ರಿಪೋರ್ಟ್: ಅಂಬಾನಿಗಿರೋ ದುಡ್ಡಲ್ಲಿ ದೇಶವನ್ನೇ ನಡೆಸಬಹುದಂತೆರೀ!

Posted By:
Subscribe to Oneindia Kannada
   ಮುಕೇಶ್ ಅಂಬಾನಿ ಹತ್ತಿರ ಇರೋ ದುಡ್ಡಿನಲ್ಲಿ ದೇಶವನ್ನ 20 ದಿನ ನಡೆಸಬಹುದು | Oneindia Kannada

   ವಿಶ್ವದ 49 ದೇಶಗಳ 49 ಸಿರಿವಂತರ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಅವರಿಗಿರುವ ಸಂಪತ್ತಿನಲ್ಲಿ ಎಷ್ಟು ದಿನ ದೇಶದ ಆಡಳಿತವನ್ನು ನಡೆಸಬಹುದು ಎನ್ನುವ ರಾಬಿನ್ ಹುಡ್ ಇಂಡೆಕ್ಸ್ - 2018ನ್ನು ಬಿಡುಗಡೆ ಮಾಡಲಾಗಿದೆ.

   ಅದರ ಪ್ರಕಾರ ಭಾರತದ ಕುಬೇರ ಮುಕೇಶ್ ಅಂಬಾನಿ ಬಳಿಯಿರುವ ದುಡ್ಡಿನಿಂದ ಎಷ್ಟು ದಿನ ದೇಶದ ಆಡಳಿತವನ್ನು ನಡೆಸಬಹುದು ಎನ್ನುವ ವಿಷಯ ಅಂಕಿಅಂಶದ ಸಮೇತ ಬಿಡುಗಡೆಯಾಗಿದ್ದು, ಶತಕೋಟಿ ಸರದಾರ ಮುಕೇಶ್ ಅಂಬಾನಿ, ಇಪ್ಪತ್ತು ದಿನ ದೇಶವನ್ನು ತನ್ನ ದುಡ್ಡಿನಿಂದ ನಡೆಸಬಲ್ಲರು.

   ಆಯಾಯ ದೇಶಗಳ ಜನಸಂಖ್ಯೆ, ಆಡಳಿತಾತ್ಮಕ ವಿಷಯಗಳು, ಸರಕಾರ ನಡೆಸಲು ತಗಲುವ ದೈನಂದಿನ ಖರ್ಚುವೆಚ್ಚಗಳನ್ನು ಕ್ರೋಢೀಕರಿಸಿ, ಆ ದೇಶದ ಸಿರಿವಂತ ವ್ಯಕ್ತಿಯ ಒಟ್ಟು ಆಸ್ತಿ ಲೆಕ್ಕಾಹಾಕಿ, ಈ ಪಟ್ಟಿಯನ್ನು ಬ್ಲೂಮ್ ಬರ್ಗ್ ಸಿದ್ದಪಡಿಸಿದೆ.

   ಶ್ರೀಮಂತ ಸಿಎಂಗಳ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?

   49 ಶ್ರೀಮಂತರ ಪಟ್ಟಿಯಲ್ಲಿ ನಾಲ್ವರು ಮಹಿಳೆಯರೂ ಇದ್ದಾರೆ. ಇವರು ಅಂಗೋಲ, ಆಸ್ಟ್ರೇಲಿಯಾ, ಚಿಲಿ ಮತ್ತು ನೆದರ್ಲ್ಯಾಂಡ್ ದೇಶದವರು. ಈ ಪಟ್ಟಿಯಲ್ಲಿ ಅತೀ ಹೆಚ್ಚು ದಿನ ದೇಶವನ್ನು ನಡೆಸಬಲ್ಲ ವ್ಯಕ್ತಿ ಸೈಪ್ರಸ್ ದೇಶದ ಜಾನ್ ಫ್ರೆಡ್ರಿಕ್ಸನ್. ಈತನ ಬಳಿಯಿರುವ ಆಸ್ತಿಯಿಂದ 441 ದಿನ ದೇಶವನ್ನು ನಡೆಸಬಹುದಂತೆ.

   ಹಾಗಂತ ಫ್ರೆಡ್ರಿಕ್ಸನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯೇನೂ ಅಲ್ಲ, ಈತನ ಒಟ್ಟಾರೆ ಆಸ್ತಿ 23.6 ಮಿಲಿಯನ್ ಡಾಲರ್. ಆದರೆ, ಸೈಪ್ರಸ್ ದೇಶದ ಜನಸಂಖ್ಯೆ ಕಮ್ಮಿಯಿರುವುದರಿಂದ, ತನ್ನಲ್ಲಿರುವ ದುಡ್ಡಿನಿಂದ ಅತಿಹೆಚ್ಚು ದಿನ ದೇಶವನ್ನು ನಡೆಸಬಲ್ಲ ಸಿರಿವಂತರ ಪಟ್ಟಿಯಲ್ಲಿ ಫ್ರೆಡ್ರಿಕ್ಸನ್ ನಂಬರ್ ಒಂದನೇ ಸ್ಥಾನದಲ್ಲಿದ್ದಾರೆ.

   ಈ ಪಟ್ಟಿಯಲ್ಲಿಅಂಬಾನಿಗೆ ಎಷ್ಟನೇ ಸ್ಥಾನ? ಮುಂದೆ ಓದಿ..

   ಅಮೆಜಾನ್ ಮಾಲೀಕ ಬಿಜೋಸ್

   ಅಮೆಜಾನ್ ಮಾಲೀಕ ಬಿಜೋಸ್

   1. ಹೆಸರು: ಜೆಫ್ ಬಿಜೋಸ್
   ದೇಶ: ಅಮೆರಿಕ
   ಒಡೆತನದ ಸಂಸ್ಥೆ: ಅಮೆಜಾನ್
   ಒಟ್ಟು ಆಸ್ತಿ ಮೌಲ್ಯ: 99 ಶತಕೋಟಿ ಡಾಲರ್
   ಎಷ್ಟು ದಿನ ದೇಶ ನಡೆಸಬಲ್ಲರು: 05

   ಇಂಡಿಟೆಕ್ಸ್ ಸಂಸ್ಥಾಪಕ ಒರ್ಟಿಕೋ

   ಇಂಡಿಟೆಕ್ಸ್ ಸಂಸ್ಥಾಪಕ ಒರ್ಟಿಕೋ

   2. ಹೆಸರು: ಅಮೆನ್ಸಿಯಾ ಒರ್ಟಿಕೋ
   ದೇಶ: ಸ್ಪೇನ್
   ಒಡೆತನದ ಸಂಸ್ಥೆ: ಇಂಡಿಟೆಕ್ಸ್, Daez
   ಒಟ್ಟು ಆಸ್ತಿ ಮೌಲ್ಯ: 75 ಶತಕೋಟಿ ಡಾಲರ್
   ಎಷ್ಟು ದಿನ ದೇಶ ನಡೆಸಬಲ್ಲರು: 48

   ಎಲ್ ವಿ ಎಂ ಎಚ್ ಮಾಲೀಕ ಒರ್ಟಿಕೋ

   ಎಲ್ ವಿ ಎಂ ಎಚ್ ಮಾಲೀಕ ಒರ್ಟಿಕೋ

   3. ಹೆಸರು: ಬರ್ನಾರ್ಡ್ ಆರ್ಲಾಲ್ಟ್
   ದೇಶ: ಫ್ರಾನ್ಸ್
   ಒಡೆತನದ ಸಂಸ್ಥೆ: ಎಲ್ ವಿ ಎಂ ಎಚ್
   ಒಟ್ಟು ಆಸ್ತಿ ಮೌಲ್ಯ: 63 ಶತಕೋಟಿ ಡಾಲರ್
   ಎಷ್ಟು ದಿನ ದೇಶ ನಡೆಸಬಲ್ಲರು: 15

   ಟೆಲ್ ಮೆಕ್ಸ್ ಸಂಸ್ಥಾಪಕ ಕಾರ್ಲಸ್ ಸ್ಲಿಮ್

   ಟೆಲ್ ಮೆಕ್ಸ್ ಸಂಸ್ಥಾಪಕ ಕಾರ್ಲಸ್ ಸ್ಲಿಮ್

   4. ಹೆಸರು: ಕಾರ್ಲಸ್ ಸ್ಲಿಮ್
   ದೇಶ: ಮೆಕ್ಸಿಕೊ
   ಒಡೆತನದ ಸಂಸ್ಥೆ: ಟೆಲ್ ಮೆಕ್ಸ್, ಕಾರ್ಸೋ ಗ್ರೂಪ್
   ಒಟ್ಟು ಆಸ್ತಿ ಮೌಲ್ಯ: 62.8 ಶತಕೋಟಿ ಡಾಲರ್
   ಎಷ್ಟು ದಿನ ದೇಶ ನಡೆಸಬಲ್ಲರು: 82

   ಆಲಿಬಾಬ ಗ್ರೂಪ್ ಮಾಲೀಕ

   ಆಲಿಬಾಬ ಗ್ರೂಪ್ ಮಾಲೀಕ

   5. ಹೆಸರು: ಜಾಕ್ ಮಾ
   ದೇಶ: ಚೀನಾ
   ಒಡೆತನದ ಸಂಸ್ಥೆ: ಆಲಿಬಾಬ ಗ್ರೂಪ್
   ಒಟ್ಟು ಆಸ್ತಿ ಮೌಲ್ಯ: 45.5 ಶತಕೋಟಿ ಡಾಲರ್
   ಎಷ್ಟು ದಿನ ದೇಶ ನಡೆಸಬಲ್ಲರು: 04

   ರಿಲಯನ್ಸ್ ಗ್ರೂಪ್ ಮಾಲೀಕ ಅಂಬಾನಿ

   ರಿಲಯನ್ಸ್ ಗ್ರೂಪ್ ಮಾಲೀಕ ಅಂಬಾನಿ

   6. ಹೆಸರು: ಮುಕೇಶ್ ಅಂಬಾನಿ
   ದೇಶ: ಭಾರತ
   ಒಡೆತನದ ಸಂಸ್ಥೆ: ರಿಲಯನ್ಸ್ ಇಂಡಸ್ಟ್ರೀಸ್
   ಒಟ್ಟು ಆಸ್ತಿ ಮೌಲ್ಯ: 40.3 ಶತಕೋಟಿ ಡಾಲರ್
   ಎಷ್ಟು ದಿನ ದೇಶ ನಡೆಸಬಲ್ಲರು: 20

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   How many days could the government keep running if the richest person of each country was paying for it? Bloomberg created the 2018 Robin Hood Index to delve into the subject. As per report 6 days Mukesh Ambani can run India.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ