ನೈಋತ್ಯ ಮುಂಗಾರು; ಜುಲೈ 8ರಿಂದ 12ರವರೆಗೆ ಈ ರಾಜ್ಯಗಳಲ್ಲಿ ಮಳೆಯೋ ಮಳೆ...
ನವದೆಹಲಿ,
ಜುಲೈ 08: ಕೆಲವು ದಿನಗಳಿಂದ ಬಿಡುವು ಪಡೆದುಕೊಂಡಿದ್ದ ನೈಋತ್ಯ ಮುಂಗಾರು ಜುಲೈ 8ರ ನಂತರ ಚುರುಕಾಗಲಿದೆ. ಜುಲೈ ಎರಡನೇ ವಾರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. id="toptextpromo"> id='are-slot-1' class='oiad oi-axt oiadv'>ಜುಲೈ
11 ಹಾಗೂ 12ರಂದು ಕೆಲವು ರಾಜ್ಯಗಳಲ್ಲಿ ಅತಿ ಹೆಚ್ಚಿನ ಮಳೆಯಾಗಲಿದೆ. ಮಹಾರಾಷ್ಟ್ರ, ಗೋವಾ, ಆಂಧ್ರ ಕರಾವಳಿ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳದಲ್ಲಿ ಜುಲೈ 8ರಿಂದ 12ರವರೆಗೆ ಅತಿ ಹೆಚ್ಚಿನ ಮಳೆ ದಾಖಲಾಗುವುದಾಗಿ ಮುನ್ನೆಚ್ಚರಿಕೆ ನೀಡಿದೆ. ಅದರಲ್ಲೂ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವುದೆಂದು ತಿಳಿಸಿದೆ. ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಜುಲೈ 8 ಹಾಗೂ ಜುಲೈ 12ರಂದು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮುಂದೆ ಓದಿ... id='are-slot-2' class='oiad oi-axt oiadv'>
ಮುಂದಿನ ಐದು ದಿನಗಳ ಕಾಲ ಮಳೆ
ಮುಂದಿನ ಐದು ದಿನಗಳ ಕಾಲ ಮಧ್ಯ ಪ್ರದೇಶ, ವಿಧರ್ಬಾ, ಛತ್ತೀಸ್‌ಗಡ, ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ. ಜುಲೈ 8 ಹಾಗೂ 9ರಂದು ವಿದರ್ಭಾ ಹಾಗೂ ಛತ್ತೀಸ್‌ಗಡದಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿಯೂ ಭಾರೀ ಮಳೆ ಸೂಚನೆ
ಜುಲೈ 9ರ ನಂತರ ಜಮ್ಮು, ಕಾಶ್ಮೀರ, ಲಡಾಖ್, ಪಂಜಾಬ್ ನಲ್ಲಿ ಸಾಧಾರಣ ಮಳೆಯಾಗಲಿದೆ. ಜುಲೈ 11 ಹಾಗೂ 12ರಂದು ಹೆಚ್ಚಿನ ಮಳೆಯಾಗುವುದು ಎಂದು ಸೂಚನೆ ನೀಡಿದೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಜುಲೈ 10ರಂದು ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಜುಲೈ 12ರವರೆಗೂ ಮಳೆ
ಜುಲೈ 8ರಿಂದ ಮತ್ತೆ ಮುಂಗಾರು ಆರಂಭವಾಗಿ ಜುಲೈ 12ರವರೆಗೆ ಮಹಾರಾಷ್ಟ್ರ, ಗೋವಾ, ಆಂಧ್ರ ಕರಾವಳಿ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳದಲ್ಲಿ ಅತಿಯಾದ ಮಳೆಯಾಗುವುದಾಗಿ ತಿಳಿಸಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯಿಂದ ನೈಋತ್ಯ ಮುಂಗಾರು ಬಲಗೊಳ್ಳಲಿದ್ದು, ಕರಾವಳಿ ರಾಜ್ಯಗಳು ಹೆಚ್ಚಿನ ಮಳೆಗೆ ಒಡ್ಡಿಕೊಳ್ಳಲಿವೆ ಎಂದು ತಿಳಿಸಿದೆ.
Recommended Video

ಜುಲೈ 12ರ ನಂತರ ಉತ್ತರ ಭಾರತದಲ್ಲಿ ಕಡಿಮೆ ಮಳೆ
ಜುಲೈ 9ರಿಂದ 12ರವರೆಗೆ ಉತ್ತರ ಭಾರತದಲ್ಲಿ ಮಳೆಯಾಗಲಿದೆ. ಆನಂತರ ಮಳೆ ಕಡಿಮೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಜುಲೈ 2ನೇ ವಾರದ ನಂತರ ಮಳೆ ಕಡಿಮೆಯಾಗುವುದಾಗಿ ತಿಳಿಸಿದೆ.












Click it and Unblock the Notifications