IMD Weather Forecast: ನವೆಂಬರ್ 15ಕ್ಕೆ 'ಸೆನ್ಯಾರ್' ಚಂಡಮಾರುತ ಸೃಷ್ಟಿ?, ಈ ರಾಜ್ಯಗಳಿಗೆ ಭಾರೀ ಮಳೆ ಸಂಭವ
IMD Weather Forecast: ದಕ್ಷಿಣ ಭಾರತದ ರಾಜ್ಯಗಳಿಗೆ ಮತ್ತೆ ಭಾರೀ ಮಳೆ ಮುನ್ಸೂಚನೆ ಸಿಕ್ಕಿದೆ. ಬಂಗಾಳಕೊಲ್ಲಿ, ಅಂಡಮಾನ್ ನಿಕೋಬಾರ್ ಭಾಗದ ಸಮುದ್ರ ಮೇಲ್ಮೈನಲ್ಲಿ ವಾಯುಭಾರತ ಕುಸಿತ ಉಂಟಾಗಿದೆ. ಇದು ಮುಂದಿನ ನವೆಂಬರ್ 15ರಂದು ಸ್ಪಷ್ಟ 'ಸೆನ್ಯಾರ್' ('Senyar') ಚಂಡಮಾರುತವಾಗಿ ಬದಲಾಗುವ ನಿರೀಕ್ಷೆಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇಳದ ತಿರುವನಂತಪುರಂನ ಕರಾವಳಿ ಭಾಗದಲ್ಲಿ ಈಗಾಗಲೇ ಜಿಟಿಜಿಟಿ ಮಳೆ ಸುರಿಯುತ್ತಿದೆ. ಇಂದು ಶುಕ್ರವಾರ (ನವೆಂಬರ್ 13) ರಂದು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ದಕ್ಷಿಣ ಭಾರತದ ಪರ್ಯಾಯ ದ್ವೀಪ ಪ್ರದೇಶಗಳ ಮೇಲೆ ಪ್ರಭಾವ ಬೀರಲಿದ್ದು, ಇದರಿಂದ ಕೇರಳದಲ್ಲಿ ಮುಂದಿನ 3ದಿನ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ.

ಹವಾಮಾನ ಇಲಾಖೆಯು ತಿಳಿಸಿರುವ ಪ್ರಕಾರ, ಅಂಡಮಾನ್ ಸಮುದ್ರದ ಮಧ್ಯಭಾಗ, ಅದರ ಪಕ್ಕದಲ್ಲಿರುವ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳ ಸಮೀಪ ಇಂದು ಬೆಳಗ್ಗೆ 5:30ಕ್ಕೆ ಸ್ಪಷ್ಟ ವಾಯು ಚಂಡಮಾರುತ ಪರಿಚಲನೆ ಸೃಷ್ಟಿಯಾಗಿರುವುದು ಕಂಡು ಬಂದಿದೆ. ಈ ವ್ಯವಸ್ಥೆ ಮತ್ತಷ್ಟು ತೀವ್ರಗೊಂಡರೆ ಚಂಡಮಾರುತವಾಗಿ ಬದಲಾಗುವ ಲಕ್ಷಣಗಳು ಇವೆ.
ನವೆಂಬರ್ 15ಕ್ಕೆ 'ಸೆನ್ಯಾರ್' ಚಂಡಮಾರುತ ಸೃಷ್ಟಿ ಸಂಭವ
ಸದ್ಯಕ್ಕೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ನಿರ್ಮಾಣವಾಗಿದೆ. ಅದು ನವೆಂಬರ್ 15 ರ ವೇಳೆಗೆ ತೀವ್ರಗೊಂಡು ಇನ್ನಷ್ಟು ತೀವ್ರವಾಗಿ 'ಸೆನ್ಯಾರ್' ಚಂಡಮಾರುತವಾಗಿ ಬದಲಾಗಿ ಭೂಮಿಗೆ ಅಪ್ಪಳಿಸಲಿದೆ. ಇಂದಿನಿಂದಲೇ ಈ ವೈಪರೀತ್ಯದ ಬಿರುಗಾಳಿಯು ವಾಯುವ್ಯ ದಿಕ್ಕಿನತ್ತ ಚಲಿಸಿ, ನವೆಂಬರ್ 15ರ ವೇಳೆಗೆ ತೀವ್ರಗೊಂಡರೆ ದಕ್ಷಿಣ ಭಾರತ ಕೇರಳೆ, ತಮಿಳುನಾಡು, ಕರ್ನಾಟಕ, ಆಂಧ್ರದ ಕೆಲವು ಭಾಗಗಳಿಗೆ ಭಾರೀ ಮಳೆ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
60 ಕಿ.ಮೀ. ವೇಗದಲ್ಲಿ ಬೀಸುತ್ತೆ ಬಿರುಗಾಳಿ!
ಈ ಬದಲಾದ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಅಂಡಮಾನ್ ಸಮುದ್ರದಲ್ಲಿ ನವೆಂಬರ್ 13 ಮತ್ತು 14 ಹಾಗೂ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ನವೆಂಬರ್ 13 ರಿಂದ 16 ರವರೆಗೆ ಗಾಳಿಯ ವೇಗ 50 -60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಗಾಳಿಯ ವೇಗವು ಗಂಟೆಗೆ 55 ಕಿ.ಮೀ. ನಷ್ಟಿರಲಿದೆ ಎಂದು ಮುನ್ನೆಚ್ಚರಿಕೆ ಕೊಡಲಾಗಿದೆ. ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಒಣಹವೆ, ಮಳೆ ಮುನ್ಸೂಚನೆ ಇದೆ
ಸದ್ಯದ ಮುನ್ಸೂಚನೆ ಪ್ರಕಾರ, ಮುಂದಿನ ಮೂರು ದಿನಗಳ ಕಾಲ (ನ.15) ನವದೆಹಲಿ ಹರಿಯಾಣ ಮತ್ತು ಚಂಡೀಗಢದಲ್ಲಿ ಒಣ ಹವಾಮಾನ ಕಂಡು ಬರಲಿದೆ. ಬೇರೆ ಯಾವ ಭಾಗದಲ್ಲೂ ಭಾರೀ ಮಳೆಯ ಮುನ್ಸೂಚನೆ ಇಲ್ಲ. ಇನ್ನೂ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಹಗುರ ಮಳೆ ಸಾಧ್ಯತೆ ಇದೆ.
ನವೆಂಬರ್ 14ರಂದು ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಗುಡುಗು ಸಹಿತ ಜೋರು ಮಳೆ ಸಂಭವವಿದೆ. ರಾಜಸ್ಥಾನ ಪಶ್ಚಿಮ ಒಂದೆರಡು ಪ್ರದೇಶಗಳು ವ್ಯಾಪಕ ಮಳೆಗೆ ಸಾಕ್ಷಿಯಾಗಲಿವೆ. ಅದರ ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.




Click it and Unblock the Notifications
