ಹನುಮಂತಪ್ಪರನ್ನು ಪತ್ತೆಹಚ್ಚಿದ ಶ್ವಾನಗಳಿಗೆ ಸೆಲ್ಯೂಟ್

Subscribe to Oneindia Kannada

ಬೆಂಗಳೂರು, ಫೆಬ್ರವರಿ, 10 : ವೀರ ಯೋಧ ಹನುಮಂತಪ್ಪ ಅವರು ಬದುಕಿ ಬಂದ ಪವಾಡ ನಡೆಯಲು ಕಾರಣವಾಗಿರುವ ಸೇನೆಯ ತಂಡವನ್ನು ಒಂದು ಬಾರಿ ನೆನೆಸಿಕೊಳ್ಳಲೇಬೇಕು. ನಿಜವಾಗಿ ಹನುಮಂತಪ್ಪ ಅವರಿಗೆ ಪುನರ್ ಜನ್ಮ ನೀಡಿದವು ಎರಡು ಶ್ವಾನಗಳು.

ಸಿಯಾಚಿನ್ ನಲ್ಲಿ ರಕ್ಷಣಾ ಕಾರ್ಯ ನಡೆಸುವುದು ಸುಲಭದ ಕೆಲಸವಲ್ಲ. ಡಾಟ್ ಮತ್ತು ಮಿಶಾ ಎಂಬ ನಾಯಿಗಳು ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಸೇನೆ ತಿಳಿಸಿದೆ.[ಸಿಯಾಚಿನ್ ಪವಾಡ: ಹನುಮಂತಪ್ಪ ಬಗ್ಗೆ ಅವರ ಅವ್ವ ಹೇಳಿದ್ದೇನು?]

india

20 ಸಾವಿರ ಅಡಿ ಎತ್ತರದಲ್ಲಿ ಹಿಮದ ರಾಶಿಯ ನಡುವೆ ಸಿಲುಕಿದ್ದ ಸೈನಿಕರಿಗಾಗಿ ಸೇನೆ ರಕ್ಷಣಾ ಕಾರ್ಯಾಚರಣೆಯನ್ನು 6 ದಿನಗಳ ಹಿಂದೆ ಆರಂಭಿಸಿತ್ತು. ಇದಕ್ಕಾಗಿ 150 ಸೈನಿಕರು ಮತ್ತು 2 ನಾಯಿಗಳನ್ನೊಳಗೊಂಡ ವಿಶೇಷ ರಕ್ಷಣಾ ತಂಡವನ್ನು ಸಜ್ಜುಗೊಳಿಸಲಾಗಿತ್ತು.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ರಕ್ಷಣಾ ತಂಡ 800 ಮೀಟರ್ ಅಗಲ 1000 ಮೀಟರ್ ಉದ್ದ ಹರಡಿಕೊಂಡಿದ್ದ 30 ಅಡಿ ದಪ್ಪದ ಹಿಮ ಪದರದ ಕೆಳಗೆ ಸಿಲುಕಿದ್ದ ಯೋಧರಿಗಾಗಿ ಹುಟುಕಾಟ ನಡೆಸಿದೆ. ಸೈನಿಕನ ಇರುವಿಕೆಯನ್ನು ಸೇನಾ ನಾಯಿಗಳು ಗುರುತು ಮಾಡಿದ ನಂತರ ಹಿಮವನ್ನು ಇಂಚಿಂಚಾಗಿ ಕತ್ತರಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಹನುಮಂತಪ್ಪ ಬಳಿ ತೆರಳಲಾಗಿತ್ತು.[ಹನುಮಂತಪ್ಪ ಆರೋಗ್ಯಕ್ಕಾಗಿ ಭಾರತೀಯರಿಂದ ಪ್ರಾರ್ಥನೆ]

india

ಹಿಮದಡಿ ಸಿಲುಕಿ ಮೃತಪಟ್ಟಿರುವ ಎಲ್ಲಾ 9 ಯೋಧರ ಪಾರ್ಥಿವ ಶರೀರಗಳನ್ನು ಹೊರತೆಗೆಯಲಾಗಿತ್ತು. ಹನುಮಂತಪ್ಪ ಒಬ್ಬರನ್ನು ಮಾತ್ರ ಜೀವಂತವಾಗಿ ರಕ್ಷಿಸಲಾಗಿತ್ತು. ಮೈನಸ್ 30 ರಿಂದ 55 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೆಲಸ ಮಾಡಿದ ಸೈನಿಕರು ಕಾಣೆಯಾಗಿದ್ದ 10 ಜನ ವೀರ ಯೋಧರಲ್ಲಿ ಹನುಮಂತಪ್ಪ ಅವರನ್ನು ಜೀವಂತವಾಗಿ ಕರೆತಂದಿದ್ದು ಇಡೀ ದೇಶವೇ ಇದೀಗ ಹನುಮಂತಪ್ಪ ಅವರ ಬದುಕಿಗಾಗಿ ಪ್ರಾರ್ಥನೆ ಮಾಡುತ್ತಿದೆ.[ಡಿಕೆ ರವಿ ಮುದ್ದಿನ ನಾಯಿಯ ರೋಧನಕ್ಕೆ ಸಿಗದ ಉತ್ತರ ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dogged determination of over 150 soldiers helped by two canines, Dot and Misha, besides earth penetrating radars and special ice cutting equipment helped rescue Lance Naik Hanamanthappa Koppad, who was buried under tonnes of ice at 20,000 feet on the Siachen Glacier.
Please Wait while comments are loading...