IMD Weather Forecast: ಜನವರಿ 24ರವರೆಗೆ ಈ ಭಾಗಗಳಲ್ಲಿ ಭಾರೀ ಮಳೆ, ಚಳಿ-ತಾಪಾಮಾನ ಮುನ್ಸೂಚನೆ
ನವದೆಹಲಿ: ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಈ ಬೇಸಿಗೆ ಕಾಲದಲ್ಲೂ ಪ್ರತ್ಯೇಕ ಸ್ಥಳಗಳಲ್ಲಿ ಮುಂದಿನ ವಾರ ಭಾರೀ ಮಳೆ ನಿರೀಕ್ಷೆ ಇದೆ. ಅಲ್ಲಲ್ಲಿ ಹಿಮಪಾತವಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಜನವರಿ 24ರವರೆಗಿನ ದೇಶದ ಬಹುತೇಕ ರಾಜ್ಯಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಳ, ಒಂದಷ್ಟು ಕಡೆಗಳಲ್ಲಿ ದಟ್ಟ ಮಂಜು, ಚಳಿ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಮುನ್ಸೂಚನಾ ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರ-ಲಡಾಖ್, ಮುಜಫರಾಬಾದ್ ನಲ್ಲಿ ಮುಂದಿನ ಜನವರಿ 21ರವರೆಗೆ ಹಗುರ ಮಳೆ ಆಗಲಿದೆ. ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಆಗಲಿದೆ. ಜನವರಿ 23 ರಂದು ಇದೇ ಕಾಶ್ಮೀರ-ಲಡಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್ ಭಾಗಗಳಲ್ಲಿ ಪ್ರತ್ಯೇಕ ಕಡೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಉತ್ತರಾಖಂಡದ ಕೆಲವೆಡೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲೂ ಹಗುರ ಮಳೆ ಆಗಲಿದೆ ಎಂದು ಹವಾಮಾನ ವರದಿ ಭಾನುವಾರ ತಿಳಿಸಿದೆ.

ಜನವರಿ 22-24 ರಂದು ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಚದುರಿದಂತೆ ಹಗುರದಿಂದ ಸಾಮಾನ್ಯದಿಂದ ವ್ಯಾಪಕವಾಗಿ ಮಳೆ ಆಗಲಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಜನವರಿ 23 ಮತ್ತು 24 ರಂದು ಉತ್ತರಾಖಂಡದಲ್ಲಿ ಗುಡುಗು ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ. ಒಟ್ಟಾರೆಯಾಗಿ ಮುಂದಿನ ವಾರದ ನಾಲ್ಕರಿಂದ ಐದು ದಿನ ಮಳೆ, ಶೀತ ಅಲೆ, ಚಳಿ ಜೊತೆಗೆ ಮಳೆಯು ಆಗಲಿದೆ. ಉತ್ತರ ಭಾರತದ ಜನರು ಮೂರು ಹವಾಮಾನ ಲಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ.
ಕನಿಷ್ಠ ತಾಪಮಾನದಲ್ಲಿ ಸಹಜ ಏರಿಕೆ ನಿರೀಕ್ಷೆ
ಭಾರತದ ವಾಯುವ್ಯ ಭಾಗದ ರಾಜ್ಯಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಗಮನಾರ್ಹ ಬದಲಾವಣೆ ಆಗುವ ಲಕ್ಷಣಗಳು ಇಲ್ಲ. ಬದಲಾಗಿ ಸಾಮಾನ್ಯ ವಾಡಿಕೆ ಕನಿಷ್ಠ ತಾಪಮಾನಕ್ಕಿಂತ 3-5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಅಂದರೆ ಈ ಭಾಗದಲ್ಲಿ ಚಳಿ ತಗ್ಗಲಿದೆ. ಗರಿಷ್ಠ ತಾಪಮಾನ ಹಗಲು ಹೆಚ್ಚಾಗಲಿದೆ.
ಸೋಮವಾರ ಜನವರಿ 19ರಂದು ಮಹಾರಾಷ್ಟ್ರದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಳಿತವಾಗಲಿದೆ. 2-4 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗಲಿದೆ. ನಂತರದ 4 ದಿನಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಕ್ರಮೇಣ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದರ ಹೊರತು ಗಂಭೀರ ಬದಲಾವಣೆ ಇಲ್ಲ. ದೇಶದ ಉಳಿದ ಭಾಗದಲ್ಲಿ ಬೆಳಗ್ಗೆ ಕೊಂಚ ಚಳಿ ಕಂಡು ಬರಲಿದೆ. ಶೀತ ಅಲೆಯ ಅಬ್ಬರ ಕೊನೆಯಾಗಿದ್ದು, ಇನ್ನೊಂದು ವಾರದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗಬಹುದೆಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಮುಂದಿನ ಮೂರು ದಿನ ಸಿಕ್ಕಿಂ, ರಾಜಸ್ಥಾನ, ಬಿಹಾರ, ಚಂಡೀಗಢ, ದೆಹಲಿ ವಿವಿಧ ಭಾಗಗಳಲ್ಲಿ ಮುಂದಿನ ಮೂರು ದಿನ ಬೆಳಗ್ಗೆ ದಟ್ಟ ಮಂಜು ಕವಿಯಲಿದೆ. ಮಧ್ಯಾಹ್ನ ಒಣಹವೆ ಉಂಟಾಗಲಿದೆ. ಉತ್ತರ ಪ್ರದೇಶದ ಒಂದೆರಡು ಭಾಗಗಳಲ್ಲಿ ಹೆಚ್ಚಿನ ಚಳಿ, ವಿಪರೀತ ಮಂಜು ಕಂಡು ಬರಲಿದೆ. ಉಳಿದಂತೆ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯವಾಗಿರಲಿದೆ. ಒಣಹವೆ ವಾತಾವರಣ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಳೆದೊಂದು ದಿನದಿಂದ ಸಾಮಾನ್ಯವೆಂಬಂತೆ ಚಳಿ ಹೆಚ್ಚಾಗಿದೆ.
ಹವಾಮಾನ ವೈಪರೀತ್ಯಗಳ ಅಪ್ಡೇಟ್
ಕಾರಕೈಲ್, ಕೊಮರಿಯನ್ ಪ್ರದೇಶಗಳು ಹಾಗೂ ದಕ್ಷಿಣ ಭಾರತದ ಕೇರಳ, ತಮಿಳುನಾಡು ಕರಾವಳಿ ಸಮೀಪ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ವಾಯುಭಾರ ಕುಸಿತ ಏರ್ಪಟ್ಟಿದೆ. ಆದರೆ ಇದು ಸಾಧಾರಣ ಸ್ಥಿತಿಯಲ್ಲಿದೆ. ತೀವ್ರಗೊಳ್ಳುವ ಬಗ್ಗೆ ಸದ್ಯಕ್ಕೆ ಯಾವುದೇ ಮುನ್ಸೂಚನೆಗಳು ಇಲ್ಲ.
ಪಾಕಿಸ್ತಾನ್, ರಾಜಸ್ಥಾನ್ ಸುತ್ತಮುತ್ತಲಿನ ಭೂಮಿ ಮೇಲ್ಮೈನಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಇಲ್ಲಿಂದ ತೀವ್ರ ಬೀರುಗಾಳಿ ಬಿಸುತ್ತಿದೆ. ಈ ವೈಪರೀತ್ಯವು ಸಮುದ್ರ ಮಟ್ಟದಿಂದ 5.8 ಕಿಲೋ ಮೀಟರ್ ಎತ್ತರದಲ್ಲಿದೆ. ಇನ್ನು ಸಮುದ್ರ ಮಟ್ಟದಲ್ಲಿಯೂ ಎರಡು ಪ್ರತ್ಯೇಕ ಕಡೆಗಳಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಇದರಿಂದ ಆಯಾ ಭಾಗದ ರಾಜ್ಯಗಳ ಕೆಲವು ಪ್ರದೇಶಗಳ ಮೇಲೆ ಚಳಿ ಹೆಚ್ಚಳ, ಕೊಂಚ ಮಳೆಗೆ ಕಾರಣವಾಗಿದೆ. ಇದರ ಹೊರತು ತೀವ್ರ ಸ್ವರೂಪ ಹವಾಮಾನ ವೈಪರೀತ್ಯಗಳ ಲಕ್ಷಣಗಳು ಇಲ್ಲ ಎಂದು ಐಎಂಡಿ ತಿಳಿಸಿದೆ.












Click it and Unblock the Notifications