• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಫೋರ್ಬ್ಸ್ ಪಟ್ಟಿ ಸೇರಿದ್ದರ ಮಹತ್ವವೇನು?

By Avinash Sharma
|

ವಿಶ್ವದ ಪ್ರಭಾವಿ ವ್ಯಕ್ತಿಗಳ ಸಾಲಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೋರ್ಬ್ಸ್ ಮ್ಯಾಗಜೀನ್ ಸೇರಿಸಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಅಗ್ರಸ್ಥಾನದಲ್ಲಿದ್ದರೆ ಮೋದಿ ಪಟ್ಟಿಯಲ್ಲಿ 15ನೇ ಸ್ಥಾನ ಗಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಟಾಪ್ 1 ಸ್ಥಾನವನ್ನು ಪುಟಿನ್ ಗೆ ಬಿಟ್ಟುಕೊಟ್ಟಿದ್ದಾರೆ.

ಈ ಬೆಳವಣಿಗೆ ಅನೇಕ ಅಂಶಗಳನ್ನು ಸಾಬೀತು ಮಾಡುತ್ತವೆ. ವಿಶ್ವವ್ಯಾಪಿ ಬೆಳೆಯುತ್ತಿರುವ ನರೇಂದ್ರ ಮೋದಿ ಪ್ರಭಾವ ಎಲ್ಲರ ಅರಿವಿಗೆ ಬರುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಿರುವವರಿಗೆ ಇದೊಂದು ಸಂತಸದ ಸುದ್ದಿಯೇ. ಪಟ್ಟಿಯಲ್ಲಿ ಕಳೆದ ವರ್ಷ 21 ನೇ ಸ್ಥಾನ ಪಡೆದುಕೊಂಡಿದ್ದ ಸೋನಿಯಾ ಗಾಂಧಿ ಈ ಬಾರಿ ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.[ಫೋರ್ಬ್ಸ್ ಪಟ್ಟಿ: ಪುಟಿನ್ ನಂ.1, ಮೋದಿ 15]

ಮೋದಿ ಬಗ್ಗೆ ಫೋರ್ಬ್ಸ್ ಮ್ಯಾಗಜೀನ್ ಏನು ಹೇಳಿದೆ?

ಯಾವ ಬಾಲಿವುಡ್ ಸ್ಟಾರ್ ಗೂ ಕಡಿಮೆಯಿಲ್ಲದಂತೆ ನರೇಂದ್ರ ಮೋದಿ ಎಂಬ ಹೊಸ ನಕ್ಷತ್ರ ಭಾರತದಲ್ಲಿ ಪ್ರಜ್ವಲಿಸುತ್ತಿದೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ವ್ಯಕ್ತಿ ಭಾರತದ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ.

ಗಾಂಧಿಗಳ ಯುಗಕ್ಕೆ ಅಂತ್ಯ ಹಾಡಿದ ವ್ಯಕ್ತಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕೂರಿಸಿದ್ದಾರೆ ಎಂದು ಹೇಳಿದೆ.ಇದೇ ರೀತಿಯ ಬೆಳವಣಿಗೆಗಳು ಮುಂದುವರಿದರೆ ಭಾರತವನ್ನು ಸೂಪರ್ ಪವರ್ ಮಾಡಬೇಕೆಂದಿರುವ ಮೋದಿ ಕನಸು ಸಾಕಾರವಾಗಲಿದೆ. ಮೋದಿ ಜನಪ್ರಿಯತೇ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಅವರು ಭೇಟಿ ನೀಡಿದ ಕಡೆಯಲ್ಲ ನಾಗರಿಕರಿಂದ ಪ್ರೀತಿ ವ್ಯಕ್ತವಾಗುತ್ತಿದೆ ಎಂದು ಹೇಳಿದೆ.

ಮೋದಿ ಆಡಳಿತ ಭಾರತೀಯರಿಗೆ ಭದ್ರತೆ ಒದಗಿಸಿದೆ. ಆರ್ಥಿಕ ಸುಧಾರಣೆಗೆ ಕಾರಣವಾಗಿದೆ. ಭಾರತೀಯರನ್ನು ನೋಡಿ ಇತರರು ಪಾಠ ಕಲಿಯುವಂತಾಗಿದೆ. ಅಮೆರಿಕ, ಚೀನಾ ಮತ್ತು ಏಷ್ಯಾದ ಇತರ ರಾಷ್ಟ್ರಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಅಭಿವೃದ್ಧಿಗೆ ಪೂರಕವಾದ ಅನೇಕ ಯೋಜನೆಗಳನ್ನು ಪ್ರತಿದಿನ ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

ಮೋದಿ ಫೋರ್ಬ್ಸ್ ಮ್ಯಾಗಜೀನ್ ಸೇರಿದ್ದರ ಮಹತ್ವವೇನು?

ಕೆಲವೊಂದು ಪಟ್ಟಿಗಳಿಗೂ ವಾಸ್ತವ ಸ್ಥಿತಿಗೂ ಯಾವುದೇ ಸಂಬಂಧವಿರಲ್ಲ. ಆದರೆ ಈ ಪಟ್ಟಿ ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಪ್ರಪಂಚದ ಮೇಲೆ ಪ್ರಭಾವ ಬೀರುತ್ತಿರುವವರ ಪಟ್ಟಿ ಸತ್ಯಕ್ಕೆ ಹತ್ತಿರವಾಗಿದೆ.

ಭಾರದತ ಬೆಳವಣಿಗೆ ರೀತಿಯಲ್ಲಿದೆ? ಪ್ರಭಾವ ಬೀರುತ್ತಿರುವ ಕ್ಷೇತ್ರಗಳಾವವು? ಅದಕ್ಕೆ ಮೂಲ ಕಾರಣ ಏನು? ಎಂಬ ಎಲ್ಲ ಅಂಶಗಳು ಮೋದಿ ಪಟ್ಟಿಯಲ್ಲಿಸ್ಥಾನ ಪಡೆಯಲು ಕಾರಣವಾಯಿತು.

ಇದು ಮತ್ತೊಂದು ಸಂಗತಿಯನ್ನು ಬಹಿರಂಗ ಮಾಡುತ್ತದೆ. ಭಾರತ ಮೋದಿ ನಾಯಕತ್ವದಡಿ ಇನ್ನು ಅನೇಕ ವರ್ಷಗಳ ಕಾಲ ಇರಬೇಕು. ಪಟ್ಟಿಯಲ್ಲಿ ಮೋದಿಗಿಂತ ಮುಂದೆ ಇದ್ದವರು ಸಹ ಅನೇಕ ವರ್ಷಗಳ ಕಾಲ ಒಂದು ದೇಶದ ನಾವಿಕರಂತೆ ಕೆಲಸ ಮಾಡಿದ್ದಾರೆ. ಅವರನ್ನೆಲ್ಲ ಹಿಂದಿಕ್ಕುವ ಸಲುವಾಗಿ ಆದರೂ ಮೋದಿ ಆಡಳಿತ ಅಗತ್ಯ ಎಂದು ಇನ್ನೊಂದು ಬಗೆಯ ಚಿಂತನೆ ಹೇಳುತ್ತದೆ.

ಭಾರತವನ್ನು ಮತ್ತಷ್ಟು ಮುಂದಕ್ಕೆ ನಡೆಸಲು ಮೋದಿ ಸ್ಥಾನ ಕಾರಣವಾಗಲಿದೆ. ಇಂಥ ಮಹತ್ತರ ಪಟ್ಟಿಯಲ್ಲಿ ಸ್ಥಾನ ಗಳಿಸುವುದು ಸುಲಭದ ಮಾತಲ್ಲ. ದೇಶಕ್ಕೂ ಇದು ಒಳಿತು ಮಾಡಲಿದೆ ಎಂದು ಬೂಮರಿಂಗ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಸಿದ್ಧಾರ್ಥ್ ಜರ್ಬಿ ಹೇಳಿದ್ದಾರೆ.

ಜಾಗತಿಕವಾಗಿ ಕಾಂಗ್ರೆಸ್ ಮರೆಯಾಗುವ ಲಕ್ಷಣವೇ?

ಒಂದು ಕಾಲದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಗಾಂಧಿ-ನೆಹರು ಕುಟುಂಬ ಮತ್ತು ಕಾಂಗ್ರೆಸ್ ಜನರಿಂದ ದೂರವಾಗುವ ಲಕ್ಷಣವೆ? ಎಂಬ ಪ್ರಶ್ನೆಯೂ ಎದುರಾಗಿದೆ. ಹೊಸದೊಂದು ರಾಜಕೀಯ ಸಿದ್ಧಾಂತ ಭಾರತದಲ್ಲಿ ಉದಯಿಸಿದ್ದುಸೋನಿಯಾ ಗಾಂಧಿ ಪಟ್ಟಿಯಲ್ಲಿ ಸ್ಥಾನ ಕಳದುಕೊಂಡಿರುವುದು ಮೋದಿ ಜನಪ್ರಿಯತೆ ಮತ್ತು ಕಾಂಗ್ರಸ್ ಅವಸಾನದ ಸೂಚಕವಾಗಿದೆ ಎಂದು ಸಿದ್ಧಾರ್ಥ್ ಹೇಳಿದ್ದಾರೆ.[ಆಸ್ಟ್ರೇಲಿಯಾದಲ್ಲಿ ಸಂಚರಿಸಲಿದೆ ಮೋದಿ ಎಕ್ಸ್ ಪ್ರೆಸ್]

ರಾಕ್ ಸ್ಟಾರ್ ನರೇಂದ್ರ ಮೋದಿ

ಭಾರತಕ್ಕೆ ಒಂದು ಶಕ್ತಿಶಾಲಿ ನಾಯಕತ್ವ ಕೊರತೆ ಇತ್ತು ಎಂಬ ಕೊರಗಿಗೆ ಮೋದಿ ಉತ್ತರವಾಗಿದ್ದಾರೆ. ಹಾಗಾಗಿಯೇ ಫೋರ್ಬ್ಸ್ ಪಟ್ಟಿ ಮೋದಿಯನ್ನು ರಾಕ್ ಸ್ಟಾರ್ ಎಂದು ಕರೆದಿದೆ. ಇದು ಭಾರತದ ದೃಷ್ಟಿಕೋನದಲ್ಲಿ ಉತ್ತಮ ಬೆಳವಣಿಗೆಯಾಗಿದೆ ಎಂದೇ ಹೇಳಬಹುದು.

ಅಲ್ಲದೇ ಮೋದಿ ಸಹ ಇಲ್ಲಿ ಒಂದು ಸಂದೇಶ ಸಾರಿದ್ದಾರೆ. ದೇಶದ ಒಳಗಡೆ ಅಲ್ಲದೇ ಹೊರಗಡೆಯೂ ತಾನೊಬ್ಬ ಶಕ್ತಿಶಾಲಿ ನಾಯಕ ಎಂಬ ಅಂಶವನ್ನು ಫೋರ್ಬ್ಸ್ ಪಟ್ಟಿಯಲ್ಲಿ ಸೇರಿದ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi on Wednesday made an impressive debut as he joined the world's most powerful people ranking 15th on the Forbes magazine's list. Russian President Vladimir Putin once again defeated his US counterpart Barack Obama to the top spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more