• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೊವಿಡ್ 19 ಪರೀಕ್ಷೆಗೆ ತಗುಲುವ ವೆಚ್ಚ ಎಷ್ಟು?: ರಾಜ್ಯವಾರು ಮಾಹಿತಿ

|

ನವದೆಹಲಿ, ಅಕ್ಟೋಬರ್ 27: ಕೊರೊನಾ ಸೋಂಕು ಭಾರತವಷ್ಟೇ ಅಲ್ಲದೆ ಇಡೀ ಜಗತ್ತನ್ನೇ ಆಕ್ರಮಿಸಿಕೊಂಡಿದೆ. ಕೊವಿಡ್ 19 ರೋಗಕ್ಕೆ ಇದುವರೆಗೂ ನಿಖರವಾದ ಔಷಧ, ಲಸಿಕೆ ಇಲ್ಲದಿದ್ದರೂ ಕೂಡ ವೈದ್ಯರು ಸೋಂಕು ಗುಣಪಡಿಸಲು ಸಾಹಸ ಮಾಡುತ್ತಿದ್ದಾರೆ.

ಇದೀಗ ಕಳೆದ ಎರಡು ವಾರಗಳಿಂದ ದೇಶದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಪರೀಕ್ಷೆಗೆ ಬೇರೆ ಬೇರೆ ಶುಲ್ಕವನ್ನೇ ನಿಗಧಿಪಡಿಸಲಾಗಿದೆ. ಹಾಗಾದರೆ ಯಾವ ರಾಜ್ಯಗಳಲ್ಲಿ ಎಷ್ಟು ಶುಲ್ಕ ಎಂಬುದರ ಕುರಿತು ಓದೋಣ..

ಗೋ ಕೊರೊನಾ ಗೋ ಅಂದ್ರೂ ಸಚಿವ ಅಠಾವಳೆಯವರನ್ನು ಬಿಡಲಿಲ್ಲ ಸೋಂಕು

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೊರೊನಾ ಪರೀಕ್ಷೆಗೆ ಸಾವಿರಕ್ಕಿಂತಲೂ ಕಡಿಮೆ ವೆಚ್ಚ ತಗುಲಲಿದೆ. ಮಾರ್ಚ್‌ನಲ್ಲಿ 4300 ರೂ ಇತ್ತು. ಇದೀಗ ಉದ್ಧವ್ ಠಾಕ್ರೆ ಸರ್ಕಾರ ಪರೀಕ್ಷಾ ವೆಚ್ಚವನ್ನು ಸಾವಿರಕ್ಕೆ ಇಳಿಕೆ ಮಾಡಿದೆ.

ಲ್ಯಾಬ್‌ಗಳಿಗೆ ತೆರಳಿ ಆರ್‌ಟಿಪಿಸಿಆರ್ ಮಾಡಿಸಿದರೆ 980 ರೂ. ಕೊವಿಡ್ ಆರೈಕೆ ಕೇಂದ್ರಗಳು, ಆಸ್ಪತ್ರೆಗಳು ಅಥವಾ ಔಷಧಾಲಯಗಳಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಗೆ 1400 ಹಾಗೂ ಮನೆಗೆ ಬಂದು ಮಾದರಿಯನ್ನು ಸಂಗ್ರಹಿಸಿದರೆ 1800 ರೂ.ತೆಗೆದುಕೊಳ್ಳಲಾಗುತ್ತದೆ.

ಕರ್ನಾಟಕ: ಅಕ್ಟೋಬರ್ 16ರ ಆದೇಶದಲ್ಲಿ, ಕರ್ನಾಟಕ ಸರ್ಕಾರವು ಕೊವಿಡ್ 19 ಪರೀಕ್ಷೆಯ ದರವನ್ನು 800 ರೂ.ಗೆ ನಿಗದಿಪಡಿಸಿದೆ.

ಸರ್ಕಾರವು ಆರ್‌ಟಿಪಿಸಿಆರ್ ಮಾದರಿಯನ್ನು ಖಾಸಗಿ ಲ್ಯಾಬ್‌ಗೆ ಕಳುಹಿಸಿಕೊಡುತ್ತದೆ. ಖಾಸಗಿ ಪ್ರಯೋಗಾಲಯಗಳಿಗೆ ನೀಡಿದ ಮಾದರಿಗಳಿಗೆ 1200 ರೂ. ಮತ್ತು ಮನೆಯಲ್ಲಿ ಸಂಗ್ರಹಿಸಿದ ಖಾಸಗಿ ಲ್ಯಾಬ್‌ಗಳಿಗೆ ನೀಡುವ ಮಾದರಿಗಳಿಗೆ 1600 ರೂ. ನಿಗದಿಪಡಿಸಿದೆ.

ದೆಹಲಿ:ಜೂನ್‌ನಲ್ಲಿ ದೆಹಲಿ ಸರ್ಕಾರವು ಕೊವಿಡ್ 19 ಪರೀಕ್ಷೆಗೆ 4500 ರೂ ತೆಗೆದುಕೊಳ್ಳುತ್ತಿತ್ತು, ಬಳಿಕ 2400 ತೆಗೆದುಕೊಳ್ಳುತ್ತಿದೆ. ಯಾವುದೇ ಬದಲಾವಣೆಯಾಗಿಲ್ಲ.

ಕೇರಳ: ಕೇರಳ ಸರ್ಕಾರವು ಆರ್‌ಟಿಪಿಸಿಆರ್ ಪರೀಕ್ಷೆ ದರವನ್ನು 2100 ರೂ.ಗಳಿಗೆ ಇಳಿಸಿದೆ. ಈ ಹಿಂದೆ 2750 ರೂ. ಇತ್ತು. ಜೀನ್ ಎಕ್ಸ್‌ಪರ್ಟ್ ಪರೀಕ್ಷೆಗಳನ್ನು ಹಿಂದಿನ 3 ಸಾವಿರ ರೂ.ಗಳಿಂದ 2500 ರೂ.ಗಳಿಗೆ ಪರಿಷ್ಕರಿಸಲಾಗಿದೆ.

ತಮಿಳುನಾಡು:ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆಯ ಫಲಾನುಭವಿಗಳಿಗೆ ತಮಿಳುನಾಡಿನಲ್ಲಿ 1500 ರೂ.ಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. ಫಲಾನುಭವಿಗಳಲ್ಲದವರಿಗೆ 2000 ರೂ. ಹಾಗೆಯೇ ಮನೆಯ ಹತ್ತಿರ ಮಾದರಿ ಸಂಗ್ರಹಿಸಿದರೆ 500 ರೂ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.

ಆಂಧ್ರಪ್ರದೇಶ:ಜುಲೈನಲ್ಲಿ ಆಂಧ್ರಪ್ರದೇಶ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಚಿಕಿತ್ಸಾಲಯಗಳಲ್ಲಿ ಪರೀಕ್ಷಿಸಿದ ಮಾದರಿಗಳಿಗೆ ಕೊವಿಡ್ 19 ಪರೀಕ್ಷೆಯ ಬೆಲೆಯನ್ನು ನಿಗದಿಪಡಿಸಿದೆ. ಖಾಸಗಿ ಲ್ಯಾಬ್‌ಗಳಲ್ಲಿನ ಕ್ಷಿಪ್ರ ಆಂಟಿಜೆನ್ ಪರೀಕ್ಷೆಯ ಕಿಟ್,ಪಿಪಿಆರ್ ಮತ್ತು ಮಾನವಶಕ್ತಿ ವೆಚ್ಚ ಸೇರಿದರೂ 750ರೂ.ಗಿಂತ ಹೆಚ್ಚಿಲ್ಲ.ಆರ್‌ಟಿಪಿಸಿಆರ್ ಪರೀಕ್ಷೆಗೆ 2800ಕ್ಕಿಂತ ಹೆಚ್ಚು ರೂ ತೆಗೆದುಕೊಳ್ಳುವುದಿಲ್ಲ

ತೆಲಂಗಾಣ: ಲ್ಯಾಬ್‌ಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಸಂಗ್ರಹಿಸಿದ ಮಾದರಿಗಳಿಗಾಗಿ ತೆಲಂಗಾಣ ಸರ್ಕಾರ ಖಾಸಗಿ ಕೇಂದ್ರಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗೆ 2200 ರೂ, ಮನೆಯಲ್ಲಿ ಸಂಗ್ರಹಿಸಿದ ಮಾದರಿ ಪರೀಕ್ಷೆಗೆ 2800 ರೂ. ಸಂಗ್ರಹ ಮಾಡಲಾಗುತ್ತಿದೆ.

   ಕೊನೆಗೂ ಅಂದುಕೊಂಡಿದ್ದನ್ನ ಸಾಧಿಸಿದ ಮೋದಿ ಸರ್ಕಾರ | Oneindia Kannada

   ಗುಜರಾತ್: ಗುಜರಾತ್ ಸರ್ಕಾರ ಸೆಪ್ಟೆಂಬರ್‌ನಲ್ಲಿ ಖಾಸಗಿ ಪ್ರಯೋಗಾಲಯಗಳು ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಗಳ ದರವನ್ನು 1 ಸಾವಿರಕ್ಕೆ ಇಳಿಸಿದೆ. ಮನೆಯಲ್ಲಿ ಸಂಗ್ರಹಿಸಿದ ಮಾದರಿ ಪರೀಕ್ಷೆಗೆ 2 ಸಾವಿರ ರೂ. ನಿಗದಿಮಾಡಲಾಗಿದೆ.

   English summary
   The Maharashtra government has further slashed the prices of Covid-19 tests, which will now cost less than Rs 1,000. For the fourth time, the Uddhav Thackeray-led government Monday reduced rates, which have now seen a four-fold decrease since March when tests were priced at around Rs 4,500.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X