ಜನವರಿ 1ರಂದೇ ಇಬ್ಬರು ಉಗ್ರರು ಪಠಾಣ್‌ ಕೋಟ್‌ಗೆ ನುಗ್ಗಿದ್ದರು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 08 : ಪಠಾಣ್ ಕೋಟ್ ವಾಯುನೆಲೆಗೆ ಭಾರೀ ಪ್ರಮಾಣದಲ್ಲಿ ಹಾನಿ ಮಾಡುವ ಉದ್ದೇಶದಿಂದ ಉಗ್ರರು ದಾಳಿ ಮಾಡಿದ್ದರು. ಇಬ್ಬರು ಉಗ್ರರು ಜನವರಿ 1ರಂದೇ ವಾಯುನೆಲೆಗೆ ನುಗ್ಗಿದ್ದರು ಎಂದು ಎನ್‌ಐಎ ತನಿಖೆಯಿಂದ ಬಹಿರಂಗಗೊಂಡಿದೆ.

ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ಎರಡು ತಂಡಗಳಲ್ಲಿ ಉಗ್ರರು ವಾಯುನೆಲೆ ಪ್ರವೇಶಿಸಿದ್ದರು. ಜನವರಿ 1ರಂದು ಇಬ್ಬರು ನುಗ್ಗಿದ್ದರು. ಉಳಿದ ನಾಲ್ವರು ಜನವರಿ 2ರಂದು ವಾಯುನೆಲೆ ಪ್ರವೇಶಿಸಿದ್ದರು. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

pathankot

ವಾಯುನೆಲೆಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಅದಕ್ಕೆ ಹಾನಿ ಮಾಡುವುದು ಉಗ್ರರ ಉದ್ದೇಶವಾಗಿತ್ತು. ಮೊದಲು ಜನವರಿ 1ರಂದು ದಾಳಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಉಗ್ರರು ಯೋಜನೆ ಬದಲಾವಣೆ ಮಾಡಿ, ಜನವರಿ 2ರಂದು ದಾಳಿ ಆರಂಭಿಸಿದ್ದರು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಎರಡು ತಂಡಗಳಲ್ಲಿ ಬಂದ ಉಗ್ರರ ಪೈಕಿ ನಾಲ್ವರು ಗೋಡೆ ಹಾರಿ ವಾಯುನೆಲೆ ಪ್ರವೇಶಿಸಿದರೆ, ಇನ್ನಿಬ್ಬರು ಉಗ್ರರು ನೀರಿನ ಕೊಳವೆ ಮೂಲಕ ವಾಯುನೆಲೆಗೆ ನುಗ್ಗಿದ್ದರು. ದಾಳಿ ನಡೆಸಿದ ಉಗ್ರರು ವಾಯುನೆಲೆಯ ನೀಲನಕ್ಷೆಯನ್ನು ಹೊಂದಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. [ಪಠಾಣ್ ಕೋಟ್ ದಾಳಿ : ಪಾಕಿಸ್ತಾನದಿಂದ ಮಾಹಿತಿ ಬೇಕಾಗಿದೆ]

ಜನವರಿ 1ರಂದು ನುಗ್ಗಿದ ಉಗ್ರರು ಉಳಿದವರು ಬರುವ ತನಕ ಯಾವುದೇ ದಾಳಿ ಮಾಡದೆ ಕಾದು ಕುಳಿತಿದ್ದರು. ಜನವರಿ 2ರಂದು ಮುಂಜಾನೆ 3.30ರ ಸುಮಾರಿಗೆ ಒಂದಾದ ಉಗ್ರರು ದಾಳಿ ಆರಂಭಿಸಿದರು. ಉಗ್ರರು ವಾಯುನಲೆಯ ಬೇರೆ ಬೇರೆ ಪ್ರದೇಶದಲ್ಲಿ ಅಡಗಿಕೊಳ್ಳಲು ಸಂಚು ರೂಪಿಸಿದ್ದರು. ಆದರೆ, ಯೋಧರು ಅದನ್ನು ವಿಫಲಗೊಳಿಸಿದರು.

ವಾಯುನೆಲೆ ನಿಯಂತ್ರಣ ಕೊಠಡಿಗೆ ನುಗ್ಗಿ ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಳ್ಳುವ ಉದ್ದೇಶ ಹೊಂದಿದ್ದರು. ಆದರೆ, ಯೋಧರ ದಾಳಿಯಿಂದಾಗಿ ಈ ಪ್ರಯತ್ನ ವಿಫಲವಾಯಿತು. ಗೋಡೆ ಹಾರುವಾಗಲೇ ಉಗ್ರನೊಬ್ಬ ಯೋಧರ ಗುಂಡಿಗೆ ಬಲಿಯಾದ ತಕ್ಷಣ, ಅವರು ತಮ್ಮ ಕಾರ್ಯತಂತ್ರವನ್ನು ಬದಲಾವಣೆ ಮಾಡಿ, ಮನಬಂದಂತೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The investigations into the Pathankot attack makes it clear that two terrorists had entered into the air force station on January 1 2016 itself. The rest of the four terrorists entered the air base the next day January 2.
Please Wait while comments are loading...