ಮಹಾರಾಷ್ಟ್ರದಲ್ಲಿ ಮಳೆಯ ರೆಡ್ ಅಲರ್ಟ್, ಕರ್ನಾಟಕಕ್ಕೂ ಸಂಕಷ್ಟ
ಪುಣೆ, ಸೆಪ್ಟೆಂಬರ್, 7: ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಗೋವಾ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಅಸ್ಸಾಂ, ಮೇಘಾಲಯ, ಕರ್ನಾಟಕ ಹಾಗೂ ಕೇರಳದಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ವಿದರ್ಭಾ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಒಡಿಶಾ, ಗುಜರಾತ್ ನಲ್ಲಿ ಭಾರಿ ಮಳೆಯಾಗಲಿದೆ.

ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿದ್ದು, ಮತ್ತೆ ನೀರು ಬೆಳಗಾವಿಯತ್ತ ಹರಿದುಬರುತ್ತಿದೆ. ಚಿಕ್ಕೋಡಿ ಸಮೀಪ ಏಳು ಸೇತುವೆಗಳು ಜಲಾವೃತವಾಗಿದೆ. ಕೇವಲ ಒಂದು ವಾರಗಳ ಕಾಲ ಬಿಡುವು ಪಡೆದುಕೊಂಡಿದ್ದ ಮಳೆರಾಯ ಮತ್ತೆ ರುದ್ರ ನರ್ತನ ಆರಂಭಿಸಿದ್ದಾನೆ.
ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮಳೆ ಆರಂಭವಾಗಿದೆ.
ಇನ್ನು ಬೆಂಗಳೂರಿನಲ್ಲೂ ಮೋಡಕವಿದ ವಾತಾವರಣವಿದ್ದು ಪ್ರತಿನಿತ್ಯ ಸಂಜೆ ವೇಳೆಗೆ ಮಳೆಯಾಗುತ್ತಿದೆ. ಭಾಗಮಂಡಲ, ಸುಬ್ರಹ್ಮಣ್ಯ, ಕೊಟ್ಟಿಗೆಹಾರ, ಕೊಲ್ಲೂರು, ಮೂಡಿಗೆರೆ, ಹುಂಚದಕಟ್ಟೆ, ಶೃಂಗೇರಿಯಲ್ಲಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿದೆ.












Click it and Unblock the Notifications