ICSE, ISC 2020 ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ, ಜುಲೈ 10: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ 10ನೇ ತರಗತಿ ಐಸಿಎಸ್‌ಇ ಹಾಗೂ ಐಎಸ್‌ಸಿ 12ನೇ ತರಗತಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ.

Recommended Video

      Nepals bans Indian TV channels,ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರ ಬಂದ್ | Oneindia Kannada

      ಐಸಿಎಸ್‌ಇ 10ನೇ ತರಗತಿಯಲ್ಲಿ ಶೇ.99.34ರಷ್ಟು ಫಲಿತಾಂಶ ಬಂದಿದೆ. ಐಎಸ್‌ಸಿ ದ್ವಿತೀಯ ಪಿಯುಸಿಯಲ್ಲಿ ಶೇ.96.84ರಷ್ಟು ಫಲಿತಾಂಶ ಹೊರಬಿದ್ದಿದೆ.

      ಐಸಿಎಸ್‌ಇ ಪರೀಕ್ಷೆಯಲ್ಲಿ ಒಟ್ಟು 2.07 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಅದರಲ್ಲಿ 2.06.525 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

      ಐಸಿಎಸ್‌ಇ / ಐಎಸ್‌ಸಿ ಫಲಿತಾಂಶಗಳನ್ನು ನೋಡುವುದು ಹೇಗೆ? * CISCE, cice.org ಅಥವಾ examresults.net ವೆಬ್​ಸೈಟ್​ಗೆ ಭೇಟಿ ನೀಡಿ. * ಐಸಿಎಸ್ಇ ಅಥವಾ ಐಎಸ್ಸಿ ಕೋರ್ಸ್ ಆಯ್ಕೆ ಮಾಡಿಕೊಳ್ಳಿ, ಫಲಿತಾಂಶ 2020ರ ಮೇಲೆ ಕ್ಲಿಕ್ ಮಾಡಿ * ನಿಮ್ಮ ಪಠ್ಯಕ್ರಮ ವಿಷಯ ಆಯ್ಕೆ ಮಾಡಿಕೊಳ್ಳಿ, ಪ್ರವೇಶ ಸಂಖ್ಯೆ ಇತ್ಯಾದಿ ವಿವರ,ಯುಐಡಿ, ಸೂಚ್ಯಂಕ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ * 'Submit' ಕ್ಲಿಕ್ ಮಾಡಿ.

      ಫಲಿತಾಂಶ ವಿವರ ಪಡೆಯಿರಿ, ನಂತರ ಪ್ರಿಂಟ್ ಔಟ್ ಪಡೆಯಿರಿ.ಮಾರ್ಚ್ 19 ರಿಂದ 31ರ ಅವಧಿಯಲ್ಲಿ ನಡೆಯಬೇಕಿದ್ದ ಐಸಿಎಸ್‌ಇ ಹಾಗೂ ಐಎಸ್‌ಸಿ ಎಲ್ಲಾ ಪರೀಕ್ಷೆಗಳನ್ನು ಕೊರೊನಾವೈರಸ್ ಭೀತಿಯಿಂದ ಮುಂದೂಡಲಾಗಿತ್ತು.

      ICSE Class 10, ISC Class 12 Results Declared

      -ಈ ಮಂಡಳಿಗಳ ಪರೀಕ್ಷೆ ಬರೆದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು cisce.org ಮತ್ತು results.cisce.org ವೆಬ್ ಸೈಟ್​ಗಳಿಗೆ ಭೇಟಿ ನೀಡಬಹುದಾಗಿದೆ.

      -ಎಸ್ಸೆಮ್ಮೆಸ್ ಮೂಲಕವೂ ರಿಸಲ್ಟ್ ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಟೈಪ್ ಮಾಡಿ 9248082883ಗೆ ಮೆಸೇಜ್ ಕಳುಹಿಸಿದರೆ ಫಲಿತಾಂಶದ ವಿವರ ಸಿಗುತ್ತದೆ.

      ಅತ್ಯಧಿಕ ಪ್ರಮಾಣದಲ್ಲಿ ಜನರು ಭೇಟಿ ನೀಡುವುದರಿಂದ ಈ ಎರಡು ವೆಬ್​ಸೈಟ್​ಗಳು ಕ್ರ್ಯಾಷ್ ಆಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ವೆಬ್​ಸೈಟ್ ಕ್ರ್ಯಾಷ್ ಆದಲ್ಲಿ ಆತಂಕಪಡದಿರಿ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿದೆ.

      10ನೇ ತರಗತಿ ಪರೀಕ್ಷೆಯಲ್ಲಿ ಪ್ರತಿ ಸಬ್ಜೆಕ್ಟ್​ನಲ್ಲೂ ಪಾಸ್ ಆಗಲು ವಿದ್ಯಾರ್ಥಿಗಳು ಕನಿಷ್ಠ 33 ಅಂಕ ಪಡೆಯಬೇಕು. 12ನೇ ತರಗತಿ ಪರೀಕ್ಷೆ ತೇರ್ಗಡೆಯಾಗಲು ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 40 ಅಂಕ ಪಡೆಯಬೇಕು.

      ಜೂನ್ ತಿಂಗಳಿನಲ್ಲಿ ಈ ಬಗ್ಗೆ ಕೋರ್ಟಿಗೆ ಸ್ಪಷ್ಟನೆ ನೀಡಿದ ಸಿಐಎಸ್ಸಿಇ ಬೋರ್ಡ್, ಪರೀಕ್ಷೆಗಳನ್ನು ರದ್ದುಪಡಿಸಲು ಸಿದ್ಧವಾಗಿದ್ದು, ವಿದ್ಯಾರ್ಥಿಗಳಿಗೆ ಆಂತರಿಕ ಮೌಲೀಕರಣದ ಮೂಲಕ ಗ್ರೇಡ್ ನಿರ್ಧರಿಸಲಾಗುತ್ತದೆ ಎಂದು ಹೇಳಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+