ಯುಪಿ, ಪಂಜಾಬ್ ಚುನಾವಣೆ: ಬೆಟ್ಟಿಂಗ್ ಅಡ್ಡಾದಲ್ಲಿ ಗೆಲ್ಲುವ ಕುದುರೆ ಕಾಲಿಗೆ ಕಾಸೋಕಾಸು!
ಲಕ್ನೋ, ಡಿಸೆಂಬರ್ 30: ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಮೂರ್ನಾಲ್ಕು ತಿಂಗಳು ಬಾಕಿಯಿದ್ದು, ಈಗಾಗಲೇ ಬೆಟ್ಟಿಂಗ್ ಅಡ್ಡೆಯಲ್ಲಿ ಚುನಾವಣೆಗಳು ಸಖತ್ ಸದ್ದು ಮಾಡುತ್ತಿವೆ. ರಾಜಕೀಯ ನಾಯಕರು ಒಂದು ಲೆಕ್ಕಾಚಾರ ಹಾಕಿದರೆ, ಬೆಟ್ಟಿಂಗ್ ದಂಧೆಕೋರರ ಚುನಾವಣೆ ಲೆಕ್ಕಾಚಾರವೇ ಬೇರೆ ಆಗಿರುತ್ತದೆ.
ಪಂಚರಾಜ್ಯಗಳ ಪೈಕಿ ಅತಿಹೆಚ್ಚು ಸದ್ದು ಮಾಡುತ್ತಿರುವುದು ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆ. ಈ ಎರಡು ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಒಲಿಯಲಿದೆ ಎಂಬುದರ ಮೇಲೆ ಭಾರಿ ಬೆಟ್ಟಿಂಗ್ ನಡೆಯುತ್ತಿದೆ. ಲಕ್ಷ ಲಕ್ಷ ರೂಪಾಯಿ ಹಣವನ್ನು ಪಕ್ಷಗಳ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ಕಟ್ಟಲಾಗುತ್ತಿದೆ.
ಬೆಟ್ಟಿಂಗ್ ಅಡ್ಡೆಯಲ್ಲಿ ಗೆಲ್ಲುವ ಕುದುರೆ ಯಾವುದು?, ಎರಡು ರಾಜ್ಯಗಳ ಚುನಾವಣಾ ಭವಿಷ್ಯದ ಬಗ್ಗೆ ಬೆಟ್ಟಿಂಗ್ ದಂಧೆಕೋರರು ಹೇಳುವುದು ಏನು?, ಯಾವ ರಾಜ್ಯದಲ್ಲಿ ಯಾವ ಪಕ್ಷದ ಪರವಾಗಿ ಎಷ್ಟು ಹಣ ಕಟ್ಟಿದರೆ ಎಷ್ಟು ಹಣವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. 100 ರೂಪಾಯಿ ಕಟ್ಟಿದವರಿಗೆ 120 ರೂಪಾಯಿ ಕೊಡುತ್ತಿರುವ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಟ್ರೆಂಡಿಂಗ್ ಹೇಗಿದೆ ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಬೆಟ್ಟಿಂಗ್ ಅಡ್ಡಾದಲ್ಲಿ ಹೇಗಿದೆ ಎಲೆಕ್ಷನ್ ಲೆಕ್ಕಾಚಾರ?
ಬೆಟ್ಟಿಂಗ್ ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವೇ ಗೆಲ್ಲುವ ಕುದುರಿಯಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಭದ್ರಪಡಿಸಿಕೊಳ್ಳುತ್ತದೆ. ಆದರೆ, 2017ರ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಪಡೆದುಕೊಳ್ಳಲಿದೆ. ಅದೇ ರೀತಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದಯಾದರೂ, ಅತಂತ್ರ ಫಲಿತಾಂಶ ಹೊರ ಬೀಳಲಿದೆ. ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ವಿವಿಧ ಹಂತಗಳಲ್ಲಿ ನಡೆಯಲಿದೆ. ಆದರೆ ಬೆಟ್ಟಿಂಗ್ ಅಡ್ಡೆಯಲ್ಲಿ ಈ ವಾರದಿಂದಲೇ ವಹಿವಾಟು ಶುರು ಆಗಲಿದೆ ಎಂದು ವರದಿಯಾಗಿದೆ.

ಈ ಚುನಾವಣೆ ವೇಳೆ 50,000 ಕೋಟಿ ವಹಿವಾಟಿನ ಗುರಿ
ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಈ ಬಾರಿ 50,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವಹಿವಾಟು ನಡೆಸುವುದಕ್ಕೆ ಬೆಟ್ಟಿಂಗ್ ಅಡ್ಡೆಯಲ್ಲಿ ದಂಧೆಕೋರರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಅಲ್ಲದೇ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಗಳ ಮೇಲೆ ಹಾಗೂ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಅಂಕಿ-ಸಂಖ್ಯೆಯನ್ನು ಬದಲಾಯಿಸುತ್ತಾ ಹೋಗಲಾಗುತ್ತದೆ. ಮುಖ್ಯವಾಗಿ ರಾಜಕೀಯವಾಗಿ ಸಂಪರ್ಕ ಹೊಂದಿರುವ ಬುಕ್ಕಿಗಳ ಪ್ರಕಾರ, ಇತ್ತೀಚಿನ ರೈತರ ಪ್ರತಿಭಟನೆಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ ಭವಿಷ್ಯ ಹಳ್ಳ ಹಿಡಿಯುವಂತೆ ಮಾಡಿದೆ.

ಯುಪಿಯಲ್ಲಿ ಯಾವ ಪಕ್ಷದ ಪರ ಕಟ್ಟುವ ಹಣಕ್ಕೆ ಹೆಚ್ಚು ಲಾಭ
2022ರ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 250ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಕಳೆದ 2017ರ ಚುನಾವಣೆಯಲ್ಲಿ ರಾಜ್ಯದ 403 ಕ್ಷೇತ್ರಗಳಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಬುಕ್ಕಿಗಳ ಲೆಕ್ಕಾಚಾರದ ಪ್ರಕಾರ 2022ರ ಚುನಾವಣೆಯಲ್ಲಿ ಬಿಜೆಪಿಯು 50 ರಿಂದ 60 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅತಿಹೆಚ್ಚು ಮುಸ್ಲಿಂರನ್ನು ಹೊಂದಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಬಹುಪಾಲು ಮತಗಳು ಸಮಾಜವಾದಿ ಪಕ್ಷಕ್ಕೆ ಹೋಗಲಿವೆ. ಕೃಷಿ ಕಾಯ್ದೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಗಳು ಬಿಜೆಪಿಗೆ ಇಲ್ಲಿ ಮುಳ್ಳಾಗಲಿವೆ. ಈ ಹಿನ್ನೆಲೆ ಕಳೆದ ಬಾರಿ 47 ಸ್ಥಾನಗಳನ್ನು ಗೆದ್ದುಕೊಂಡಿದ್ದ ಸಮಾಜವಾದಿ ಪಕ್ಷವು 100ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳುವ ನಿರೀಕ್ಷೆಯಿದೆ.

100 ರೂಪಾಯಿ ಕಟ್ಟಿದ್ರೆ, 120 ರೂಪಾಯಿ: ಷರತ್ತುಗಳು ಅನ್ವಯ
ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕನಿಷ್ಠ 200 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಬೆಟ್ಟಿಂಗ್ ಕಟ್ಟುವವವರಿಗೆ ಪ್ರತಿ ರೂಪಾಯಿ ಮೇಲೆ ಹೆಚ್ಚುವರಿಯಾಗಿ 20 ಪೈಸೆಯನ್ನು ನೀಡಲಾಗುತ್ತದೆ. ಅಂದರೆ, 100 ರೂಪಾಯಿ ಕಟ್ಟಿದರೆ, ಅದಕ್ಕೆ ಪ್ರತಿಯಾಗಿ 120 ರೂಪಾಯಿ ಹಣವನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ಬಿಜೆಪಿಯು 222 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಕಟ್ಟಿದರೆ ಪ್ರತಿ ಒಂದು ರೂಪಾಯಿ ಮೇಲೆ ಹೆಚ್ಚುವರಿಯಾಗಿ 1.15 ರೂಪಾಯಿ ಅನ್ನು ನೀಡಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು 125 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟುವ ಪ್ರತಿ 1 ರೂಪಾಯಿ ಮೇಲೆ ಹೆಚ್ಚುವರಿಯಾಗಿ 1.40 ರೂಪಾಯಿ ಅನ್ನು ನೀಡಲಾಗುತ್ತದೆ. ಆದರೆ ಅದೇ ಸಮಾಜವಾದಿ ಪಕ್ಷವು 115 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟಿದರೆ, ಅದರ ಮೇಲೆ ಒಂದು ರೂಪಾಯಿಗೆ ಹೆಚ್ಚುವರಿಯಾಗಿ 35 ಪೈಸೆ ಅನ್ನು ನೀಡಲಾಗುತ್ತದೆ. ಬುಕ್ಕಿಗಳು ತಮ್ಮ ಲಾಭ ಮತ್ತು ನಷ್ಟವನ್ನು ಸರಿದೂಗಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅಂಕಿ-ಅಂಶಗಳನ್ನು ಲೆಕ್ಕಾಚಾರ ಮಾಡಿ ಹೆಚ್ಚುವರಿ ಹಣವನ್ನು ನೀಡುತ್ತಿದ್ದಾರೆ. ಈ ಹಂತದಲ್ಲಿ ಯಾವುದೇ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಹೆಚ್ಚುವರಿ ಹಣವನ್ನು ಪಾವತಿಸುವುದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಕೇವಲ 5 ರಿಂದ 10 ಸ್ಥಾನಗಳನ್ನು ಪಡೆದುಕೊಳ್ಳುವುದಾಗಿ ಅಂದಾಜಿಸಲಾಗಿದೆ. ಇನ್ನು, ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷವು ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಅದರ ಬದಲಿಗೆ ಸಮಾಜವಾದಿ ಪಕ್ಷಕ್ಕೆ ಹೋಗುವ ಮುಸ್ಲೀಂ ಮತಗಳನ್ನು ಒಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.

ಬುಕ್ಕಿಗಳ ಪ್ರಕಾರ ಪಂಜಾಬ್‌ನಲ್ಲಿ ಯಾರಿಗೆ ಗೆಲುವು?
ಪಂಜಾಬ್ ವಿಧಾನಸಭೆ ಚುನಾವಣೆಯ 117 ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಅತಿಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿವೆ. ಎರಡೂ ಪಕ್ಷಗಳು ಗರಿಷ್ಠ 40 ರಿಂದ ಕನಿಷ್ಠ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಬಿಜೆಪಿ ಮತ್ತು ಅಕಾಲಿ ದಳವು ತೀವ್ರ ಮುಖಭಂಗ ಅನುಭವಿಸಲಿದ್ದು, ಎರಡೂ ಪಕ್ಷಗಳು 5 ರಿಂದ 10 ಸ್ಥಾನಗಳನ್ನು ಗೆದ್ದುಕೊಳ್ಳಲಿವೆ.

ಬುಕ್ಕಿ ಲೆಕ್ಕ 403: ಉತ್ತರ ಪ್ರದೇಶದಲ್ಲಿ ಎಷ್ಟು ಸ್ಥಾನದ ಮೇಲೆ ಎಷ್ಟು ಜೂಜು?
ಉತ್ತರ ಪ್ರದೇಶದಲ್ಲಿ 403 ಸ್ಥಾನಗಳ ಪೈಕಿ ಬಿಜೆಪಿಯು ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದರ ಬಗ್ಗೆ ಬುಕ್ಕಿಗಳು ಒಂದು ಲೆಕ್ಕ ಹಾಕಿ ಇಟ್ಟುಕೊಂಡಿದ್ದಾರೆ. ಬಿಜೆಪಿಯು 200 ಸ್ಥಾನ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟುವವರಿಗೆ ಹೆಚ್ಚುವರಿಯಾಗಿ 20 ಪೈಸೆಯನ್ನು ನೀಡಲಾಗುತ್ತದೆ. ಅದೇ ರೀತಿ ಎಷ್ಟು ಸ್ಥಾನಕ್ಕೆ ಹೆಚ್ಚುವರಿಯಾಗಿ ಎಷ್ಟು ಹಣವನ್ನು ನೀಡಲಾಗುತ್ತದೆ ಎಂಬುದರ ಪಟ್ಟಿಯಲ್ಲಿ ಈ ಕೆಳಗೆ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ
| ಸ್ಥಾನಗಳು | ಹೆಚ್ಚುವರಿ ಹಣ |
| 200 | 0.20 |
| 210 | 0.35 |
| 215 | 0.57 |
| 222 | 1.15 |

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ
| ಸ್ಥಾನಗಳು | ಹೆಚ್ಚುವರಿ ಹಣ |
| 110 | 0.35 |
| 115 | 0.60 |
| 120 | 1.05 |
| 125 | 1.40 |

ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ
| ಸ್ಥಾನಗಳು | ಹೆಚ್ಚುವರಿ ಹಣ |
| 5 | 0.4 |
| 10 | 0.67 |
| 15 | 1.10 |

ಯುಪಿಯಲ್ಲಿ ಕಾಂಗ್ರೆಸ್
| ಸ್ಥಾನಗಳು | ಹೆಚ್ಚುವರಿ ಹಣ |
| 5 | 0.55 |
| 6 | 0.70 |
| 8 | 100 |
| 10 | 2.5 |

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ
| ಸ್ಥಾನಗಳು | ಹೆಚ್ಚುವರಿ ಹಣ |
| 25 | 0.35 |
| 30 | 0.4 |
| 35 | 0.87 |
| 40 | 1.15 |

ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ
| ಸ್ಥಾನಗಳು | ಹೆಚ್ಚುವರಿ ಹಣ |
| 25 | 0.45 |
| 30 | 0.57 |
| 35 | 0.90 |
| 40 | 1.35 |

ಪಂಜಾಬ್‌ನಲ್ಲಿ ಅಕಾಲಿ ದಳಕ್ಕೆ ಎಷ್ಟು ಸ್ಥಾನ
| ಸ್ಥಾನಗಳು | ಹೆಚ್ಚುವರಿ ಹಣ |
| 5 | 0.35 |
| 10 | 0.57 |
| 15 | 0.87 |
| 20 | 1.20 |
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications