ವಾಯುಪಡೆ ಕೆಲಸ ಬಿಟ್ಟು ಬಟ್ಟೆ ಅಂಗಡಿ ತೆರೆದ ಮಹಿಳೆ: 14 ವರ್ಷ ಸೇನಾ ಸೇವೆ ಬಳಿಕ ಈ ನಿರ್ಧಾರ ಏಕೆ?

ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುವುದು ಎಂದರೆ ಅದು ಅತ್ಯಂತ ಹೆಮ್ಮೆ ಹಾಗೂ ಗೌರವದ ವಿಷಯ. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಈ ಹುದ್ದೆಯನ್ನ ಬಿಟ್ಟು ಬೇರೊಂದು ಸಾಮಾನ್ಯ ವೃತ್ತಿಗೆ ಸ್ವಿಚ್‌ ಆಗುವುದು ಅಷ್ಟು ಸುಲಭವಲ್ಲ ಅಲ್ಲವೇ?. ಆದರೆ, ಇಲ್ಲೊಬ್ಬರು ಮಹಿಳಾ ಅಧಿಕಾರಿ ಬರೋಬ್ಬರಿ 14 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ ಬಳಿಕ, ಈಗ ಬಟ್ಟೆ ಅಂಗಡಿಯೊಂದನ್ನ ನಡೆಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಹೌದು, ಡೆಹ್ರಾಡೂನ್ ಮೂಲದ ಐಶ್ವರ್ಯ ಎಂಬುವವರೇ ಈ ದಿಟ್ಟ ನಿರ್ಧಾರ ತೆಗೆದುಕೊಂಡ ಮಹಿಳಾ ಅಧಿಕಾರಿ. ತಾವು ಪ್ರತಿಷ್ಠಿತ ವಾಯುಪಡೆ ಹುದ್ದೆ ಬಿಟ್ಟು, ಬಟ್ಟೆ ಬ್ರ್ಯಾಂಡ್ ಶುರು ಮಾಡಲು ಕಾರಣವೇನು ಎಂಬುದನ್ನ ಅವರು ವಿವರಿಸಿದ್ದು, ಸದ್ಯ ಅವರ ಈ ಸ್ಪೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

IAF Officer To Boutique Owner Why This Woman Left Air Force To Start A Clothing Brand In Dehradun

ವಾಯುಪಡೆ ಅಧಿಕಾರಿಯಿಂದ 'ಬುಟಿಕ್ ಆಂಟಿ'ಯಾದ ಜರ್ನಿ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ '@thefaujifounder' ಎಂಬ ಹೆಸರಿನಿಂದ ಖಾತೆ ಹೊಂದಿರುವ ಐಶ್ವರ್ಯ, ಇತ್ತೀಚೆಗೆ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ತಮ್ಮ ಬುಟಿಕ್‌ಗೆ ಬರುವ ಗ್ರಾಹಕರು ಪದೇ ಪದೇ ಕೇಳುವ ಪ್ರಶ್ನೆಯೊಂದನ್ನ ಅವರು ಇಲ್ಲಿ ಉಲ್ಲೇಖಿಸಿದ್ದಾರೆ. "ನೀವು ವಾಯುಪಡೆ ಅಧಿಕಾರಿಯಾಗಿದ್ದವರು ಇಲ್ಲಿಗೆ ಹೇಗೆ ಬಂದ್ರಿ? ಅಂದ್ರೆ ಆಫೀಸರ್ ಆಗಿದ್ದವರು ಏಕಾಏಕಿ ಬುಟಿಕ್ ಆಂಟಿ ಹೇಗೆ ಆದ್ರಿ?" ಎಂದು ಬಹುತೇಕರು ಕೇಳುತ್ತಾರಂತೆ.

ಇದಕ್ಕೆ ಉತ್ತರಿಸಿರುವ ಐಶ್ವರ್ಯ, "ನಾನು ಶಾರ್ಟ್ ಸರ್ವೀಸ್ ಕಮಿಷನ್ ಅಧಿಕಾರಿಯಾಗಿದ್ದೆ. ನಿಯಮಗಳ ಪ್ರಕಾರ 14 ವರ್ಷಗಳ ಸೇವೆಯ ನಂತರ ನಾನು ವಾಯುಪಡೆಯಿಂದ ನಿವೃತ್ತಿಯಾಗಲೇಬೇಕಿತ್ತು. ಹಾಗಾಗಿ, ವಾಯುಪಡೆ ಬಿಟ್ಟಿದ್ದು ಕೇವಲ ನನ್ನ ಆಯ್ಕೆಯಾಗಿರಲಿಲ್ಲ. ಆದರೆ ಆ ಬಳಿಕ ನನ್ನ ಈ ಹೊಸ ಬಟ್ಟೆ ಅಂಗಡಿ ವ್ಯಾಪಾರದ ಹಿಂದೆ ಯಾವುದೇ ಫ್ಯಾನ್ಸಿ ಸ್ಟಾರ್ಟ್‌ಅಪ್ ಕಥೆಯಿಲ್ಲ. ನಾನು ಬಾಲ್ಯದಿಂದಲೂ ಉದ್ಯಮಿಯಾಗಬೇಕು ಎಂದು ಕನಸು ಕಂಡವಳಲ್ಲ. ಹಾಗೆಯೇ ಫ್ಯಾಷನ್ ಬಗ್ಗೆ ನನಗೆ ಅಪಾರವಾದ ಒಲವಿತ್ತು ಎಂದೇನಿಲ್ಲ" ಎಂದು ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ.

ಕುಟುಂಬಕ್ಕಾಗಿ ಉದ್ಯಮಿಯಾಗಿ ಬದಲಾದ ಮಹಿಳಾ ಅಧಿಕಾರಿ

ವಾಯುಪಡೆಯಿಂದ ಹೊರಬಂದ ನಂತರ ಐಶ್ವರ್ಯ ಅವರಿಗೆ ಬೇರೆ ಕಾರ್ಪೊರೇಟ್ ವಲಯದಲ್ಲಿ ಸುಲಭವಾಗಿ ಉನ್ನತ ಹುದ್ದೆ ಸಿಗುವ ಅವಕಾಶಗಳಿದ್ದವು. ಆದರೆ, ಅವರು ವೃತ್ತಿಗಿಂತ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಿದರು. "ನಾನು ನನ್ನ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕಿತ್ತು. ನನ್ನ ಪೋಷಕರಿಗೆ ವಯಸ್ಸಾಗುತ್ತಿರುವುದರಿಂದ, ಅವರಿಗೆ ನನ್ನ ಅಗತ್ಯವಿತ್ತು. ನನ್ನ ಪ್ರೀತಿಪಾತ್ರರಿಗಾಗಿ ನಾನು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದ್ದೆ" ಎಂದು ಅವರು ತಮ್ಮ ನಿರ್ಧಾರವನ್ನ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿಯೇ ಈ ಬಟ್ಟೆ ಅಂಗಡಿಯನ್ನ ತೆರೆದಿರುವುದಾಗಿ ಹೇಳಿರುವ ಐಶ್ವರ್ಯ, "ಯಾವುದಾದರೂ ಹೊಸ ಕೆಲಸ ಶುರು ಮಾಡುವುದಿದ್ದರೆ, ನನ್ನ ಮನೆಯ ಹತ್ತಿರವೇ ಏಕೆ ಮಾಡಬಾರದು ಎನಿಸಿತು.

ಅಲ್ಲದೆ, ಪ್ರತಿಯೊಬ್ಬ ಮಹಿಳೆಗೂ ಬಟ್ಟೆಗಳ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ. ಇದೊಂದು ಸ್ವಲ್ಪ ನಿರ್ವಹಿಸಬಹುದಾದಂತಹ ರಿಸ್ಕ್ ಎನಿಸಿದ್ದರಿಂದ ಈ ಉದ್ಯಮವನ್ನ ಆಯ್ಕೆ ಮಾಡಿಕೊಂಡೆ. ನಾನು ಕೇವಲ ನನ್ನ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವ ಸಾಮಾನ್ಯ ತಾಯಿ ಅಷ್ಟೇ" ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ತಮ್ಮ ತವರೂರು ಡೆಹ್ರಾಡೂನ್‌ನಲ್ಲಿಯೇ ಹೊಸ ಜೀವನ ಕಟ್ಟಿಕೊಂಡಿರುವ ಐಶ್ವರ್ಯ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. "ಕೆಲವೊಮ್ಮೆ ನಿಮ್ಮ ಕುಟುಂಬವನ್ನು, ನಿಮ್ಮ ಬೇರುಗಳನ್ನ ಹಾಗೂ ನಿಮ್ಮನ್ನು ನೀವು ಆಯ್ಕೆ ಮಾಡಿಕೊಳ್ಳುವುದೇ ಜೀವನದ ಅತ್ಯಂತ ದೊಡ್ಡ ಕೆರಿಯರ್ ನಿರ್ಧಾರವಾಗುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ.

ಅವರ ಈ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. "ಮಿಲಿಟರಿಯಿಂದ ಉದ್ಯಮಶೀಲತೆಗೆ ಬದಲಾಗುವುದು ಸುಲಭವಲ್ಲ, ನಿಮ್ಮ ದಿಟ್ಟ ನಿರ್ಧಾರಕ್ಕೆ ಹ್ಯಾಟ್ಸಾಫ್", "ಕುಟುಂಬದೊಂದಿಗೆ ಕಳೆಯುವ ಸಮಯವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ, ದೂರ ಇದ್ದವರಿಗಷ್ಟೇ ಅದರ ಬೆಲೆ ತಿಳಿಯುತ್ತದೆ" ಎಂದು ಅನೇಕರು ಕಾಮೆಂಟ್ ಮಾಡುವ ಮೂಲಕ ಈ ಮಾಜಿ ವಾಯುಪಡೆ ಅಧಿಕಾರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+