Himachal Pradesh Election Result 2022; ಸಿಎಂ ಸ್ಥಾನಕ್ಕೆ ಜೈರಾಮ್ ಠಾಕೂರ್ ರಾಜೀನಾಮೆ

ಶಿಮ್ಲಾ, ಡಿಸೆಂಬರ್‌, 08: ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ 2022 ಮತ ಏಣಿಕೆ ನಡೆದಿದ್ದು, ಬಿಜೆಪಿಯನ್ನು ಹಿಂದಿಕ್ಕಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಲೇ ಬಂದಿದೆ. ಸಿಎಂ ಜೈರಾಮ್ ಠಾಕೂರ್ ತಮ್ಮ ಕ್ಷೇತ್ರ ಸೆರಾಜ್‌ನಲ್ಲಿ ಒಟ್ಟು 20,425 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಇದೀಗ ಬಿಜೆಪಿಗೆ ಭಾರಿ ಹಿನ್ನೆಡೆ ಆದ ಬೆನ್ನಲ್ಲೇ , ರಾಜ್ಯಪಾಲರಿಗೆ ಜೈರಾಮ್ ಠಾಕೂರ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರಿಗೆ ಕಾಂಗ್ರೆಸ್‌ ಎದುರು ಭಾರಿ ಹಿನ್ನೆಡೆ ಆಗಿದ್ದು, ಜೈರಾಮ್ ಠಾಕೂರ್ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಒಟ್ಟಿನಲ್ಲಿ ಹಿಮಾಚಲ ಪ್ರದೇಶದಲ್ಲಿ ತಮ್ಮದೇ ರಾಜ್ಯಭಾರ ಅಂತಾ ಬೀಗುತ್ತಿದ್ದ ಬಿಜೆಪಿ ಸರ್ಕಾರ ಇದೀಗ ಹಿನ್ನೆಡೆ ಸಾಧಿಸುತ್ತಾ ಮಕಾಡೆ ಮಲಗಿದೆ.

HP Election Results : Himachal Pradesh CM Jairam Thakur tender resignation to Governor

ಸೈಲೆಂಟ್‌ ಆದ ಬಿಜೆಪಿ ಕಾರ್ಯರ್ತರು

ಸೆರಾಜ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎಂ ಜಯರಾಮ್‌ ಠಾಕೂರ್‌ ಭರ್ಜರಿ ಗೆಲುವು ಸಾಧಿಸಿದ್ದರು. 20,425 ಮತಗಳ ಅಂತರದಿಂದ ಗೆದ್ದಿದ್ದು, ಗೆಲುವಿನ ಪತಾಕೆಯನ್ನು ಹಾರಿಸಿದ್ದರು. ಆರಂಭದ ವೇಳೆಯಲ್ಲಿ ಬಿಜೆಪಿ ಗೆಲುವಿನ ಖಾತೆ ತೆರೆದಿತ್ತು. ನಂತರ ಕಾಂಗ್ರೆಸ್‌ ನಿಧಾನಗತಿಯಲ್ಲಿ ಮುನ್ನಡೆ ಸಾಧಿಸುತ್ತಾ ಬಿಜೆಪಿಯನ್ನು ಹಿಂದಿಕುತ್ತಾ ಬಂದಿದ್ದು, ಭಾರಿ ಕುತೂಹಲ ಹುಟ್ಟಿಸಿದೆ. ಆರಂಭದಲ್ಲಿ ಸಿಎಂ ಜೈರಾಮ್ ಠಾಕೂರ್ ತಮ್ಮ ಕ್ಷೇತ್ರ ಸೇರಾಜ್‌ನಲ್ಲಿ 14,921 ಮತಗಳಿಂದ ಮುನ್ನಡೆ ಸಾಧಿಸಿದ್ದರು. ನಂತರ 20,425 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗಲೇ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಲು ಶುರು ಮಾಡಿದ್ದರು. ಯಾವಾಗ ಬಿಜೆಪಿ ಹಿನ್ನೆಡೆ ಸಾಧಿಸುತ್ತಾ ಬಂತೋ ಆಗ ಕಾರ್ಯಕರ್ತರೆಲ್ಲ ಸೈಲೆಂಟ್‌ ಆಗಿದ್ದಾರೆ.

HP Election Results : Himachal Pradesh CM Jairam Thakur tender resignation to Governor

ಬಿಜೆಪಿ ಹಿನ್ನೆಡೆಗೆ ಕಾರಣ ಏನು?

ಸೆರಾಜ್ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, ಜೈ ರಾಮ್ ಠಾಕೂರ್ 1998ರಿಂದ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಲೇ ಬಂದಿದ್ದರು. ಆದರೆ ಇದೀಗ ತಮ್ಮ ಸ್ಥಾನಕ್ಕೆ ಕುತ್ತು ಬಂದಿದ್ದು, ಈ ಬಾರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧಿಕಾರದ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಜನರಿಗೆ ರಸ್ತೆ ಸಂಪರ್ಕವನ್ನು ಕಲ್ಪಸಿಕೊಡಲಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು. ಅಲ್ಲಿನ ಸ್ಥಳೀಯರು ರಸ್ತೆ ಸಂಪರ್ಕವಿಲ್ಲದೇ ದಿನನಿತ್ಯ ಪರದಾಡುವಂತೆ ಆಗಿತ್ತು. ಬಿಜೆಪಿಗೆ ಹಿನ್ನೆಡೆಗೆ ಇದು ಒಂದು ಕಾರಣವಾಯಿತಾ? ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+