IMD Weather Forecast: ಮುರಸು ಚಂಡಮಾರುತ ಪ್ರಭಾವ ಆಂಧ್ರ- ತೆಲಂಗಾಣದಲ್ಲಿ ರಣಭೀಕರ ಮಳೆ; ಕರ್ನಾಟಕದಲ್ಲೂ ಮಳೆ ಆರ್ಭಟ: ಐಎಂಡಿ

ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮುಂದಿನ ಎರಡರಿಂದ ಮೂರು ದಿನಗಳ ವರೆಗೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.

ಪಶ್ಚಿಮ - ಮಧ್ಯ ಮತ್ತು ಅದನ್ನು ಹೊಂದಿಕೊಂಡಿರುವ ನೈರುತ್ಯ ಬಂಗಾಳ ಕೊಲ್ಲಿಯ ಮೇಲಿರುವ ತೀವ್ರ ಚಂಡಮಾರುತ "ಮುರಸು" (Murasu) ಕಳೆದ 6 ಗಂಟೆಗಳಲ್ಲಿ ಗಂಟೆಗೆ 22 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸಿದೆ. ಇದು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಪೂರ್ವದ ಬಳಿ ಕೇಂದ್ರೀಕೃತವಾಗಿದೆ. ಇದು ನೆಲ್ಲೂರು (ಆಂಧ್ರಪ್ರದೇಶ) ದಿಂದ ಪೂರ್ವ-ಆಗ್ನೇಯಕ್ಕೆ ಸುಮಾರು 160 ಕಿ.ಮೀ, ಚೆನ್ನೈ (ತಮಿಳುನಾಡು)ನಿಂದ ಈಶಾನ್ಯಕ್ಕೆ 180 ಕಿ.ಮೀ, ಕಾವಲಿ (ಆಂಧ್ರಪ್ರದೇಶ) ಯಿಂದ ಪೂರ್ವ- ಆಗ್ನೇಯಕ್ಕೆ 180 ಕಿ.ಮೀ, ಒಂಗೋಲು (ಆಂಧ್ರಪ್ರದೇಶ) ದಿಂದ ಆಗ್ನೇಯಕ್ಕೆ 210 ಕಿ.ಮೀ ಮತ್ತು ಮವಿಲಿಪಟ್ಟಣಂ (ಆಂಧ್ರಪ್ರದೇಶ) ದಿಂದ ದಕ್ಷಿಣಕ್ಕೆ 240 ಕಿ.ಮೀ ದೂರದಲ್ಲಿದೆ.

IMD Weather Forecast Cyclone Murasu Bring Heavy Rain Across Andhra Telangana Karnataka Soon

ಇದು ವಾಯುವ್ಯ ದಿಕ್ಕಿನತ್ತ ಚಲಿಸಿ ನವೆಂಬರ್ 2ರ ಮಧ್ಯರಾತ್ರಿ ಮತ್ತು ನವೆಂಬರ್ 3ರ ಮುಂಜಾನೆ ಅವಧಿಯಲ್ಲಿ, ನೆಲ್ಲೂರು ಮತ್ತು ನರಸಾಪುರಗಳ ನಡುವೆ (ಒಂಗೋಲುವಿನ ದಕ್ಷಿಣಕ್ಕೆ) ದಕ್ಷಿಣ ಆಂಧ್ರಪ್ರದೇಶ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 100 ರಿಂದ 110 ಕಿ.ಮೀ ಇರಲಿದ್ದು, ಕೆಲವೊಮ್ಮೆ ಗಂಟೆಗೆ 120 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಕರಾವಳಿಯನ್ನು ಹೊಂದಿಕೊಂಡಿರುವ ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ, ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಂಡಮಾರುತ ಪರಿಚಲನೆ (Cyclonic Circulation) ಏರ್ಪಟ್ಟಿದೆ. ದಕ್ಷಿಣ ಕೇರಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಚಂಡಮಾರುತ ಪರಿಚಲನೆ ಕಂಡುಬರುತ್ತಿದೆ.

ಪೂರ್ವ-ಮಧ್ಯ ಅರಬ್ಬಿ ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿರುವ ಚಂಡಮಾರುತ ಪರಿಚಲನೆಯು ಮುಂದುವರಿದಿದೆ. ಆಗ್ನೇಯ ಅರಬ್ಬಿ ಸಮುದ್ರ ಮತ್ತು ಅದನ್ನು ಹೊಂದಿಕೊಂಡಿರುವ ಲಕ್ಷದ್ವೀಪ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದವರೆಗೆ ವ್ಯಾಪಿಸಿದ್ದ ಚಂಡಮಾರುತ ಪರಿಚಲನೆಯು ಈಗ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.

ಭೀಕರ ಚಂಡಮಾರುತ ಮುರಸು, ಆಂಧ್ರಪ್ರದೇಶ, ತಮಿಳುನಾಡು ಮತ್ತು ನೆರೆಯ ರಾಜ್ಯಗಳ ಮೇಲೆ ಭಾರೀ ಪ್ರಭಾವ ಬೀರಿದೆ. ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಚಂಡಮಾರುತದ ಪರಿಣಾಮ ಬೀರಿದೆ. ದಕ್ಷಿಣ ಭಾರತದಲ್ಲಿ ಮುಂದಿನ ಎರಡರಿಂದ ಮೂರು ದಿನಗಳ ವರೆಗೆ ಭಾರೀ ಮಳೆ ಆಗುವ ಸಾಧ್ಯತೆ ಇದೆ. ರಾಯಲಸೀಮಾ ಭಾಗದಲ್ಲಿಯೂ ಸಹ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ತಮಿಳುನಾಡಿನ ಚೆನ್ನೈ, ತಿರುವಲ್ಲೂರು, ರಾಣಿಪೇಟೆ, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಎಚ್ಚರಿಸಿದೆ. ಮುರಸು ಚಂಡಮಾರುತದ ಪ್ರಭಾವವು ಒಳನಾಡಿಗೆ ವಿಸ್ತರಿಸಲಿದ್ದು, ಮಂಗಳವಾರ ತೆಲಂಗಾಣದಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸೇರಿದಂತೆ, ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಗಂಟೆಗೆ 60-70 ಕಿ.ಮೀ. ವೇಗದಲ್ಲಿ ಬೀಸಲಿರುವ ಬಿರುಗಾಳಿ ಬೀಸಲಿದ್ದು, 80 ಕಿ.ಮೀ. ವೇಗದಲ್ಲಿ ಬೀಸಲಿದೆ. ಇನ್ನು ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲೂ ಮಳೆ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+