ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡಮಾರುತದ ಹೆಸರಿನ ರಹಸ್ಯ ಹುಡುಕುತ್ತಾ...

By Mahesh
|
Google Oneindia Kannada News

ಬೆಂಗಳೂರು, ಅ.12: ಚಂಡಮಾರುತ/ಬಿರುಗಾಳಿಗೆ ಯಾರು ಹೆಸರಿಡುತ್ತಾರೆ? ನಾಮಕರಣ ಹಿಂದಿನ ವೈಜ್ಞಾನಿಕ ಹಿನ್ನೆಲೆ ಏನು?ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಚಂಡಮಾರುತಗಳ ಹೆಸರನ್ನು ಕೇಳಿದರೆ ಏಕೆ ಚೆಂದದ ಹೆಸರು ನೀಡುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ.

ಲೈಲಾ, ಫೇಟ್, ಗಿರಿ, ಐಲಾ, ಫಾನ್ ಭಾರತದಲ್ಲಿ ಕಾಣಿಸಿಕೊಂಡಿತ್ತು. ಅಮೆರಿಕದಲ್ಲಿ ಸ್ಯಾಂಡಿ ನಂತರ್ ಕತ್ರೀನಾ ಹರಿಕೇನ್ ಡ್ಯಾನ್ಸ್ ಮಾಡಿದ್ದಳು.

ಪೈಲೀನ್ ಚಂಡಮಾರುತದ ಬಗ್ಗೆ: ಪೈಲೀನ್ ಚಂಡಮಾರುತಕ್ಕೆ ಹೆಸರು ಕೊಟ್ಟಿದ್ದು ಥಾಯ್ಲೆಂಡ್ ದೇಶ. ಆಂಗ್ಲಭಾಷೆಯಲ್ಲಿ Phailin ಎಂದು ಬರೆಯಲಾಗುವ ಇದರ ಸರಿಯಾದ ಸಂಬೋಧನೆ "ಪೈಲೀನ್" ಅಂತೆ. ಕೆಲವರು ಇಂಗ್ಲೀಷ್ ಪದದ ಟ್ರಾನ್ಸ್'ಲಿಟರೇಶನ್ ಮಾಡಿದಾಗ 'ಫೈಲಿನ್' ಎಂದೂ ಬರೆಯುತ್ತಾರೆ. ಫೈಲಿನ್ ಎಂದೇ ಎಲ್ಲೆಡೆ ಬಳಕೆಯಲ್ಲಿದೆ. ಆದರೆ, ಥಾಯ್ಲೆಂಡಿನ ಭಾಷೆಯ ಪ್ರಕಾರ ಪೈಲೀನ್ ಸರಿಯಾದ ಸಂಬೋಧನೆ. ಪೈಲೀನ್ ಎಂದರೆ 'ನೀಲಮಣಿ'(Sapphire) ಎಂದರ್ಥ

ಕೆಲ ಚಂಡಮಾರುತಗಳು ವಿವಿಧ ತೀವ್ರತೆಯನ್ನ ಮತ್ತು ವಿಶೇಷತೆಯನ್ನ ಒಳಗೊಂಡಿರುತ್ತವೆ. ಅವೆಲ್ಲವನ್ನೂ ತೀವ್ರತೆಯ ಆಧಾರದಲ್ಲಿ ವರ್ಗೀಕರಣ ಮಾಡಲು ಕಷ್ಟಸಾಧ್ಯ. ಹೀಗಾಗಿ, ಚಂಡಮಾರುತಗಳಿಗೆ ಹೆಸರನ್ನಿಟ್ಟರೆ ಅದರ ಕಾಲ, ಗುಣ ಹೀಗೆ ಹಲವು ವಿಷಯಗಳನ್ನ ಸುಲಭವಾಗಿ ಸಂಗ್ರಹಿಸಿಡಬಹುದು ಎಂದು ಹವಾಮಾನ ತಜ್ಞರುಹೇಳುತ್ತಾರೆ. ಯಾವಾಗಿಂದ ಈ ಪದ್ಧತಿ ಶುರುವಾಯಿತು? ಹೆಂಗಸರು, ಸಂತರ ಹೆಸರು ಬಳಸುವುದೇಕೆ? ದಕ್ಷಿಣ ಏಷ್ಯಾದಲ್ಲಿ ಹೆಸರಿಡುವುದು ಹೇಗೆ? ಮುಂದೆ ಓದಿ...

ಭಾರತ ಹವಾಮಾನ ಇಲಾಖೆ

ಭಾರತ ಹವಾಮಾನ ಇಲಾಖೆ

ಭಾರತ ಹವಾಮಾನ ಇಲಾಖೆ (IMD) ಚಂಡಮಾರುತಗಳಿಗೆ ಹೆಸರಿಡಲು ಆರಂಭಿಸಿದ್ದು ತೀರಾ ಇತ್ತೀಚೆಗೆ ಎನ್ನಬಹುದು. ಕಳೆದ ಎರಡು ವರ್ಷದಿಂದ ಚಂಡಮಾರುತಗಳಿಗೆ ಹೆಸರಿಡಲು ಆರಂಭಿಸಿದ್ದೇವೆ.

ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಬಳಸಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಅದರೆ, ಚಂಡಮಾರುತಗಳಿಗೆ ಹೆಸರಿಡಲು ಒಂದೇ ಬಗೆಯ ವಿಧಾನ ಅನುಸರಿಸುವುದಿಲ್ಲ. ವಿವಿಧ ರೀತಿ ವ್ಯವಸ್ಥೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾನ್ಯವಾಗಿ ಕ್ಯಾಥೊಲಿಕ್ ಸಂತರ ಹೆಸರುಗಳನ್ನು ಬಳಸಲಾಗುತ್ತದೆ.

ನಂತರ ಚಂಡಮಾರುತ ಮೇಲೇಳುವ ಪ್ರದೇಶದ ಅಕ್ಷಾಂಶ, ರೇಖಾಂಶಗಳ ಅಂಕಿ ಅಂಶ ಆಧಾರದ ಮೇಲೆ ಹೆಸರಿಡಲು ಆರಂಭಿಸಲಾಯಿತು. ಅದರೆ, ಇದು ವಿಜ್ಞಾನಿಗಳಿಗೆ ಕೊಂಚ ತ್ರಾಸದಾಯಕ ವ್ಯವಸ್ಥೆಯಾಗಿ ಕಂಡು ಬಂದಿತು ಎಂದಿದ್ದಾರೆ.

ಮಹಿಳೆಯ ಹೆಸರು ಏಕೆ?

ಮಹಿಳೆಯ ಹೆಸರು ಏಕೆ?

ಇದು ಕೂಡಾ ಕುತೂಹಲಕಾರಿಯಾಗಿದೆ.ಚಂಡಿಯಂತೆ ಆಡುವ ಮಾರುತಗಳಿಗೆ ಸ್ತ್ರೀಲಿಂಗ ನಾಮಗಳೇ ಇದೆ ಏಕೆ? ಎಂಬ ಪ್ರಶ್ನೆ ಥಟ್ಟನೆ ಬರುವುದು ಸಹಜ.

ಎರಡನೇ ಮಹಾ ಸಮರದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು.

WMO ಅಕ್ಷರ ಮಾಲೆ ಪ್ರಕಾರ ಹೆಸರುಗಳನ್ನು ಬದಲಾಯಿಸುತ್ತಾ ಹೋಗಲು ನಿರ್ಧರಿಸಿತು. ಇದು ಕೂಡಾ ಚಂಡಮಾರುತ ಹೊಡೆತಕ್ಕೆ ಸಿಲುಕಿದ ದೇಶಗಳ ಮನವಿ ಮೇರೆಗೆ ಹೆಸರುಗಳನ್ನು WMO ಸೂಚಿಸುತ್ತಾ ಬಂದಿದೆ. ಒಮ್ಮೆ ಬಳಸಿದ ಹೆಸರನ್ನು 10 ವರ್ಷಗಳವರೆಗೂ ಬಳಸುವುದಿಲ್ಲ. ಇದು ಐತಿಹಾಸಿಕವಾಗಿ ಹಾಗೂ ವಿಮೆ ಹಿಂಪಡೆಯುವುದಕ್ಕೆ ಸುಲಭವಾಗುವಂಥ ವ್ಯವಸ್ಥೆಯಾಗಿದೆ.

ಪುರುಷರ ಹೆಸರೂ ಬಳಕೆ

ಪುರುಷರ ಹೆಸರೂ ಬಳಕೆ

1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು. ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರ್ಪಡೆಗೊಂಡವು.

ಸಾಮಾನ್ಯವಾಗಿ ಫ್ರೆಂಚ್ ಹಾಗೂ ಸ್ಪಾನೀಷ್ ಹೆಸರುಗಳನ್ನೇ ಬಳಸಲು ಆರಂಭಿಸಲಾಯಿತು. ಚಂಡ ಮಾರುತದ ಹೊಡೆತಕ್ಕೆ ಸಿಕ್ಕ ರಾಷ್ಟ್ರಗಳ ಭಾಷೆ ಆಧಾರಿಸಿ ಹೆಸರುಗಳನ್ನು ಸೂಚಿಸಲಾಯಿತು. ರಾಕ್ಸಿ ಬೋಲ್ಟನ್ ಅವರು ಮಹಿಳೆಯ ಹೆಸರಿನ ಬದಲಾಗಿ ಯುಎಸ್ ಸೆನೆಟರ್ ಗಳ ಹೆಸರುಗಳನ್ನು ಸೂಚಿಸಿದರು.

WMO ಹೆಸರುಗಳ ಪಟ್ಟಿ

WMO ಹೆಸರುಗಳ ಪಟ್ಟಿ

ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆ(WMO) ಸುಮಾರು 6 ಪಟ್ಟಿ ಹೊಂದಿದ್ದು ಸುಮಾರು 21 ಹೆಸರುಗಳಿದೆ.( Q, U, X, Y ಹಾಗೂ Z ಅಕ್ಷರದಿಂದ ಬರುವ ಹೆಸರುಗಳನ್ನು ಬಳಕೆ ಮಾಡುತ್ತಿಲ್ಲ) ಪ್ರತಿ 6 ವರ್ಷಕ್ಕೊಮ್ಮೆ ಪಟ್ಟಿ ಬದಲಾಗುತ್ತದೆ.

2005ರಲ್ಲಿ ಆದಂತೆ ವರ್ಷದಲ್ಲಿ 21ಕ್ಕೂ ಅಧಿಕ ಚಂಡ ಮಾರುತ ಕಂಡು ಬಂದರೆ ಇಂಗ್ಲೀಷ್ ವರ್ಣಮಾಲೆ ಬದಲಿಗೆ ಗ್ರೀಕ್ ವರ್ಣಮಾಲೆ ಅಕ್ಷರದಂತೆ ಹೆಸರು ಸೂಚಿಸಲಾಗುತ್ತದೆ.

ಒಂದು ಸಾಗರದಲ್ಲಿ ಕಾಣಿಸಿಕೊಂಡ ಚಂಡಮಾರುತ ಮತ್ತೊಂದು ಸಾಗರಕ್ಕೆ ಸಾಗುವಷ್ಟರಲ್ಲೇ ಅವಸಾನ ಹೊಂದಿ ಮತ್ತೆ ಮೊದಲಿಂದ ಮೇಲಕ್ಕೇದ್ದರೆ ಹೆಸರಿಡುವುದು ಕಷ್ಟ ಕಷ್ಟ. ಆಗ 'ಐಡೆಂಟಿಟಿ' ಬಿಕ್ಕಟ್ಟು ತಲೆ ದೋರುತ್ತದೆ.

ದಕ್ಷಿಣ ಏಷ್ಯಾದಲ್ಲಿ ಹೇಗೆ?

ದಕ್ಷಿಣ ಏಷ್ಯಾದಲ್ಲಿ ಹೇಗೆ?

ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಭಾಗದಲ್ಲಿ ಏಳುವ ಭಾರಿ ಅಲೆಗಳಿಗೆ ಸುಲಭವಾಗಿ ಹೆಸರಿಡುವುದನ್ನು ಇಲಾಖೆ ಅಭ್ಯಾಸ ಮಾಡಿಕೊಂಡಿದೆ.

ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮಯನ್ಮಾರ್, ಓಮಾನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಹೀಗೆ ಎಂಟು ರಾಷ್ಟ್ರಗಳು ಹಿಂದೂ ಮಹಾಸಾಗರ ವ್ಯಾಪ್ತಿಗೆ ಬರುತ್ತದೆ.

2000ರ ವರ್ಷದಿಂದ ಚಂಡಮಾರುತಗಳಿಗೆ ಹೆಸರನ್ನಿಡುವ ಪರಿಪಾಠ ರೂಢಿಗೆ ಬಂದಿದೆ. 2004ರಲ್ಲಿ ನಾಮಕರಣಕ್ಕೆ ಹೊಸ ಸೂತ್ರ ಬಳಕೆ ತರಲಾಗಿದೆ.ಮೇಲ್ಕಂಡ ರಾಷ್ಟ್ರಗಳು ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರನ್ನಿಡುತ್ತವೆ.

ವೈವಿಧ್ಯಮಯ ಹೆಸರುಗಳು

ವೈವಿಧ್ಯಮಯ ಹೆಸರುಗಳು

ಭಾರತದಲ್ಲಿ 2004ರಲ್ಲಾದ ಚಂಡಮಾರುತಗಳಿಗೆ ಅಗ್ನಿ, ಆಕಾಶ್, ಬಿಜಲಿ, ಜಲ್ ಹೆಸರನ್ನಿಡಲಾಗಿದೆ. ಲೆಹೆರ್, ಮೇಘ್, ಸಾಗರ್ ಮತ್ತು ವಾಯು ಮೊದಲಾದ ಭಾರತೀಯ ಹವಾಮಾನ ಇಲಾಖೆ ಪಟ್ಟಿಯಲ್ಲಿದೆ.

ತಮಿಳುನಾಡು, ಆಂಧ್ರಪ್ರದೇಶ ಕಾಡಿದ್ದ ನೀಲಂ ಚಂಡಮಾರುತಕ್ಕೆ ಪಾಕಿಸ್ತಾನ ಹೆಸರು ನೀಡಿತ್ತು. ಮುರ್ಜಾನ್ ಚಂಡಮಾರುತಕ್ಕೆ ಓಮನ್ ಹೆಸರು ನೀಡಿತ್ತು. ಹೀಗೆ ವಿವಿಧ ರಾಷ್ಟ್ರಗಳು ತಮ್ಮ ಸರದಿ ಬಂದಾಗ ಹೆಸರು ನೀಡುತ್ತವೆ.
ಅಮೆರಿಕದಲ್ಲಿ ನಾಮಕರಣ ಹೇಗೆ

ಅಮೆರಿಕದಲ್ಲಿ ನಾಮಕರಣ ಹೇಗೆ

ಅಮೆರಿಕದಲ್ಲಿ ಸಮಸಂಖ್ಯೆಯ ಬಿರುಗಾಳಿಗಳಿಗೆ ಮಹಿಳೆಯ ಹೆಸರುಗಳು, ಬೆಸಸಂಖ್ಯೆಯ ಬಿರುಗಾಳಿಗಳಿಗೆ ಪುರುಷರ ಹೆಸರುಗಳನ್ನು ಇಡಲಾಗುತ್ತದೆ. ವರ್ಷದ ಮೊದಲ ಬಿರುಗಾಳಿಗೆ ಎ ಅಕ್ಷರ ನಂತರ ಬಿ ಅಕ್ಷರ ಹೀಗೆ ಸರಣಿ ಮುಂದುವರೆಯುತ್ತದೆ. ಇದರ ಜತೆಗೆ ಚಂಡಮಾರುತವೇಳುವ ಪ್ರದೇಶಗಳ ನಿರ್ದಿಷ್ಟ ದೇಶಗಳು ನಾಮಕರಣದ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ.

English summary
How do tropical storms/hurricanes get their names? :Superstorm Sandy, Katrina came and caused large-scale devastation across USA. Cyclone Nilam disrupted normal life in Tamil Nadu and Andhra Pradesh. Now Phailin threat to east coast of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X