ನಾನಿನ್ನೂ ಪೂರ್ಣಾವಧಿ ರಾಜಕಾರಣಿ ಆಗಿಲ್ಲ ಎಂದ ರಜನೀಕಾಂತ್

Posted By:
Subscribe to Oneindia Kannada

"ನಾನಿನ್ನೂ ಪೂರ್ಣಾವಧಿ ರಾಜಕಾರಣಿ ಆಗಿಲ್ಲ. ನನ್ನ ಪಕ್ಷದ ಘೋಷಣೆ ಮಾಡಿಲ್ಲ. ರಾಜಕಾರಣದ ಬಗ್ಗೆ ಏನೂ ಮಾತನಾಡಲು ಬಯಸುವುದಿಲ್ಲ (ಈಗ)" ಎಂದು ಹೃಷಿಕೇಶದ ದಯಾನಂದ ಸರಸ್ವತಿ ಆಶ್ರಮದಲ್ಲಿ ವರದಿಗಾರರಿಗೆ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಳೆದ ಕೆಲವು ದಿನಗಳಿಂದ ಈ ಆಶ್ರಮದಲ್ಲಿ ಧ್ಯಾನದಲ್ಲಿ ನಿರತ ಆಗಿರುವ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸಿದರು. "ನಾನು ರಜನೀಕಾಂತ್ ರನ್ನು ವ್ಯಕ್ತಿಗತವಾಗಿ ಟೀಕಿಸಲ್ಲ. ಆದರೆ ಅವರ ಪಕ್ಷದ ಸಿದ್ಧಾಂತ ಮತ್ತು ರಾಜಕಾರಣದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಹೇಳ್ತೀನಿ" ಎಂದು ಇತ್ತೀಚೆಗೆ ರಾಜಕೀಯ ಪಕ್ಷ ಘೋಷಿಸಿದ ಕಮಲ್ ಹಾಸನ್ ಹೇಳಿದ್ದರು.

ಕಮಲ್ ಹಾಸನ್ ಮತ್ತು ನನ್ನ ಗುರಿ ಒಂದೇ: ರಜನಿಕಾಂತ್

I am not a full-time politician yet : Rajinikanth

ತಮಿಳುನಾಡಿನಲ್ಲಿ ಸೃಷ್ಟಿ ಆಗಿರುವ ಶೂನ್ಯವನ್ನು ತುಂಬುವ ಸಲುವಾಗಿ ನಾನು ರಾಜಕೀಯ ಪ್ರವೇಶಿಸಿದ್ದೇನೆ ಎಂದು ಕಳೆದ ವಾರವಷ್ಟೇ ರಜನೀಕಾಂತ್ ಹೇಳಿದ್ದರು. ಈ ಮಧ್ಯ ತಮಿಳುನಾಡು ಬಿಜೆಪಿ ಮುಖ್ಯಸ್ಥೆ ತಮಿಳಿಸೈ ಸೌಂದರ್ ರಾಜನ್ ಮಾತನಾಡಿ, ಯಾವ ಜನರಿಗೆ ಚಿತ್ರರಂಗದಲ್ಲಿ ಮ್ಯಾನೇಜ್ ಮಾಡುವುದಕ್ಕೆ ಸಾಧ್ಯವಿಲ್ಲವೋ ಅಂತಹವರು ತಮಿಳುನಾಡು ರಾಜಕೀಯವನ್ನು ತಾನೇ ಕಾಪಾಡುತ್ತೇನೆ ಎಂದುಕೊಳ್ಳುತ್ತಾರೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Superstar Rajinikanth on Tuesday said he has still not become a full-time politician and his ongoing spiritual trip to the Himalayas was to "realise oneself".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ