• search

ನಿಮ್ಮ ಫೇಸ್ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ?

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 22: 2016ರ ಅಮೆರಿಕಾ ಚುನಾವಣೆ ಮತ್ತು ಬ್ರೆಕ್ಸಿಟ್ ವೇಳೆ 5 ಕೋಟಿಗೂ ಹೆಚ್ಚು ಫೇಸ್ಬುಕ್ ಬಳಕೆದಾರರ ಮಾಹಿತಿ ಖಾಸಗಿ ಕಂಪನಿಗೆ ಸೋರಿಕೆಯಾಗಿದೆ ಎಂಬ ವಿಚಾರ ಜಗತ್ತಿನಲ್ಲೆಲ್ಲಾ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲೂಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿವೆ.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ಈ ಎಲ್ಲಾ ವಿವಾದಗಳ ಆಚೆಗೆ ಜನರು ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್ಬುಕ್ ನಿಂದ ದೂರಸರಿಯಲು ಇಚ್ಛಿಸಿದ್ದಾರೆ. ಸಾಮಾನ್ಯ ಜನರು ತಮ್ಮ ಖಾತೆಗಳನ್ನು ಡಿಲೀಟ್ ಮಾಡಿ, ಅಮೂಲ್ಯ ಖಾಸಗಿ ಮಾಹಿತಿಗಳನ್ನು ಸಂರಕ್ಷಿಸುವತ್ತ ಗಮನ ಹರಿಸಿದ್ದಾರೆ.

  ಫೇಸ್‌ಬುಕ್‌ ಡಿಲೀಟ್ ಮಾಡಿ: ವಾಟ್ಸಾಪ್ ಸಹ ಸ್ಥಾಪಕ

  ಹಾಗಿದ್ದರೆ ನಿಮ್ಮ ಫೇಸ್ಬುಕ್ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

  ಡಿಲೀಟ್ ಮತ್ತು ಡಿಯಾಕ್ಟಿವೇಟ್

  ಡಿಲೀಟ್ ಮತ್ತು ಡಿಯಾಕ್ಟಿವೇಟ್

  ನಿಮ್ಮ ಖಾತೆಯನ್ನು ಡಿಯಾಕ್ಟಿವೇಟ್ ಮಾಡಬಹುದು ಅಥವಾ ಡಿಲೀಟ್ ಮಾಡಬಹುದು. ನೆನಪಿಡಿ ಎರಡೂ ಒಂದೇ ಅಲ್ಲ; ಬೇರೆ ಬೇರೆ.

  ನೀವು ಫೇಸ್ಬುಕ್ ನಲ್ಲಿರುವ ನಿಮ್ಮೆಲ್ಲಾ ಮಾಹಿತಿಗಳನ್ನು ತೆಗೆಯಲು ಇಚ್ಚಿಸಿದ್ದೀರಾ ಅಥವಾ ಕೇವಲ ಅದನ್ನು ಮುಚ್ಚಿಡುವುದು (ಹೈಡ್) ನಿಮ್ಮ ಉದ್ದೇಶವೇ? ಎಂಬುದನ್ನು ನೀವು ಮೊದಲು ನಿರ್ಧರಿಸಿಕೊಳ್ಳಬೇಕು.

  ಡಿಯಾಕ್ಟಿವೇಶನ್ (Deactivation)

  ಅಂದರೆ ನೀವು ಈ ಖಾತೆಗಳಿಗೆ ಮತ್ತೆ ಬರಬಹುದು. ಒಮ್ಮೆ ಖಾತೆಯನ್ನು ಡಿಯಾಕ್ಟಿವೇಟ್ ಮಾಡಿ ಮತ್ತೆ ಲಾಗ್ ಇನ್ ಆದರೆ, ಮೊದಲಿನಂತೆಯೇ ನಿಮ್ಮ ಖಾತೆ ತೆರೆಯುತ್ತದೆ. ಒಂದೇ ವ್ಯತ್ಯಾಸ ಏನು ಅಂದರೆ, ನೀವು ಡಿಯಾಕ್ಟಿವೇಟ್ ಆಗಿದ್ದ ಅವಧಿಯಲ್ಲಿ ನಿಮ್ಮ ಖಾತೆಯನ್ನು ಯಾರೂ ನೋಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ಮತ್ತೆ ಲಾಗ್ ಇನ್ ಆಗುತ್ತಿದಂತೆ ಹಳೆಯದೆಲ್ಲಾ ಮತ್ತೆ ತೆರೆದುಕೊಳ್ಳಲಿದೆ.

  ಡಿಲೀಟ್ (Deletion)

  ಡಿಲೀಟ್ (Deletion)

  ಡಿಲೀಟ್ ಮಾಡುವುದೆಂದರೆ ನೀವು ಇಲ್ಲಿಯವರೆಗೆ ಫೇಸ್ಬುಕ್ ನಲ್ಲಿ ಹಾಕಿದ ಮಾಹಿತಿಗಳನ್ನು ಡಿಲೀಟ್ ಮಾಡುವುದು ಎಂದರ್ಥ. ಆದರೆ ನೀವು ಮೆಸೆಂಜರ್ ನಲ್ಲಿ ಕಳುಹಿಸಿದ ಮಾಹಿತಿಗಳನ್ನು ಇದು ಒಳಗೊಂಡಿರುವುದಿಲ್ಲ. ಅಂದರೆ ನೀವು ನಿಮ್ಮ ಫೇಸ್ಬುಕ್ ಖಾತೆ ಡಿಲೀಟ್ ಮಾಡಿದರೂ ಮೆಸೆಂಜರ್ ನಲ್ಲಿ ಕಳುಹಿಸಿದ ಸಂದೇಶಗಳು ಡಿಲೀಟ್ ಆಗುವುದಿಲ್ಲ.

  ಪೇಸ್ಬುಕ್ ನೀಡುವ ಮಾಹಿತಿಗಳ ಪ್ರಕಾರ ಡಿಲೀಟ್ ಪ್ರಕ್ರಿಯೆ ಆರಂಭಿಸಿದ ನಂತರ ನೀವು ಹಾಕಿದ ಫೋಟೋಗಳು, ಪೋಸ್ಟ್ ಗಳು, ಸ್ಟೇಟಸ್ ಮತ್ತು ಬ್ಯಾಕಪ್ ಸಿಸ್ಟಂನಲ್ಲಿ ಸಂಗ್ರಹವಾದ ಮಾಹಿತಿಗಳನ್ನು ಸಂಪೂರ್ಣ ಅಳಿಸಿಹಾಕಲು 90 ದಿನಗಳ ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಅಮೂಲ್ಯ ಮಾಹಿತಿಗಳನ್ನು ತಾನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ಮತ್ತು ಸಿಗಲು ಬಿಡುವುದೂ ಇಲ್ಲ ಎನ್ನುತ್ತದೆ ಫೇಸ್ಬುಕ್.

  ನೆನಪಿಡಿ: ಮುಂದಿನ ದಿನಗಳಲ್ಲಿ ನಿಮ್ಮ ಮಾಹಿತಿಗಳು ಯಾರಿಗೂ ಸಿಗಬಾರದು ಎಂದಿದ್ದರೆ ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡುವುದೇ ಸೂಕ್ತ.

  ಡಿಲೀಟ್ ಗೂ ಮುನ್ನ ನಿಮ್ಮ ಮಾಹಿತಿಗಳನ್ನೆಲ್ಲಾ ಡೌನ್ಲೋಡ್ ಮಾಡಿ

  ಡಿಲೀಟ್ ಗೂ ಮುನ್ನ ನಿಮ್ಮ ಮಾಹಿತಿಗಳನ್ನೆಲ್ಲಾ ಡೌನ್ಲೋಡ್ ಮಾಡಿ

  ಹೀಗೊಂದು ಅವಕಾಶ ಫೇಸ್ಬುಕ್ ನಲ್ಲಿದೆ. ನೀವು ನಿಮ್ಮ ಖಾತೆಯನ್ನು ಡಿಲೀಟ್ ಮಾಡುವ ಮುನ್ನ ಎಲ್ಲಾ ಮಾಹಿತಿಗಳನ್ನೂ ಡೌನ್ಲೋಡ್ ಮಾಡಬಹುದು.

  ಇದಕ್ಕೆ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ಸಾಕು.

  1. ನಿಮ್ಮ ಫೇಸ್ಬುಕ್ ಖಾತೆಗೆ ಲಾಗಿನ್ ಆಗಿ
  2. ನಿಮ್ಮ ಖಾತೆಯ ಮೇಲ್ಭಾಗದ ಬಲತುದಿಯ ಆಯ್ಕೆಯ ಮೂಲಕ 'ಸೆಟ್ಟಿಂಗ್ಸ್' (Settings) ಆಯ್ಕೆ ಕ್ಲಿಕ್ ಮಾಡಿ.
  3. ಅದರಲ್ಲಿ ಜನರಲ್ ಸೆಟ್ಟಿಂಗ್ ನಲ್ಲಿರುವ "Download a copy of your Facebook data"ದ ಮೇಲೆ ಕ್ಲಿಕ್ ಮಾಡಿ.
  4. ನಂತರ Start My Archive ಆಯ್ಕೆಮಾಡಿ. ನಿಮ್ಮ ಫೇಸ್ನುಕ್ ಖಾತೆಯ ಮಾಹಿತಿಗಳು ನೇರವಾಗಿ ನಿಮ್ಮ ಇಮೇಲ್ ಗೆ ಬರುತ್ತವೆ.
  ನಿಮ್ಮ ಖಾತೆ ಡಿಲೀಟ್ ಮಾಡುವುದು ಹೇಗೆ?

  ನಿಮ್ಮ ಖಾತೆ ಡಿಲೀಟ್ ಮಾಡುವುದು ಹೇಗೆ?

  ಡಿಲೀಟ್ ಮಾಡುವ ಪ್ರಕ್ರಿಯೆ ತುಂಬಾ ತುಂಬಾ ಸರಳ.

  1. ಫೇಸ್ಬುಕ್ ಗೆ ಲಾಗಿನ್ ಆಗಿ
  2. ನಿಮ್ಮ ಖಾತೆಯ ಮೇಲ್ಭಾಗದ ಬಲತುದಿಯ ಆಯ್ಕೆಯ ಮೂಲಕ 'ಸೆಟ್ಟಿಂಗ್ಸ್' (Settings) ಆಯ್ಕೆ ಕ್ಲಿಕ್ ಮಾಡಿ.
  3. ನಂತರ 'ಮ್ಯಾನೇಜ್ ಅಕೌಂಟ್' (Manage account) ಮುಂಭಾಗದ 'ಎಡಿಟ್' (Edit) ಮೇಲೆ ಕ್ಲಿಕ್ ಮಾಡಿದೆ.
  4. 'ರಿಕ್ವೆಸ್ಟ್ ಅಕೌಂಟ್ ಡಿಲೀಶನ್' (Request account deletion) ಆಯ್ಕೆ ಮಾಡಿ. ಇದರ ಕೆಳಗೆಯೇ 'ಡಿಯಾಕ್ಟಿವೇಟ್ ಯುವರ್ ಅಕೌಂಟ್' (Deactivate your account) ಆಯ್ಕೆಯೂ ಇದೆ. ಇದನ್ನೂ ಆಯ್ದುಕೊಳ್ಳಬಹುದು.
  5. ಸಲಹೆಗಳನ್ನು ಅನುಸರಿಸಿ ನಿಮ್ಮ ಖಾತೆ ಡಿಲೀಟ್ ಆಗುತ್ತದೆ.

  ಸುಲಭ ಆಯ್ಕೆಗಾಗಿ: ಇಲ್ಲಿ ಕ್ಲಿಕ್ ಮಾಡಿದರೆ ನೇರ ನಿಮ್ಮ ಫೇಸ್ಬುಕ್ ಖಾತೆ 'ಡಿಲೀಟ್' ಆಯ್ಕೆಯನ್ನು ತಲುಪುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Delete Facebook: Here is the simple guide to delete your Facebook account. Follow the steps.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more