
HP Election Result 2022; ಸರ್ಕಾರ ರಚನೆ, ಅಖಾಡಕ್ಕಿಳಿದ ಬಿಜೆಪಿ ವೀಕ್ಷಕರು
ನವದೆಹಲಿ, ಡಿಸೆಂಬರ್ 08; ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಸರ್ಕಾರ ರಚನೆ ಕಸರತ್ತು ಆರಂಭಿಸಿರುವ ಬಿಜೆಪಿ ಪಕ್ಷೇತರ ಅಭ್ಯರ್ಥಿಗಳ ಜೊತೆ ಸಂಪರ್ಕದಲ್ಲಿದೆ.
ಹಿಮಾಚಲ ಪ್ರದೇಶ ವಿಧಾನಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 68. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 35. 33 ಜಿಲ್ಲೆಗಳ 37 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
Recommended Video

Himachal Pradesh Election Result 2022; ಸಿಎಂ ಜೈರಾಮ್ ಠಾಕೂರ್ ಗೆ 2,200 ಮತಗಳ ಮುನ್ನಡೆ
ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 31 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಪಕ್ಷೇತರ ಅಭ್ಯರ್ಥಿಗಳು ಉಳಿದ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
Himachal Pradesh Elections Result 2022: ಹಿಮಾಚಲ ಪ್ರದೇಶ : ಇತಿಹಾಸ ಬರೆಯುವುದೇ ಬಿಜೆಪಿ?
ಬಿಜೆಪಿ ಟಿಕೆಟ್ ಕೈ ತಪ್ಪಿ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಗಳಾದವರು ಮುನ್ನಡೆ ಪಡೆಯುತ್ತಿದ್ದಂತೆ ಬಿಜೆಪಿಯ ವೀಕ್ಷಕರು ಚುರುಕಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಗಳ ಜೊತೆ ಸಂಪರ್ಕದಲ್ಲಿದ್ದಾರೆ.
Gujarat, HP Election Results 2022 Live: ಬಿಜೆಪಿಯ ಹಾರ್ದಿಕ್ ಪಟೇಲ್, ರಿವಾಬಾ ಜಡೇಜಾ ಮುನ್ನಡೆ
ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿ ನಾಯಕ ಮನೋಜ್ ತಿವಾರಿ ಪ್ರತಿಕ್ರಿಯೆ ನೀಡಿದ್ದಾರೆ, "ನಮ್ಮ ಮೂಲಗಳ ಮಾಹಿತಿ ಪ್ರಕಾರ ನಾವು ರಾಜ್ಯದಲ್ಲಿ ಬಹುಮತ ಪಡೆದಿದ್ದೇವೆ" ಎಂದು ಹೇಳಿದ್ದಾರೆ.
#HimachalPradeshElections | Congress leading on 33 and BJP on 31 seats as counting continues in the state with the majority mark being 35 pic.twitter.com/QGiAySx6O8
— ANI (@ANI) December 8, 2022
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸಹ ಹಿಮಾಚಲ ಪ್ರದೇಶದಲ್ಲಿದ್ದಾರೆ. ಶಿಮ್ಲಾ ಸಮೀಪದ ಫಾರಂ ಹೌಸ್‌ನಲ್ಲಿ ಅವರು ಇದ್ದು, ಮತ ಎಣಿಕೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ರಾಜ್ಯದ ಚುನಾವಣಾ ಫಲಿತಾಂಶದ ಟ್ರೆಂಡ್ ಕ್ಷಣ-ಕ್ಷಣಕ್ಕೆ ಬದಲಾಗುತ್ತಿದೆ. ಆದ್ದರಿಂದ ಯಾರಿಗೆ ಬಹುಮತ ಬರಲಿದೆ ಎಂದು ಹೇಳುವುದು ಕಷ್ಟವಾಗಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಶೇ 44.1 ಮತ್ತು ಕಾಂಗ್ರೆಸ್ ಮತಗಳಿಕೆ ಪ್ರಮಾಣ ಶೇ 42.8 ಆಗಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಲ್ವರು ಪಕ್ಷೇತರ ಅಭ್ಯರ್ಥಿಗಳ ಜೊತೆ ಮುಂಬೈನಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ಸರ್ಕಾರ ರಚನೆ ಮಾಡುವವರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸೆರಾಜ್ ಕ್ಷೇತ್ರದಲ್ಲಿ 20,425 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.