ತಮಿಳು ಸ್ಟಾರ್ ಕಮಲ ಹಾಸನ್ ಗೆ ಯಾಕೆ ಬಿರಿಯಾನಿ ಮೇಲೆ ಕಣ್ಣು?

Posted By:
Subscribe to Oneindia Kannada

ನವದೆಹಲಿ, ಜನವರಿ 24: ತಮಿಳು ಸ್ಟಾರ್ ಕಮಲ ಹಾಸನ್ ಅವರು, ಬಿರಿಯಾನಿ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಅವರು, ಮಾಂಸಾಹಾರದ ಬಗ್ಗೆ ಮಾತನಾಡಿದ್ದಾರೆ.

ಅಷ್ಟಕ್ಕೂ ಅಪ್ಪಟ ಸಸ್ಯಾಹಾರಿಯಾದ ಕಮಲ ಹಾಸನ್ ಗೇಕೆ ಬಿರಿಯಾನಿ ಮೇಲೆ ಕಣ್ಣು ಅಂತೀರಾ ? ವಿಚಾರ ಅದಲ್ಲ, ಜಲ್ಲಿಕಟ್ಟು ಕ್ರೀಡೆಗೆ ಸಂಬಂಧಿಸಿದ್ದು.

If you want to ban jallikattu, ban biryani too says Kamal Hasan

ಈ ಹಿಂದೆ, ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿದ್ದಕ್ಕೆ ಕಮಲ ಹಾಸನ್ ಆಕ್ಷೇಪಿಸಿ, ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ನಿಷೇಧಿಸಲಿ ಎಂದು ಸವಾಲು ಹಾಕಿದ್ದಾರೆ.

If you want to ban jallikattu, ban biryani too says Kamal Hasan

ಅಂದರೆ, ಅವರ ಪ್ರಕಾರ, ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದು ಹಿಂಸೆ ಎನ್ನುವುದಾದರೆ, ಅಂಥ ಕ್ರೀಡೆಗಳಿಗೆ ನಿಷೇಧ ಹೇರುವುದಾದರೆ, ಅವುಗಳನ್ನು ಕೊಂದು ತಿನ್ನುವ ಪದ್ಧತಿಗೂ ನಿಷೇಧ ಹೇರಬೇಕು ಎನ್ನುವುದು ಅವರ ವಾದ.

ಒನ್ ಇಂಡಿಯಾ ಕಾಳಜಿ
ಜಲ್ಲಿಕ್ರೀಡೆಯ ಬಗ್ಗೆ ನಟ ಕಮಲ ಹಾಸನ್ ಹೇಳಿರುವ ಮಾತು ನಿಮಗೆ ರುಚಿಸಿತಾ? ರುಚಿಸಿದರೂ ಸರಿ, ರುಚಿಸದಿದ್ದರೂ ಸರಿ ನಿಮ್ಮ ಅಭಿಪ್ರಾಯವೇನು ಎಂದು ಕೆಳಗಿನ ಕಮೆಂಟ್ ಸ್ಥಳದಲ್ಲಿ ಪುಟ್ಟದಾಗಿ ತಿಳಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defending the game of jallikattu currently banned in Tamil Nadu, superstar Kamal Haasan today said he is a big fan and all those who hate the bull sport should give up on biryani too.
Please Wait while comments are loading...