Imd Weather Forecast: ಅರ್ನಬ್ ಚಂಡಮಾರುತದ ಪ್ರಭಾವ: ದೇಶಾದ್ಯಂತ ಭಾರೀ ಮಳೆ, ಚಳಿ ಹೆಚ್ಚಳ; ಹಲವು ರಾಜ್ಯಗಳಿಗೆ ಆರೆಂಜ್ ಅಲರ್ಟ್

ನವದೆಹಲಿ: ಅನರ್ಬ್ ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಳಿ ಹೆಚ್ಚಾಗಿದೆ.

ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿದ್ದ ಅನರ್ಬ್ ಎಂಬ ಅತ್ಯಂತ ತೀವ್ರ ಚಂಡಮಾರುತವು, ನಿಧಾನವಾಗಿ ವಾಯುವ್ಯ ದಿಕ್ಕಿನತ್ತ ಚಲಿಸಿತು. ಇದು ಬಾವಲ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಆಂಧ್ರಪ್ರದೇಶ ಮತ್ತು ಯಾನಂ ಶರಾವಳಿಯನ್ನು ದಾಟಿತು. ಈ ಚಂಡಮಾರುತವು ಗಂಟೆಗೆ 125-135 ಕಿ.ಮೀ ವೇಗದ ಗಾಳಿಯನ್ನು (ಗರಿಷ್ಠ 150 ಕಿ.ಮೀ ವೇಗದವರೆಗಿನ ಬಿರುಗಾಳಿಯೊಂದಿಗೆ) ಹೊಂದಿತ್ತು. ಇತ್ತೀಚಿನ ವೀಕ್ಷಣೆಗಳ ಪ್ರಕಾರ, ಚಂಡಮಾರುತದ ಕೇಂದ್ರ ಭಾಗವು ಸಂಪೂರ್ಣವಾಗಿ ಭೂಪ್ರದೇಶವನ್ನು ಪ್ರವೇಶಿಸುವುದರೊಂದಿಗೆ, ಭೂಸ್ಪರ್ಶ ಪ್ರಕ್ರಿಯೆಯು ಪೂರ್ಣಗೊಂಡಿದೆ.

IMD Weather Forecast Cyclone Arnab Brings Heavy Rain and Colder Weather Across India Orange Alert Several States

ವಾಯುವ್ಯ ದಿಕ್ಕಿನತ್ತ ತನ್ನ ಚಲನೆಯನ್ನು ಮುಂದುವರಿಸಿರುವ ಈ ಚಂಡಮಾರುತವು, ಆಂಧ್ರಪ್ರದೇಶ ಮತ್ತು ಯಾನಂ ಹಾಗೂ ಪಕ್ಕದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಕೇಂದ್ರೀಕೃತವಾಗಿದೆ. ಮುಂದುವರಿದು ಮುಂದಿನ 06 ಗಂಟೆಗಳಲ್ಲಿ ಇದು 'ಚಂಡಮಾರುತ ಅಗಿ ದುರ್ಬಲಗೊಳ್ಳಲಿದ್ದು, ತದನಂತರದ 6 ಗಂಟೆಗಳಲ್ಲಿ 'ತೀವ್ರ ವಾಯುಭಾರ ಕುಸಿತವಾಗಿ ಮತ್ತಷ್ಟು ದುರ್ಬಲಗೊಳ್ಳಲಿದೆ.

ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದವರೆಗೆ ವಿಸ್ತರಿಸಿರುವ ಮೇಲ್ಮುಖ ಚಂಡಮಾರುತ ಪರಿಚಲನೆ ಇನ್ನೂ ಮುಂದುವರಿದಿದೆ. ಇದರ ಪ್ರಭಾವದಿಂದ, ಮುಂದಿನ 24 ಗಂಟೆಗಳಲ್ಲಿ ಅದೇ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ.

ಆಂಧ್ರಪ್ರದೇಶ ಕರಾವಳಿಯ ಸಮೀಪವಿರುವ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಿಂದ, ಅದೇ ಪ್ರದೇಶದಲ್ಲಿ (ಆಂಧ್ರಪ್ರದೇಶ ಕರಾವಳಿಯ ಆಚೆಗಿನ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ) ನೆಲೆಗೊಂಡಿರುವ 'ಅರ್ನಬ್' (Arnab) ಎಂಬ ಅತ್ಯಂತ ತೀವ್ರ ಚಂಡಮಾರುತಕ್ಕೆ ಸಂಬಂಧಿಸಿದ ಚಂಡಮಾರುತ ವರಿಚಲನೆಯವರೆಗೆ ವಿಸ್ತರಿಸಿದ್ದ, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗಿನ 'ಟ್ರಫ್' ಈಗ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಪ್ರದೇಶಗಳಲ್ಲಿ ಮಳೆ ಆರ್ಭಟ ಜೋರು

ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ದೆಹಲಿ ಮತ್ತು ಎನ್‌ಸಿಆರ್ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ. ದೆಹಲಿಯಲ್ಲಿ ಮಳೆ ಆಗುತ್ತಿರುವುದರಿಂದ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಏತನ್ಮಧ್ಯೆ, ಅರ್ನಬ್ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ ಆಗುತ್ತಿದೆ.

ಅಕ್ಟೋಬರ್ 29ರಂದು ದಕ್ಷಿಣ ಛತ್ತೀಸ್‌ಗಢ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಒಡಿಶಾದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಭಾರತದಾದ್ಯಂತ ಹವಾಮಾನದ ಮೇಲೆ ಇತರ ವ್ಯವಸ್ಥೆಗಳು ಪ್ರಭಾವ ಬೀರುತ್ತಿದೆ.

ದೆಹಲಿ-ಎನ್‌ಸಿಆರ್ ಸಾಮಾನ್ಯವಾಗಿ ಮೋಡ ಕವಿದಿರುವ ಸಾಧ್ಯತೆ ಇದೆ. ಹರಿಯಾಣ, ಚಂಡೀಗಢ, ಜಾರ್ಖಂಡ್ ಮತ್ತು ಪಂಜಾಬ್‌ನ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಮಿಂಚು - ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮಳೆ ಮುಂದುವರಿದಿದೆ. ರಾಜಸ್ಥಾನದಲ್ಲಿ ಪ್ರತ್ಯೇಕವಾಗಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲೂ ಮಳೆ ಆರ್ಭಟ ಮುಂದುವರಿದಿದೆ.

ಛತ್ತೀಸ್‌ಗಢ, ಹರಿಯಾಣ, ಮಧ್ಯಪ್ರದೇಶ ಹಾಗೂ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಇನ್ನು ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ.

ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು ?

ಅರ್ನಬ್ ಚಂಡಮಾರುತದ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶ, ಪುದುಚೇರಿ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ವಿಪತ್ತಿನ ಸಂದರ್ಭದಲ್ಲಿ ಜನರ ಕಷ್ಟವನ್ನು ತಗ್ಗಿಸಲು ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಪ್ರವೃತ್ತವಾಗಿವೆ. ಅಲ್ಲದೆ ಯುದ್ಧೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಮುಂದುವರಿಸಿವೆ. ಪರಿಣಾಮವನ್ನು ನಿರ್ಣಯಿಸಲು ಮತ್ತು ಅಗತ್ಯವಿರುವ ಹೆಚ್ಚಿನ ಸಹಾಯವನ್ನು ನೀಡಲು ಐಎಂಸಿಟಿಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ಭಾರತ ಸರ್ಕಾರವು ದೃಢನಿಶ್ಚಯದಿಂದ ಜನರೊಂದಿಗೆ ನಿಂತಿದೆ ಎಂದೂ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+