Delhi AIIMS Fire: ದೆಹಲಿ ಏಮ್ಸ್‌ನಲ್ಲಿ ಬೆಂಕಿ, ರೋಗಿಗಳ ಸ್ಥಳಾಂತರ
ನವದೆಹಲಿ, ಆಗಸ್ಟ್ 07: ರಾಷ್ಟ್ರ ರಾಜಧಾನಿ ನವದೆಹಲಿಯು ಸೋಮವಾರ ಅವಘಡವೊಂದಕ್ಕೆ ಸಾಕ್ಷಿಯಾಗಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (AIIMS) ಎಂಡೋಸ್ಕೋಪಿ ಕೊಠಡಿಯಲ್ಲಿ ಭಾನುವಾರ ರಾತ್ರಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲಾಗುತ್ತಿದೆ. ಭಾನುವಾರ ರಾತ್ರಿ 11:54 ಕ್ಕೆ ಎಐಐಎಂಎಸ್‌ನ ತುರ್ತು ಚಿಕಿತ್ಸಾ ವಿಭಾಗದಿಂದ ಅಗ್ನಿಶಾಮಕ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆ ಸುತ್ತಮುತ್ತಲಿನ ಎಲ್ಲ ರೋಗಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ.
ಸದ್ಯ ಏಮ್ಸ್‌ನ ಕೊಠಡಿಯಲ್ಲಿನ ಬೆಂಕಿ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ. ಸದ್ಯ ಏಮ್ಸ್ ನಿರ್ದೇಶಕರು ಸಹ ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ತೆರಳಿದ್ದಾರೆ ಎಂದು ಏಮ್ಸ್ ಮೂಲಗಳು ಪಿಟಿಐ ಗೆ ಮಾಹಿತಿ ನೀಡಿವೆ.
ಎಂಡೋಸ್ಕೋಪಿ ಕೊಠಡಿಯು ಏಮ್ಸ್‌ನ ಎರಡನೇ ಮಹಡಿಯ ಹಳೆಯ ಹೊರರೋಗಿ ವಿಭಾಗದ (OPD)ದಲ್ಲಿದ್ದು, ಅಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿಯಬೇಕಿದೆ.












Click it and Unblock the Notifications