IMD Weather Forecast: ವಾಯು ಚಂಡಮಾರುತ ಪರಿಚಲನೆ, ಮುಂದಿನ 5 ದಿನ ಈ ಭಾಗಗಳಲ್ಲಿ ಭರ್ಜರಿ ಮಳೆ
India Weather Alert: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಸಕ್ರಿಯವಾಗಿದೆ. ಮಧ್ಯಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ, ಕೇರಳ, ಲಕ್ಷದ್ವೀಪ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ಹಾಗೂ ಮಧ್ಯ ಭಾರತದ ಪ್ರದೇಶಗಳಲ್ಲಿ ಹಗುರದಿಂದ ಭಾರೀ ಕೆಲವೆಡೆ ಅತ್ಯಧಿಕ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ. ಮುಂದಿನ ಆಗಸ್ಟ್ 28,29ರವರೆಗೆ ಅನೇಕ ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಬರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಯಾವೆಲ್ಲ ರಾಜ್ಯಗಳಲ್ಲಿ ಯಾವಾಗ ಯಾವಾಗ? ಮಳೆ ಆಗಲಿದೆ ಎಂದು ತಿಳಿಯುವುದಕ್ಕೂ ಮುನ್ನ ಹವಾಮಾನ ವೈಪರೀತ್ಯದ ತೀವ್ರತೆ ಮಾಹಿತಿ ಇಲ್ಲಿದೆ.

ಟ್ರಫ್, ವಾಯು ಚಂಡಮಾರುತ ಪರಿಚಲನೆ ತೀವ್ರತೆ
ವಾಯುವ್ಯ ಬಂಗಾಳಕೊಲ್ಲಿ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ನೆನ್ನೆ ಕಡಿಮೆ ಒತ್ತಡದ ಪ್ರದೇಶ ಉಂಟಾಗಿತ್ತು. ಅದು ಸೋಮವಾರಕ್ಕೆ ತೀವ್ರಗೊಂಡು ವಾಯು ಚಂಡಮಾರುತ ಒತ್ತಡದ ಪ್ರದೇಶವಾಗಿ ಮಾರ್ಪಟ್ಟಿದೆ. ಇದು ಸಮುದ್ರ ಮಟ್ಟದಿಂದ 7.6 ಕಿ.ಮೀ ವರೆಗೆ ವಿಸ್ತರಿಸಿದ್ದು, ನೈಋತ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆ ಇದೆ.
ಸರಾಸರಿ ಸಮುದ್ರ ಮಟ್ಟದಲ್ಲಿ ಮಾನ್ಸೂನ್ ಟ್ರಫ್ ಈಗ ಅಮೃತಸರ, ಪಟಿಯಾಲ, ಮೊರಾದಾಬಾದ್, ಲಕ್ಕೋ, ಡೆನ್ರಿ, ಪುರುಲಿಯಾ ಮೂಲಕ ಹಾದು ಹೋಗಲಿದೆ. ವಾಯುವ್ಯ ಬಂಗಾಳಕೊಲ್ಲಿ ಮತ್ತು ನೆರೆಹೊರೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶದ ಕೇಂದ್ರವಾಗಿದೆ ಮತ್ತು ಅಲ್ಲಿಂದ ಆನ್ನೇಯಕ್ಕೆ ಬಂಗಾಳ ಕೊಲ್ಲಿ ಪೂರ್ವಮಧ್ಯ ಬಿರುಗಾಳಿ ಬೀಸುತ್ತಿದೆ. ಇನ್ನೂ ಉತ್ತರ ಕೇರಳ ಮತ್ತು ನೆರೆಹೊರೆಯ ಭಾಗದಲ್ಲೂ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದರಿಂದ ಕೆಲವು ದಕ್ಷಿಣ ಭಾರತದ ರಾಜ್ಯಗಳು ಹಾಗೂ ಅಧಿಕ ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ.
ಮುಂದಿನ 5 ದಿನ ಭಾರೀ ಮಳೆ ಮುನ್ನೆಚ್ಚರಿಕೆ
ಸದ್ಯ ಆಗಸ್ಟ್ 26ರವರೆಗೆ ಎರಡು ದಿನ ಒಡಿಶಾ, ಛತ್ತೀಸಗಢ, ಬಿಹಾರ, ಜಾರ್ಖಂಡ, ಉತ್ತರ ಪ್ರದೇಶ ಮತ್ತು ಗಂಗಾನದಿ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕೆಲವೆಡೆ ಧಾರಾಕಾರ ಮಳೆ ಸುರಿಯಲಿದೆ. ಇನ್ನೂ ಉತ್ತರ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ದಲ್ಲಿ ಪ್ರತಿ ಗಂಟೆಗೆ 40-60 ಕಿಲೋ ಮೀಟರ್‍ವರೆಗೆ ಬಿರುಗಾಳಿ ಬೀಸಲಿದೆ ಎಂಬ ಮುನ್ಸೂಚನೆ ಇದೆ.
ಇನ್ನು ಆಗಸ್ಟ್ 29ರವರೆಗೆ ಜಮ್ಮು ಮತ್ತು ಕಾಶ್ಮೀರ, ಲದಾಕ್, ಉತ್ತರಾಖಂಡ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಮ್ ಹಾಗೂ ತ್ರಿಪುರಾ ರಾಜ್ಯಗಳ ಅನೇಕ ಕಡೆಗಳಲ್ಲಿ ನಿರಂತರವಾಗಿ ರಣಮಳೆ ಆಗಲಿದೆ. ಈಗಾಗಲೇ ಇದೇ ರಾಜ್ಯಗಳ ಅನೆಕ ಕಡೆಗಳಲ್ಲಿ ಕೆಲವು ದಿನಗಳಿಂದ ಮಳೆ ಆಗುತ್ತಿದ್ದು, ತಗ್ಗು ಪ್ರದೇಶದ ನಿವಾಸಿಗಳು ಪರದಾಡುತ್ತಿದ್ದಾರೆ. ಇನ್ನು ಮುಂದೆ ಮತ್ತೆ ಮಳೆ ಆದರೆ ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ.
ಇನ್ನೂ ಗೋವಾ, ಕೋಂಕಣ, ಗುಜರಾತ್, ಮಹಾರಾಷ್ಟ್ರ, ದೆಹಲಿಯ ಒಂದಷ್ಟು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವೇ ಮುಂದುವರಿಯಲಿದೆ. ಕರ್ನಾಟಕ, ಕೇರಳ, ತೆಲಂಗಾಣದ ಕೆಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಲ್ಲೆಲ್ಲ ತಂಪು ಗಾಳಿ ಬೀಸುವಿಕ ಮುಂದುವರಿಯಲಿದೆ. ಒಟ್ಟಾರತೆ ಸರಾಸರಿ ಗರಿಷ್ಠ ತಾಪಮಾನ 33ಡಿಗ್ರಿ ಸೆಲ್ಸಿಯಸ್ ಕಂಡು ಬಂದರೆ, ಕನಿಷ್ಠ 27,8 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.


Click it and Unblock the Notifications
