ. ಇದರಿಂದ ದಕ್ಷಿಣ ಭಾರತದ ಕರಾವಳಿ ರಾಜ್ಯಗಳಿಗೆ (ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್) ಭಾರೀ ಮಳೆ ಆಗಲಿದೆ. ಬಂಗಾಳ ಕೊಲ್ಲಿಯ ಕೆಲವೆಡೆ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಕೆಲವೊಮ್ಮೆ ಗಂಟೆಗೆ 70 ಕಿ.ಮೀ ವೇಗವನ್ನು ತಲುಪುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ

ಸಮುದ್ರವು ಪ್ರಕ್ಷುಬ್ಧವಾಗಿರಲಿದ್ದು, ಮುಂದಿನ ನಾಲ್ಕು ದಿನ ಅಂದರೆ ಅಕ್ಟೋಬರ್ 28 ರವರೆಗೆ ಮೀನುಗಾರರು ಬಂಗಾಳಕೊಲ್ಲಿಯ ಸುತ್ತಮುತ್ತಲಿನ ಬೀಚ್‌ಗಳಿಂದ ಮೀನುಗಾರರಿಗೆ ತೆರಳದಂತೆ ಐಎಂಡಿ ಎಚ್ಚರಿಕೆ ನೀಡಿದೆ. ಚಂಡಮಾರುತ ಕರಾವಳಿ ಭಾಗಗಳಿಗೆ ಬಂದಪ್ಪಳಿಸಿದರೆ ಅಪಾರ ಹಾನಿ ಉಂಟಾಗುವ ನಿರೀಕ್ಷೆಗಳು ಇವೆ. ಐಎಂಡಿ ಮುನ್ಸೂಚನೆ ಮೇರೆಗೆ ಈಗಾಗಲೇ ಜಿಲ್ಲಾಡಳಿತಗಳು ತಕ್ಕಮಟ್ಟಿನ ಸಿದ್ಧತೆಯನ್ನೂ ಆರಂಭಿಸಿವೆ ಎನ್ನಲಾಗಿದೆ.

ಈ ರಾಜ್ಯಗಳ ಹಲವೆಡೆಯು ಧಾರಾಕಾರ ಮಳೆ

ಇನ್ನೂ ಉತ್ತರ ಭಾರತದ ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ ಹಾಗೂ ಮಹಾರಾಷ್ಟ್ರ, ತೆಲಂಗಾಣ, ಒಡಿಶಾ, ಕರ್ನಾಟಕದ ಒಂದಷ್ಟು ಭಾಗಗಳಲ್ಲಿ, ಪ್ರಮುಖ ನಗರಗಳಲ್ಲಿ ವ್ಯಾಪಕ ಮಳೆ ಬರಲಿದ್ದು, ಯೆಲ್ಲೋ ಮತ್ತು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಚಂಡಮಾರುತ ಕಾರಣಕ್ಕೆ ಮುಂದಿನ 4-5ದಿನ ಈ ಮೇಲಿನ ಸ್ಥಳಗಳಲ್ಲಿ ಹಿಂಗಾರು ಸಕ್ರಿಯವಾಗಿರಲಿದ್ದು, ಬಿರುಗಾಳಿ, ಗುಡುಗು ಸಹಿತ ಮಳೆ ನಿರೀಕ್ಷಿಸಬಹುದಾಗಿದೆ.

ವಾಯುವ್ಯ ಭಾರತದ ವಿವಿಧೆಡೆ ಕಡಿಮೆ ಮಳೆ ಇದ್ದು, ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಬೆಳಗ್ಗೆ ದಟ್ಟ ಮಂಜು ಕಂಡು ಬಂದರೆ, ನಂತರ ಒಣಹವೆ ನಿರ್ಮಾಣವಾಗಲಿದೆ. ಬೆಳಗ್ಗೆ ಗೋಚರತೆ (visibility) ಕಡಿಮೆ ಇದ್ದು, ಇದೇ ಸ್ಥಿತಿ ಇನ್ನು ಕೆಲವು ದಿನ ಮುಂದುವರಿಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+