Super cyclone Sitrang : ಭಾರತಕ್ಕೆ ಸೂಪರ್ ಸೈಕ್ಲೋನ್ 'ಸೀತ್ರಾಂಗ': IMD ಪ್ರತಿಕ್ರಿಯೆ ಏನು?

ಬೆಂಗಳೂರು, ಅಕ್ಟೋಬರ್ 16: ಭಾರತದ ಬಂಗಾಳಕೊಲ್ಲಿ ಪ್ರದೇಶ ಬಂಗಾಳಕೊಲ್ಲಿ ಭಾಗಕ್ಕೆ ಚೆಂಡಮಾರುತ 'ಸೀತ್ರಾಂಗ' ಬಂದಪ್ಪಳಿಸಲಿದೆ ಎಂಬ ವಿಚಾರಗಳಿಗೆ ಭಾರತೀಯ ಹವಾಮಾನ ಇಲಾಖೆ ಸ್ಪಷ್ಟನೆ ನೀಡಿದೆ.

ಶೀಘ್ರವೇ ಬಂಗಾಳಕೊಲ್ಲಿಯ ಭಾರತ ಕರಾವಳಿಗೆ ಸೂಪರ್ ಸೈಕ್ಲೋನ್ 'ಸೀತ್ರಾಂಗ' ಚೆಂಡಮಾರುತ ಅಪ್ಪಳಿಸಲಿದೆ ಎಂದು ಕೆನಡಾದ ಸಾಸ್ಕಾಚೆವಾನ್ ವಿಶ್ವವಿದ್ಯಾಲಯದ ಹವಾಮಾನ ವಿಷಯದ ಪಿಎಚ್‌ಡಿ ವಿದ್ಯಾರ್ಥಿ ಭವಿಷ್ಯ ನುಡಿದಿದ್ದಾರೆ. ಈದಾದ ಬಳಿಕ ಅನೇಕರು ಈ ವಿಷಯ ಕುರಿತು ಮಾತನಾಡಿದ್ದರು. ಹೀಗೆ ಇದು ಚರ್ಚೆಗೆ ಗ್ರಾಸವಾಗಿದ್ದರೆ ಬೆನ್ನಲ್ಲೆ ಭಾರತೀಯ ಹವಾಮಾನ ಇಲಾಖೆ ಸೈಕ್ಲೋನ್ ಕುರಿತು ಸ್ಪಷ್ಟನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆಯ ತಜ್ಞರು ಸೈಕ್ಲೋನ್ ಕುರಿತು ಯಾವ ಸಲಹೆಯನ್ನು ದೇಶಕ್ಕೆ ನೀಡಲಾಗಿಲ್ಲ. ಅಕ್ಟೋಬರ್ 18 ರ ಸುಮಾರಿಗೆ ಬಂಗಾಳ ಕೊಲ್ಲಿಯ ಕರಾವಳಿ ಭಾಗಕ್ಕೆ ಅಪ್ಪಳಿಸುವ ಸೂಪರ್ ಸೈಕ್ಲೋನ್ ವರದಿಗಳನ್ನು ಕೇವಲ 'ವದಂತಿಗಳು' ಎಂದು ಕರೆದಿದ್ದಾರೆ.

IMD Reaction about Super Cyclone Sitrang come to Indian Coast on Oct. 18th

ಈ ಸೂಪರ್ ಸೈಕ್ಲೋನ್‌ಗೆ ಸಹ ಸೀತ್ರಾಂಗ್ ಎಂದು ಹೆಸರಿಡಲಾಗಿದೆ. ಇದು ಅಂಫಾನ್ ಚಂಡಮಾರುತದಂತೆಯೇ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿಬಂದಿವೆ. ಆದರೆ ಭಾರತೀಯ ಹವಾಮಾನ ಇಲಾಖೆ ಮಾತ್ರ ತಾನು ಈ ಚಂಡಮಾರುತದ ಬಗ್ಗೆ ಯಾವ ಮುನ್ಸೂಚನೆಯನ್ನು ನೀಡಿಲ್ಲ ಎಂದು ತಿಳಿಸಿದೆ.

ಅ.18ಕ್ಕೆ ಕೇವಲ ವಾಯುಭಾರ ಕುಸಿತ ಸಾಧ್ಯತೆ

ಇತ್ತ ಚೆಂಡಮಾರುತದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಅತ್ತ ಸರ್ಕಾರ ಯಾವುದೇ ನಿರ್ದಿಷ್ಟ ಮಾಹಿತಿ, ಮುನ್ಸೂಚನೆ ಇಲ್ಲದಿದ್ದರೂ ಸಹ ಚಂಡಮಾರುತವನ್ನು ಎದುರಿಸಲು ಸದಾ ಸಿದ್ದ ಎಂದು ಹೇಳಿಕೊಂಡಿದೆ. ಈ ಹಿಂದಿನಂತೆ ಸೈಕ್ಲೋನ್ ವೇಳೆ ಸೂಚಿಸುವಂತೆ ಈಗಾಗಲೇ ಕ್ಷೇತ್ರಮಟ್ಟದಲ್ಲಿ, ಜಿಲ್ಲಾಡಳಿತ ಮತ್ತು ಅಧಿಕಾರಿಗಳಿಗೆ, ಸ್ವಯಂಸೇವಕರಿಗೆ ಸಿದ್ದರಾಗಿರುವಂತೆ ಸರ್ಕಾರ ತಿಳಿಸಿದೆ ಎನ್ನಲಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ಅಕ್ಟೋಬರ್ 18ರ ನಂತರ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಕಂಡು ಬರುವ ಸಾಧ್ಯತೆ ಇದ್ದು, ಅದು ಪಶ್ಚಿಮ ಬಂಗಾಳ ಕೊಲ್ಲಿಯ ಕಡೆಗೆ ಚಲಿಸಿ ನಂತರ ಅಕ್ಟೋಬರ್ 20ರ ಹೊತ್ತಿಗೆ ದುರ್ಬಲಗೊಳ್ಳಲಿದೆ. ಆದರೆ ಸೂಪರ್ ಸೈಕ್ಲೋನ್ ನಂತಹ ಯಾವುದೇ ಮುನ್ಸೂಚನೆಗಳು ಸದ್ಯಕ್ಕೆ ಇಲ್ಲ. ಈ ಬಗ್ಗೆ ಹವಾಮಾನ ಇಲಾಖೆ ವರದಿಯಲ್ಲೂ ಸಹ ಉಲ್ಲೇಖಿಸಲಾಗಿಲ್ಲ.

IMD Reaction about Super Cyclone Sitrang come to Indian Coast on Oct. 18th

ಸಂಭಾವ್ಯ ಸೂಪರ್ ಸೈಕ್ಲೋನ್ ಉಂಟಾಗುವುದೇ ಇದ್ದಲ್ಲಿ ಅದು ಮೊದಲು ಭಾರತದ ಕರಾವಳಿಯಾದ ಪಶ್ಚಿಮಬಂಗಾಳ ಮತ್ತು ಬಾಂಗ್ಲಾದೇಶದ ಸುಂದರಬನ್ಸ್ ಕರಾವಳಿ ಪ್ರದೇಶದಲ್ಲಿ ಮೂರು ದಿನಕ್ಕು ಮೊದಲೇ ಆಂಧ್ರಪ್ರದೇಶ ಕರಾವಳಿಯ ಮೇಲೆ ವಾಯುಭಾರ ಭೂಕುಸಿತವನ್ನು ಉಂಟು ಮಾಡುತ್ತದೆ. ಆಗ ಈ ಬಗ್ಗೆ ನಿಖರವಾಗಿ ತಿಳಿಯಲಿದ್ದು, ಆತಂಕ ಪಡುವ ಅಗತ್ಯ ಇಲ್ಲ. ಒಂದು ವೇಳೇ ಈ ಚೆಂಡಮಾರುತ ಬಂದು ಅಪ್ಪಳಿಸಿದ್ದೆ ಆದರೆ ಸಮುದ್ರದಲ್ಲಿ 15ರಿಂದ 20 ಅಡಿ ಎತ್ತರದಷ್ಟು ಅಲೆಗಳನ್ನು ಕಾಣಬಹುದಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+