ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ: ಚುನಾವಣೆಯಲ್ಲಿ ಬಿಜೆಪಿಗೆ ಲಾಭವೋ,ನಷ್ಟವೋ?

Posted By:
Subscribe to Oneindia Kannada

ನಾನಿನ್ನೂ ಯುವಕ, ಸೆಕ್ಸ್ ನನ್ನ ಹಕ್ಕು. ನಾನು ಪ್ರಧಾನಿ ಮೋದಿ ಅಥವಾ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾಗೇ 'ನಾಮರ್ದ್' ನಲ್ಲ. ಗುಜರಾತಿನ ಪಟೇದಾರ್ ಎನ್ನುವ ದೊಡ್ಡ ಸಮುದಾಯ ಮತ್ತು ಆ ಸಮುದಾಯದ ಮೀಸಲಾತಿ ಹೋರಾಟದ ರೂವಾರಿ ಹಾರ್ದಿಕ್ ಪಟೇಲ್ ಬಾಯಿಯಿಂದ ಇಂಥಾ ಮಾತು ತರವೇ? ಗುಜರಾತ್ ಮತದಾರ ನಿರ್ಧರಿಸಲಿ..

42 ಕೋಟಿ ರೂಪಾಯಿ ಖರ್ಚು ಮಾಡಿ, ಬಿಜೆಪಿ ಇನ್ನೂ ನನ್ನ 50 ಮಾರ್ಪ್ ಮಾಡಿರುವ ವಿಡಿಯೋ ಬಿಡುಗಡೆ ಮಾಡಲಿದೆ ಎಂದು ಚುನಾವಣಾ ಹೊಸ್ತಿಲಲ್ಲಿರುವ ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ಬಿಜೆಪಿ ವಿರುದ್ದ ಅಬ್ಬರಿಸಿದ್ದಾರೆ. ಹಾರ್ದಿಕ್ ಪಟೇಲ್ ಅವರ ಸೆಕ್ಸ್ ಮತ್ತು ಬೀರ್ ಹೀರುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಗೊತ್ತೇ ಇದೆ.

ನನಗೀಗ 23 ವರ್ಷ, ಗರ್ಲ್ ಫ್ರೆಂಡ್ ಇದ್ರೆ ತಪ್ಪೇನು

ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಅದನ್ನು ಪಕ್ಕಕ್ಕಿಟ್ಟು, ಇದು ಗುಜರಾತ್ ಮತದಾರರ ಮೇಲೆ ಯಾವರೀತಿ ಪರಿಣಾಮ ಬೀರಲಿದೆ. ಇದರ ರಾಜಕೀಯ ಲಾಭ/ನಷ್ಟ, ಬಿಜೆಪಿಗೋ ಅಥವಾ ಕಾಂಗ್ರೆಸ್ಸಿಗೋ ಎನ್ನುವ ಲೆಕ್ಕಾಚಾರ ದೇಶಾದ್ಯಂತ ನಡೆಯಲಾರಂಭಿಸಿದೆ.

ಹಾರ್ದಿಕ್ ಪಟೇಲ್ ಅವರ ವಿಡಿಯೋ ಬಿಡುಗಡೆಯಾದ ನಂತರ, ಅವರು ನೀಡುತ್ತಿರುವ ಹೇಳಿಕೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅದು ಮಾರ್ಪ್ ಮಾಡಿರುವ ವಿಡಿಯೋ ಎಂದು ಹೇಳುವ ಹಾರ್ದಿಕ್, ನಾನು ಯುವಕ ಸೆಕ್ಸ್ ಮಾಡಿದರೆ ತಪ್ಪೇನು ಎನ್ನುವ ಅಪ್ರಬುದ್ದತೆಯ ಹೇಳಿಕೆಯನ್ನು ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಮತ್ತೋರ್ವ ಪಾಟೀದಾರ್ ಹೋರಾಟಗಾರ ಬಿಜೆಪಿ ಬಲೆಗೆ

ಡಿಸೆಂಬರ್ 9 ಮತ್ತು 14ರಂದು ಗುಜರಾತ್ ಅಸೆಂಬ್ಲಿ ಚುನಾವಣೆಗೆ ಮತದಾನ ನಡೆಯಲಿದ್ದು, ಡಿ.18ರಂದು ಫಲಿತಾಂಶ ಹೊರಬೀಳಲಿದೆ. ಪಟೇದಾರ್ ಅನಾಮತ್ ಆಂದೋಲನ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ಅವರ ಸೆಕ್ಸ್ ವಿಡಿಯೋ, ಬಿಜೆಪಿಗೆ ನಷ್ಟಕ್ಕಿಂತ ಲಾಭವಾಗುವ ಸಾಧ್ಯತೆಯೇ ಹೆಚ್ಚು ಅನ್ನುತ್ತದೆ ಇಂಡಿಯಾ ಟುಡೇ ವರದಿ. ಅದು ಹೇಗೆ, ಮುಂದೆ ಓದಿ..

ಹಾರ್ದಿಕ್ ಪಟೇಲ್ ತನ್ನನ್ನು ತಾನು ಸಮರ್ಥಿಸಿಕೊಂಡ ರೀತಿ

ಹಾರ್ದಿಕ್ ಪಟೇಲ್ ತನ್ನನ್ನು ತಾನು ಸಮರ್ಥಿಸಿಕೊಂಡ ರೀತಿ

ವಿಡಿಯೋ ಬಿಡುಗಡೆಯಾದ ನಂತರ, ಹಾರ್ದಿಕ್ ಪಟೇಲ್ ತನ್ನನ್ನು ತಾನು ಸಮರ್ಥಿಸಿಕೊಂಡ ರೀತಿ ಗುಜರಾತ್ ನಾಗರೀಕರಿಗೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಒಂದು ವೇಳೆ ಇದೊಂದು ಸುಳ್ಳು ವಿಡಿಯೋ ಎಂದಾರೆ, ಹಾರ್ದಿಕ್ ಇದುವರೆಗೆ ಪೊಲೀಸರ ಮೊರೆಯಾಕೆ ಹೋಗಲಿಲ್ಲ ಎನ್ನುವುದು ಪ್ರಶ್ನೆ. ಹಾಗಾಗಿ, ಈ ಸಿಡಿ ನಿಜಯಾಕಿರಬಾರದು ಎಂದು ಗುಮಾನಿ ಪಟ್ಟುಕೊಳ್ಳುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.

ಪಟೇದಾರ್ ಸಮುದಾಯದಲ್ಲಿ ಮದುವೆಗಿಂತ ಮುಂಚೆ ಸೆಕ್ಸ್ ಅನೈತಿಕ

ಪಟೇದಾರ್ ಸಮುದಾಯದಲ್ಲಿ ಮದುವೆಗಿಂತ ಮುಂಚೆ ಸೆಕ್ಸ್ ಅನೈತಿಕ

ನನಗಿನ್ನೂ ಮದುವೆಯಾಗಿಲ್ಲ, ಸೆಕ್ಸ್ ನನ್ನ ಹಕ್ಕು ಎಂದು ಹಾರ್ದಿಕ್ ಪಟೇಲ್ ಹೇಳಿಕೆಯನ್ನು ಕೆಲವು ಯುವ ಸಮುದಾಯ ಒಪ್ಪಿಕೊಂಡರೂ, ಮಹಿಳೆಯರಿಂದ ಮತ್ತು ಸಮುದಾಯದ ಹಿರಿಯರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾಕೆಂದರೆ, ಪಟೇದಾರ್ ಸಮುದಾಯದಲ್ಲಿ ಮದುವೆಗಿಂತ ಮುಂಚೆ ಸೆಕ್ಸ್ ಅನೈತಿಕ.

ಹಾರ್ದಿಕ್ ಪಟೇಲ್ ಅವರ ಇಮೇಜಿಗೆ ಧಕ್ಕೆ ತರುವ ವಿಚಾರ

ಹಾರ್ದಿಕ್ ಪಟೇಲ್ ಅವರ ಇಮೇಜಿಗೆ ಧಕ್ಕೆ ತರುವ ವಿಚಾರ

ಈ ವಿಡಿಯೋ ಬಿಡುಗಡೆಯಾದ ನಂತರ ಇದಕ್ಕೆ ಹಾರ್ದಿಕ್ ಪಟೇಲ್ ಸ್ಪಂದಿಸಿರುವ ರೀತಿಯೂ ಸಮುದಾಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. 2015ರಲ್ಲೂ ಹಾರ್ದಿಕ್ ಪಟೇಲ್ ಅವರ ಸೆಕ್ಸ್ ವಿಡಿಯೋ ಬಿಡುಗಡೆಯಾಗಿದ್ದವು. ಆದರೆ, ಅಂದು ಮತ್ತು ಇಂದು ಈ ಬಗ್ಗೆ ಪೊಲೀಸರಿಗೆ ದೂರು ನೀಡದೇ ಇರುವುದು, ಹಾರ್ದಿಕ್ ಪಟೇಲ್ ಅವರ ಇಮೇಜಿಗೆ ಧಕ್ಕೆ ತರುವ ವಿಚಾರ ಎನ್ನಲಾಗುತ್ತಿದೆ.

ಕಾಂಗ್ರೆಸ್ ಜೊತೆ ಮಾತುಕತೆ ನಡೆಸುವ ಶಕ್ತಿ ಹಾರ್ದಿಕ್ ಪಟೇಲ್ ಗೆ ಇಲ್ಲ

ಕಾಂಗ್ರೆಸ್ ಜೊತೆ ಮಾತುಕತೆ ನಡೆಸುವ ಶಕ್ತಿ ಹಾರ್ದಿಕ್ ಪಟೇಲ್ ಗೆ ಇಲ್ಲ

ಇವೆಲ್ಲಾ ವಿದ್ಯಮಾನಗಳಿಂದ ಹಾರ್ದಿಕ್ ಪಟೇಲ್ ಗೆ ತನ್ನ ಸಮುದಾಯದಲ್ಲೇ ಹಿಡಿತ ಕಮ್ಮಿಯಾಗುವ ಸಾಧ್ಯತೆಯಿದೆ. ತನ್ನ ಹಿಂದಿನ ಹೋರಾಟದ ಕಿಚ್ಚು ಆತನಿಗಿಲ್ಲ. ಜೊತೆಗೆ, ವಿಡಿಯೋ ಬಿಡುಗಡೆಯಾದ ನಂತರ, ತನ್ನ ಸಮುದಾಯಕ್ಕೆ ಏನು ಬೇಗ ಎಂದು ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸುವ ಶಕ್ತಿಯೂ ಆತನಿಗಿಲ್ಲ ಎನ್ನುವ ಮಾತೂ ಪಟೇದಾರ್ ಸಮುದಾಯದಲ್ಲಿ ಕೇಳಿ ಬರುತ್ತಿದೆ.

ಹಾರ್ದಿಕ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಲಕ್ಷಣ

ಹಾರ್ದಿಕ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಲಕ್ಷಣ

ಪಟೇದಾರ್ ಸಮುದಾಯದಲ್ಲಿ ಹಾರ್ದಿಕ್ ಪಟೇಲ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿದ್ದು, ರಾಜಕೀಯವಾಗಿ ಮತ್ತು ವೋಟ್ ಬ್ಯಾಂಕ್ ವಿಚಾರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು, ಬಿಜೆಪಿ ಇದರ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಇಂಡಿಯಾ ಟುಡೇ ತನ್ನ ವರದಿಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat's Patidar leader Hardik Patel is in the eye of a storm over a sex CD which came in public domain on November 13. The sleazy CD has the potential to impact the Gujarat election which will be held in less than a month. As per report, this CD will indirectly benefit to BJP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ