India's Monsoon Forecast: ಕರ್ನಾಟಕ ಸೇರಿ ದೇಶದಲ್ಲಿ ಈ ಬಾರಿ ಸಾಮಾನ್ಯ ಮುಂಗಾರು, ಶೇ.20ರಷ್ಟು ಬರಗಾಲ: IMD
ನವದೆಹಲಿ, ಏಪ್ರಿಲ್ 11: ಭಾರತದ ದೇಶವು ಪ್ರಸ್ತಕ 2023ರಲ್ಲಿ ಸಾಮಾನ್ಯ ಮುಂಗಾರು ಮಳೆಗೆ ದಾಖಲಾತಿಗೆ ಸಾಕಷ್ಟಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ರವಿಚಂದ್ರನ್ ಅವರು, ದೇಶದ ವಾಯುವ್ಯ ಭಾರತ, ಪಶ್ಚಿಮ, ಮಧ್ಯ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಅಂದರೆ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮೂಲಕ ಅವರು ದೇಶದ ಮುಂಗಾರು ಮಳೆ (ನೈಋತ್ಯ ಮಾನ್ಸೂನ್ 2023)ಕುರಿತು ದೀರ್ಘಾವಧಿ ಮುನ್ಸೂಚನೆ ನೀಡಿದರು.

ಇದೇ ಮಾತನಾಡಿದ ಭಾರತ ಹವಾಮಾನ ಇಲಾಖೆಯ ಪ್ರವನಶಾಸ್ತ್ರ ಪ್ರಧಾನ ನಿದೇಶಕ ಡಾ.ಮೃತ್ಯುಂಜಯ ಮೊಹಾಪಾತ್ರ ಅವರು, ದೇಶದಲ್ಲಿ ಎಲ್ ನಿನೋ ಪ್ರಭಾವದಿಂದಾಗಿ ಈ ಭಾರಿ ಸಾಮಾನ್ಯ ಮುಂಗಾರು ನಿರೀಕ್ಷೆ ಇದೆ. ದಕ್ಷಿಣ ಅಮೆರಿಕಾದ ಬಳಿಯ ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ಬೆಚ್ಚಗಾಗುವಿಕೆಯ ಮುಂಗಾರಿನ ಮೇಲೆ ಪ್ರಭಾವ ಭೀರಲಿದೆ ಇದನ್ನು ಎಲ್ ನಿನೋ ಎನ್ನಲಾಗುತ್ತದೆ ಎಂದರು.
ಹಿಂದೂ ಮಹಾಸಾಗರದಲ್ಲಿನ ಹವಾಮಾನ ಬದಲಾವಣೆಗಳು, ಆ ಭಾಗದಿಂದ ಬೀಸುವ ಗಾಳಿ ಸೇರಿದಂತೆ ಹಲವು ಅಂಶಗಳು ಭಾರತದಲ್ಲಿನ ಮುಂಗಾರು ಮಳೆಯ ಪ್ರಮಾಣ ನೀರ್ಧರಿಸಲಿವೆ. ಈ ಸಂಬಂಧ ಹವಾಮಾನ ಇಲಾಖೆ ಒಂದಷ್ಟು ಅಂಶಗಳನ್ನು ತಿಳಿಸಿದೆ.

ಐಎಂಡಿ ಮುನ್ಸೂಚನೆಯಲ್ಲಿನ ಮುಖ್ಯ ಅಂಶಗಳು
* ಪೆನಿನ್ಸುಲರ್ ಇಂಡಿಯಾ, ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.
* ಮುಂದಿನ ತಿಂಗಳು ಮೇ ಅಂತ್ಯ ದೇಶಕ್ಕೆ ಮುಂಗಾರು ಮಾರುತಗಳ ಆಗಮನ ನಿರೀಕ್ಷೆ ಇದೆ.
* ಪ್ರತಿ ವರ್ಷದಂತೆ ಈ ವರ್ಷ ಎಲ್ ನಿನೋ ಕಾರಣದಿಂದ ದೇಶದಕ್ಕೆ ಕೆಟ್ಟ ಮಾನ್ಸೂನ್ ನಿರೀಕ್ಷೆ ಇಲ್ಲ. ಹಿಂದಿನ ಎಲ್ ನಿನೊ ಕಾರಣದಿಂದ ಸುಮಾರು ಶೇಕಡಾ 40ರಷ್ಟು ಅಧಿಕ ಮಳೆ ನಿರೀಕ್ಷೆ ಇತ್ತು.
* ಹಿಂದೂ ಮಹಾಸಾಗರದ ದ್ವಿಧ್ರುವಿ ಪರಿಸ್ಥಿತಿಗಳು ಭಾರತೀಯ ಬೇಸಿಗೆ ಮಾನ್ಸೂನ್ ಮಳೆಗೆ ಅನುಕೂಲಕರವಾಗಿದೆ. ಹೀಗಾಗಿಯೇ ಪೂರ್ವ ಮುಂಗಾರು ಜೋರಾಗಿದೆ ಎನ್ನಲಾಗಿದೆ.
* 2023ರಲ್ಲಿ ದ್ವಿತಿಯಾರ್ಧದಲ್ಲಿ ಅಂದರೆ ಜುಲೈ ವೇಳೆಗೆ ಮುಂಗಾರು ಮಾನ್ಸೂನ್‌ನ ಮೇಲೆ ಎಲ್ ನಿನೋ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ ಎಂದು ಡಾ.ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
* ಮಾನ್ಸೂನ್ ಋತುವಿನಲ್ಲಿ ಎಲ್ ನಿನೋ ತೀವ್ರಗೊಳ್ಳುವ ಸಾಧ್ಯತೆ ಇದೆ.

* ಭಾರತೀಯ ಹವಾಮಾನ ಇಲಾಖೆಯು ಮುಂಬರಲಿರುವ ಮಾನ್ಸೂನ್ ನಲ್ಲಿ ದೇಶಕ್ಕೆ ಸಾಮಾನ್ಯ ಮಟ್ಟದಲ್ಲಿ ಅಂದರೆ 83.5 ಸೆಂಟಿ ಮೀಟರ್ ಮಳೆ ಬರಬಹುದು ಎಂದು ಅಂದಾಜಿಸಿದೆ.
* ಈ ಎಲ್ಲ ಕಾರಣಗಳಿಗೆ ಭಾರತವು ಈ ವರ್ಷ ಸಾಧಾರಣ ಮುಂಗಾರು ಮಳೆಗೆ ಸಾಕ್ಷಿಯಾಗಲಿದೆ ಎಂದು ಡಾ ಎಂ ರವಿಚಂದ್ರನ್ ಹೇಳಿದ್ದಾರೆ.
* ಮುಂದಿನ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ 83.5 ಸೆಂ.ಮೀ ಮಳೆ ನಿರೀಕ್ಷೆ ಇದೆ.
* ಎಲ್‌ನಿನೋ ಪ್ರಭಾವದಿಂದಾಗಿ ಸಾಧಾರಣ, ಸಾಮಾನ್ಯ ಮಳೆ ದಾಖಲಾತಿ ಸಾಧ್ಯತೆ ಇದೆ. ಇದರಿಂದಾಗಿ ದೇಶದಲ್ಲಿ ಶೇ.20ರಷ್ಟು ಬರಗಾಲದ ಬವಣೆ ಉಂಟಾಗಲಿದೆ ಎಂದು ತಜ್ಞರು ಅಂದಾಜಿದ್ದಾರೆ.
* ಮಾನ್ಸೂನ್ ಋತುವಿನಲ್ಲಿ ಸತತ ನಾಲ್ಕು ವರ್ಷಗಳ ನಂತರ ಸಾಮಾನ್ಯ ಮಳೆಯ ಆಗಮನವಾಗಲಿದೆ. ಇದು ರೈತರಲ್ಲಿ ಹೆಚ್ಚು ಕಳವಳ ಉಂಟಾಗಲು ಕಾರಣವಾಗಲಿದೆ. ಏಕೆಂದರೆ ಬಹುತೇಕ ರೈತರು ಮಳೆಯಾಧಾರಿತ ಬೆಳೆಗಳನ್ನೆ ಬೆಳೆಯುತ್ತಾರೆ.
* ಮುಂಗಾರು ಅವಧಿಯಾಗಿರುವ ಜೂನ್- ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಅವಧಿಗೆ 868.6 ಮಿಮೀ ಸರಿಸಾರಿ ಮಳೇ ಆಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications