• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸಮುದಾಯಕ್ಕೆ ಹರಡುತ್ತಿದೆಯಾ: ಐಸಿಎಂಆರ್ ಮಹತ್ವದ ರಿಪೋರ್ಟ್

|

ನವದೆಹಲಿ, ಜೂನ್ 12: ಲಾಕ್ ಡೌನ್ ಸಡಿಲಿಕೆಯ ನಂತರ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದರ ನಡುವೆ ಕೊರೊನಾ ವೈರಸ್ ಸಮುದಾಯಕ್ಕೆ ಹರಡಲು ಆರಂಭಿಸಿದೆಯಾ ಎನ್ನುವ ಭೀತಿ ಕಾಡಲು ಆರಂಭಿಸಿದೆ.

   Corona patient body get exchanged in Hyderabad | Oneindia Kannada

   ಸೋಂಕಿತರ ಪಟ್ಟಿಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದ್ದು, ಸೋಂಕಿತರ ಸಂಖ್ಯೆ ಮೂರು ಲಕ್ಷದ ಗಡಿಯಲ್ಲಿದೆ. ಇದುವರೆಗೆ, ಭಾರತದಲ್ಲಿ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 8,489 (ಜೂ 11). ಬುಧವಾರ ಒಂದೇ ದಿನ ಹನ್ನೊಂದು ಸಾವಿರ ಪ್ರಕರಣ ದಾಖಲಾಗಿದೆ.

   ಬೆಂಗಳೂರಿನಲ್ಲಿ ಮುಂದುವರೆದ ಆತಂಕ, ಕಂಟೇನ್ಮೆಂಟ್ ಜೋನ್ 113

   ಇವೆಲ್ಲದರ ನಡುವೆ, ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು) ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಭಾರತದಲ್ಲಿ ಶೇ. 1ಕ್ಕಿಂತಲೂ ಕಮ್ಮಿ ಜನರು ಸೋಂಕು ಪೀಡಿತರಾಗಿದ್ದಾರೆ ಎಂದು ಹೇಳಿದೆ.

   ಆಸ್ಪತ್ರೆ ಎಡವಟ್ಟು: ಕೊರೊನಾ ರೋಗಿಯ ಶವ ಅದಲು-ಬದಲು, ಆಮೇಲೆ ಏನಾಯ್ತು?

   "21 ರಾಜ್ಯಗಳ 83 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ವೈದ್ಯಕೀಯ ಪರಿಷತ್ತು ಈ ವರದಿಯನ್ನು ಬಿಡುಗಡೆ ಮಾಡಿದೆ" ಎಂದು ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

   ಕೊರೊನಾ ಇನ್ನೂ ಸಮುದಾಯ ಪ್ರಸರಣ ಹಂತ ತಲುಪಿಲ್ಲ

   ಕೊರೊನಾ ಇನ್ನೂ ಸಮುದಾಯ ಪ್ರಸರಣ ಹಂತ ತಲುಪಿಲ್ಲ

   "ಕೊರೊನಾ ಇನ್ನೂ ಸಮುದಾಯ ಪ್ರಸರಣ ಹಂತ ತಲುಪಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಸೋಂಕು ಭಾರೀ ಪ್ರಮಾಣದಲ್ಲಿ ತಗಲುವ ಅಪಾಯವಿದೆ. ಸಮೀಕ್ಷೆಯನ್ನು ಇನ್ನೊಂದು ಹಂತದಲ್ಲೂ ನಡೆಸಲಾಗುತ್ತದೆ"ಎಂದು ಐಸಿಎಂಆರ್ ನಿರ್ದೇಶಕ ಭಾರ್ಗವ ಹೇಳಿದ್ದಾರೆ.

   ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ

   ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ

   "ನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಕೊಳೆಗೇರಿಗಳು ಗ್ರಾಮೀಣ ಪ್ರದೇಶಗಳಿಗಿಂತ ಶೇ.1.85 ಪಟ್ಟು ಹೆಚ್ಚು ಸೋಂಕನ್ನು ಹರಡಿಕೊಂಡಿವೆ. ಒಟ್ಟಾರೆಯಾಗಿ ನಗರದಲ್ಲಿ ಈ ಪ್ರಮಾಣ, ಹಳ್ಳಿಗಳಿಗಿಂತ ಶೇ. 1.09 ಪಟ್ಟು ಹೆಚ್ಚಾಗಿದೆ ಎನ್ನುವ ವರದಿ ಸಮೀಕ್ಷೆಯಲ್ಲಿ ಬಂದಿದೆ. ಭಾರತದಲ್ಲಿ ಇನ್ನೂ ಸಮುದಾಯ ಪ್ರಸರಣದ ಹಂತಕ್ಕೆ ಬಂದಿಲ್ಲ ಎಂದು ನಾನು ಒತ್ತಿ ಹೇಳಲು ಬಯಸುತ್ತೇನೆ" ಎಂದು ಭಾರ್ಗವ ಹೇಳಿದ್ದಾರೆ.

   ಇನ್ನೊಂದು ಹಂತದಲ್ಲಿ ಸಮೀಕ್ಷೆ

   ಇನ್ನೊಂದು ಹಂತದಲ್ಲಿ ಸಮೀಕ್ಷೆ

   "ಸೋಂಕು ವ್ಯಾಪಕವಾಗಿ ಹರಡಿರುವ ಜಿಲ್ಲೆಗಳಲ್ಲಿ ಇನ್ನೊಂದು ಹಂತದಲ್ಲಿ ಸಮೀಕ್ಷೆ ನಡೆಸಲಾಗುವುದು.ಸಮೀಕ್ಷೆ ನಡೆಸಲಾದ 83 ಜಿಲ್ಲೆಗಳ ಪೈಕಿ 65 ಜಿಲ್ಲೆಗಳಲ್ಲಿ ಕೊರೊನಾ ಬಾಧಿತರು ಸಂಪರ್ಕಕ್ಕೆ ಬಂದಿದ್ದನ್ನು ಪತ್ತೆ ಹಚ್ಚಲಾಗಿದೆ"ಎಂದು ಭಾರ್ಗವ ಹೇಳಿದ್ದಾರೆ.

   ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು

   ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು

   "ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್ ಡೌನ್ ಸಡಿಲಗೊಂಡಿದೆ ಎಂದು ಯಾರೂ ಎಚ್ಚರ ತಪ್ಪಬಾರದು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಶುಚಿಯಾಗಿರುವುದು ಬಹಳ ಅವಶ್ಯಕ" ಎಂದು ಐಸಿಎಂಆರ್ ನಿರ್ದೇಶಕ ಭಾರ್ಗವ ಹೇಳಿದ್ದಾರೆ.

   English summary
   Less than 1% of India’s population has been infected by coronavirus, the Indian Council of Medical Research (ICMR). ICMR reiterated that there was no community transmission yet in the country.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X