ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಹೊಡೆತ ನೀಡುತ್ತಾ ಕಾಂಗ್ರೆಸ್-ಎಸ್ಪಿ ಮೈತ್ರಿಕೂಟ?

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೋ, ಜನವರಿ 24: ಕಾಂಗ್ರೆಸ್ ಮತ್ತು ಎಸ್ಪಿ ನಡುವಿನ ಚುನಾವಣಾ ಹೊಂದಾಣಿಕೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ. ಅದರಲ್ಲೂ ಇದು ಬಿಜೆಪಿ ಪಾಲಿಗೆ ದೊಡ್ಡ ಮಟ್ಟದ ಪರಿಣಾಮ ಬೀರಬಹುದು ಎಂದುಕೊಳ್ಳಲಾಗಿದೆ.

ಬಿಜೆಪಿ ಮಾತ್ರ ಹೊರಗಡೆಯಿಂದ ತನಗೇನು ಆಗಿಯೇ ಇಲ್ಲ ಬಿಂಬಿಸಿಕೊಳ್ಳುತ್ತಿದೆ. ಎರಡೂ ಪಕ್ಷಗಳ ನಡುವಿನ ಮೈತ್ರಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಭವಿಷ್ಯ ಉಳಿಸಲು ಮಾಡಿದ್ದು ಎನ್ನುತ್ತಿದೆ. ಆದರೆ ಒಳಗಿನಿಂದ ಪರಿಸ್ಥಿತಿಯ ಸಂಪುರ್ಣ ಅವಲೋಕನ ನಡೆಸುತ್ತಿದೆ.[ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್, ಸಮಾಜವಾದಿ ಪ್ರಣಾಳಿಕೆ ಬಿಡುಗಡೆ]

 How does the SP-Congress alliance impact the BJP in UP

ಕಾಂಗ್ರೆಸ್ ಚುನಾವಣೆಯಲ್ಲಿ 50-60 ಸ್ಥಾನಗಳನ್ನೂ ಗೆಲ್ಲುವ ಸಾಧ್ಯತೆಗಳೇ ಇಲ್ಲ. ಅಂಥಹದ್ದರಲ್ಲಿ 105 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಇದು ಕಾಂಗ್ರೆಸ್ ಚುನಾವಣೆಯ ಬಗ್ಗೆ ಹೆದರಿಕೊಂಡಿರುವುದರ ಸೂಚನೆ ಎಂದು ಬಿಜೆಪಿಯ ಆಂತರಿಕ ಮೂಲಗಳು ಹೇಳಿವೆ.[ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ಗೆಲುವಿಗೆ 35-37% ಮತಗಳು ಸಾಕಂತೆ!]

ಈ ಮೈತ್ರಿಯನ್ನು ಬಿಹಾರದಲ್ಲಿ ನಡೆದಿದ್ದ ಮೈತ್ರಿಯ ಜತೆಗೆ ಹೋಲಿಸಿಕೊಳ್ಳಲು ಬಿಜೆಪಿ ಸಿದ್ಧವಿಲ್ಲ. ಅಲ್ಲಿ ನಡೆದ ಮಹಾಮೈತ್ರಿಯೇ ಬೇರೆ ತೆರನಾದುದು ಎಂದು ಅದು ಹೇಳಿದೆ. ಇನ್ನು ಬಹುಜನ ಸಮಾಜವಾದಿ ಪಕ್ಷದ ಜತೆ ಹೊಂದಾನೀಕೆ ಮಾಡಿಕೊಳ್ಳುವ ಸಾಧ್ಯತೆಯನ್ನೂ ಬಿಜೆಪಿಯ ಮೂಲಗಳು ತಳ್ಳಿ ಹಾಕಿವೆ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಮೂಲಗಳು ಹೇಳಿವೆ. (ಒನ್ ಇಂಡಿಯಾ ಸುದ್ದಿ)

English summary
The tie up between the Congress and the Samajwadi Party for the Uttar Pradesh Assembly Elections 2017 may affect to the BJP to a certain extent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X