ಹೈದರಾಬಾದ್ ಎನ್ಕೌಂಟರ್: ಪೊಲೀಸರ ವಿರುದ್ದ ಕಿಡಿಕಾರಿದ ಬಿಜೆಪಿ ಸಂಸದೆ

ನವದೆಹಲಿ, ಡಿ 6: ಪಶುವೈದ್ಯೆಯನ್ನು ಅತ್ಯಾಚಾರಗೈದು, ಕೊಲೆಗೈದ ಪಾತಕಿಗಳನ್ನು ಹೊಡೆದುರುಳಿಸಿದ ಹೈದರಾಬಾದ್ ಪೊಲೀಸರ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾದರೆ, ಬಿಜೆಪಿ ಸಂಸದೆ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.

ಈ ವಿಚಾರದ ಬಗ್ಗೆ ಹೇಳಿಕೆ ನೀಡಿದ ಬಿಜೆಪಿಯ ಸುಲ್ತಾನ್ ಪುರ ಕ್ಷೇತ್ರದ ಸಂಸದೆ, ಮಾಜಿ ಸಚಿವೆ ಮನೇಕಾ ಗಾಂಧಿ, "ನ್ಯಾಯಾಂಗ ವ್ಯವಸ್ಥೆ ಯಾಕೆ ಬೇಕು" ಎಂದು ಪ್ರತಿಕ್ರಿಯಿಸಿದ್ದಾರೆ.

"ಇದೊಂದು ಭಯಾನಕ, ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆಯಿದೆ. ಕಾನೂನನ್ನು ಕೈಗೆತ್ತಿಕೊಳ್ಳಬಾರದು, ಅತ್ಯಾಚಾರಿಗಳಿಗೆ ಇಲ್ಲದಿದ್ದರೂ ಮರಣದಂಡನೆ ಶಿಕ್ಷೆಯಾಗುತ್ತಿತ್ತು" ಎಂದು ಮನೇಕಾ ಗಾಂಧಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

"ವಿಚಾರಣೆಗೆ ಮುನ್ನವೇ ಅವರನ್ನು ಎನ್ಕೌಂಟರ್ ನಲ್ಲಿ ಸಾಯಿಸಿದರೆ, ನಮ್ಮ ವ್ಯವಸ್ಥೆ ಇದ್ದು ಏನು ಪ್ರಯೋಜನ. ಕಾನೂನು, ಕೋರ್ಟ್ ಯಾಕೆ ಬೇಕು. ಯಾರನ್ನು ಹೊಡೆದುರುಳಿಸಬೇಕೋ, ಸಾಯಿಸಿ" ಎಂದು ಮನೇಕಾ ಗಾಂಧಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

Hyderabad Police Encounter: BJP MP Maneka Gandhi Not Happy With Police

"ಈ ನಾಲ್ಕು ಹುಡುಗರೇ ಆಕೆಯನ್ನು ರೇಪ್ ಮಾಡಿ ಸುಟ್ಟುಹಾಕಿದ್ದಾರೋ ಇಲ್ಲ ಇದರ ಹಿಂದೆ ಬೇರೆ ಯಾರೋ ಪ್ರಮುಖ ವ್ಯಕ್ತಿಗಳ ಕೈವಾಡವಿದೆಯೊ? ಈ ರೀತಿಯ ಎನ್ಕೌಂಟರ್ ಪ್ರಮುಖ ವ್ಯಕ್ತಿಗಳ ಕೇಸಿನಲ್ಲಿ ಯಾಕಾಗುವುದಿಲ್ಲ? ಎಂದು ನಟ ಉಪೇಂದ್ರ ಟ್ವೀಟ್ ಮಾಡಿದ್ದರು.

"ಕೋರ್ಟನಲ್ಲಿ ವಿಚಾರಣೆಗೂ ಮುನ್ನ ನಡೆದ ಈ ಎನ್ಕೌಂಟರ್ ಇನ್ನು ಮುಂದೆ ಪ್ರಭಾವಶಾಲೀ ಭ್ರಷ್ಟ ರೇಪಿಷ್ಟ್ ಗಳಿಗೆ ರತ್ನಗಂಬಳಿಯಾಗುವುದೇ" ಎನ್ನುವ ಉಪೇಂದ್ರ, ಟ್ವೀಟಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+