ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಸೋಂಕು ಕಡಿಮೆಯಾಗಲು ಕಾರಣವೇನು?

|
Google Oneindia Kannada News

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಹರ್ಡ್ ಇಮ್ಯುನಿಟಿ ಕಾರಣ ಎಂದು ತಜ್ಞರು ಹೇಳಿದ್ದಾರೆ. ಇನ್ನು ಭಾರತದಲ್ಲಿ ಅನೇಕ ಭಾಗಗಳಲ್ಲಿ 'ಹರ್ಡ್ ಇಮ್ಯುನಿಟಿ' ಇದೆ. ಹೀಗಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.

ಜನತೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಸೋಂಕು ಹರಡದಂತೆ ತಡೆಯುವುದೇ ಹರ್ಡ್ ಇಮ್ಯುನಿಟಿ ಅಥವಾ ಸಮುದಾಯ ಪ್ರತಿರೋಧಕ ಶಕ್ತಿ ಎಂದು ಕರೆಯುತ್ತಾರೆ.

ದೆಹಲಿಯಲ್ಲಿ ಮತ್ತೆ ಏರುಗತಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದೆಹಲಿಯಲ್ಲಿ ಮತ್ತೆ ಏರುಗತಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು

ಹರ್ಡ್ ಇಮ್ಯುನಿಟಿ ಎನ್ನುವುದು ವೈರಸ್ ಅಥವಾ ರೋಗದಿಂದ ನಮಗೆ ಸಿಗುವ ಪರೋಕ್ಷ ರಕ್ಷಣೆ, ಇದರಿಂದ ಜನರನ್ನು ರಕ್ಷಣೆ ಮಾಡಬಹುದಾಗಿದೆ. ಒಂದು ಲಸಿಕಅಭಿವೃದ್ಧಿಪಡಿಸಿದಾಗ ಅಥವಾ ಜನರಿಗೆ ಸೋಂಕು ತಗುಲಿ ಗುಣಮುಖರಾದಾಗ ಇದು ಹೆಚ್ಚು ಅನುಕೂಲವಾಗುತ್ತದೆ.

How Far Is India From Achieving Herd Immunity?

ಅತಿ ಹೆಚ್ಚು ಜನಸಂಖ್ಯೆಗೆ ಸೋಂಕು ಹರಡಿ ಗುಣವಾದಾಗ ಅಥವಾ ಅತಿ ಹೆಚ್ಚು ಜನರು ಪ್ರತಿರೋಧ ಶಕ್ತಿ ಬೆಳೆಸಿಕೊಂಡಾಗ ವೈರಸ್ ಹರಡುವಿಕೆ ಕ್ರಮೇಣ ಕಡಿಮೆಯಾಗುತ್ತದೆ.

ಬಹುಪಾಲು ಜನರಿಗೆ ಸೋಂಕು ತಗುಲಿದಾಗ ತನ್ನಿಂತಾನೆ ಜನರಲ್ಲಿ ರೋಗ ನಿರೋಧಕರ ಶಕ್ತಿ ಬೆಳೆಯುತ್ತದೆ, ಅದನ್ನು ಹರ್ಡ್ ಇಮ್ಯುನಿಟಿ ಎನ್ನಲಾಗುತ್ತದೆ. ಯುರೋಪ್‌ನ ಬಹುತೇಕ ಭಾಗಗಳಲ್ಲಿ ಎರಡನೇ ಹಂತದ ಲಾಕ್‌ಡೌನ್ ವಿಧಿಸಲಾಗಿದೆ, ಅಮೆರಿಕದಲ್ಲೂ ನಿತ್ಯ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಆದರೆ ಭಾರತದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದರೆ ನಿಜವಾದ ಕಾರಣ ಏನೆಂದು ಇಲ್ಲಿಯವರೆಗೂ ತಿಳಿದುಬಂದಿಲ್ಲ.

ರೋಗ ನಿರೋಧಕ ಕಡಿಮೆ ಇರುವ ದೇಹದಲ್ಲಿ ವೈರಸ್ ಪ್ರವೇಶಿಸಿದಾಗ ಅದು ವಿನಾಶಕ್ಕೆ ಕಾರಣವಾಗುತ್ತದೆ. ಹಾಗೆಯೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದಾಗ ರೋಗಕಾರಕದೊಂದಿಗಿನ ಸಂಬಂಧ ಬದಲಾಗುತ್ತದೆ.

ರೋಗ ನಿರೋಧಕ ಶಕ್ತಿ ಅಪಾಯವನ್ನು ಕಡಿಮೆ ಮಾಡುತ್ತದೆ. ಬ್ರೆಜಿಲ್‌ನಲ್ಲಿ ಝಿಕಾ ವೈರಸ್ ಬಂದಿದ್ದು, ಅಲ್ಲಿಯ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಇದ್ದ ಕಾರಣ ಬಹುಬೇಗ ಅದರ ಅಪಾಯ ಕಡಿಮೆಯಾಯಿತು. ಹಾಗೆಂದ ಮಾತ್ರ ಝಿಕಾ ವೈರಸ್ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂದು ಅರ್ಥವಲ್ಲ ಅಪಾಯ ಕೊಂಚ ತಗ್ಗಿದೆ.

Recommended Video

Bihar Election 2020 : ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತಿದೆ | Oneindia kannada

English summary
Many pockets in India have already clearly achieved herd immunity, because infection levels are falling naturally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X