ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿಂದು (ಜು 28) ನಿತೀಶ್ ವಿಶ್ವಾಸಮತ ಯಾಚನೆ: ಸೋಲು, ಗೆಲುವು 50:50?

ಇಂದು (ಜುಲೈ 28) ಬಿಹಾರ ಸಿಎಂ ನಿತೀಶ್ ಕುಮಾರ್ 11 ಗಂಟೆಗೆ ವಿಶ್ವಾಸಮತ ಯಾಚಿಸಲಿದ್ದು, ಜೆಡಿಯು ಶಾಸಕರ ಅಪಸ್ವರದಿಂದಾಗಿ ಸದನದಲ್ಲಿ ರಾಜಕೀಯ ಮೇಲಾಟ ನಡೆಯುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ ನಿತೀಶ್ ವಿಶ್ವಾಸಮತ ಗೆಲ್ಲುವ ಸಾಧ್ಯತೆ ಫಿಫ್ಟ

|
Google Oneindia Kannada News

ಬುಧವಾರ (ಜುಲೈ 26) ಬಿಹಾರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿಯಿಂದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ದ ಸ್ವಪಕ್ಷೀಯರೇ ಉಲ್ಟಾ ಹೊಡೆಯಲು ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ನಿತೀಶ್ - ಮೋದಿ ಮೈತ್ರಿಗೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲದಿಲ್ಲ.

ಇಂದು (ಜುಲೈ 28) ಮುಖ್ಯಮಂತ್ರಿ ನಿತೀಶ್ ಕುಮಾರ್ ಹನ್ನೊಂದು ಗಂಟೆಗೆ ವಿಶ್ವಾಸಮತ ಯಾಚಿಸಲಿದ್ದು, ಜೆಡಿಯು ಶಾಸಕರ ಅಪಸ್ವರದಿಂದಾಗಿ ಸದನದಲ್ಲಿ ರಾಜಕೀಯ ಮೇಲಾಟ ನಡೆಯುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ ನಿತೀಶ್ ವಿಶ್ವಾಸಮತ ಗೆಲ್ಲುವ ಸಾಧ್ಯತೆ ಫಿಫ್ಟಿ..ಫಿಫ್ಟಿ.. ಎಂದು ನ್ಯೂಸ್ 18 ವರದಿ ಮಾಡಿದೆ.

ಸ್ವಹಿತಾಸಕ್ತಿ ಕಾಪಾಡಲು ನಿತೀಶ್ ಏನು ಬೇಕಾದ್ರೂ ಮಾಡ್ತಾರೆ: ರಾಹುಲ್ಸ್ವಹಿತಾಸಕ್ತಿ ಕಾಪಾಡಲು ನಿತೀಶ್ ಏನು ಬೇಕಾದ್ರೂ ಮಾಡ್ತಾರೆ: ರಾಹುಲ್

ಒಂದು ವೇಳೆ ವಿಶ್ವಾಸಮತಕ್ಕೆ ಸೋಲಾದರೆ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಭಾರೀ ಮುಖಭಂಗವಾಗಲಿದೆ. ಜೆಡಿಯು ಮಾಜೀ ಅಧ್ಯಕ್ಷ ಶರದ್ ಯಾದವ್ ,ಬಿಜೆಪಿ ಜೊತೆಗಿನ ಮೈತ್ರಿಗೆ ಬೇಸರ ವ್ಯಕ್ತಪಡಿಸಿರುವುದು ನಿತೀಶ್ ಕುಮಾರಿಗೆ ತಲೆನೋವಾಗಿ ಪರಿಣಮಿಸಿದೆ.

ಗುರುವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆಗಿನ ಭೇಟಿಯ ವೇಳೆ, ಸೌಜನ್ಯಕ್ಕಾದರೂ ನನ್ನನ್ನು ಸಂಪರ್ಕಿಸದೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ನಿತೀಶ್ ಕುಮಾರ್ ತೆಗೆದುಕೊಂಡರು ಎಂದು ಶರದ್ ಯಾದವ್ ಬೇಸರಿಸಿಕೊಂಡರು ಎನ್ನಲಾಗುತ್ತಿದೆ.

ಕೇಂದ್ರ ಎನ್ ಡಿಎ ಮೈತ್ರಿಕೂಟದ ಜೊತೆ ಒಂದಾಗಲಿದೆಯಾ ಜೆಡಿಯು?ಕೇಂದ್ರ ಎನ್ ಡಿಎ ಮೈತ್ರಿಕೂಟದ ಜೊತೆ ಒಂದಾಗಲಿದೆಯಾ ಜೆಡಿಯು?

ಕೇರಳ ಮತ್ತು ಮಹಾರಾಷ್ಟ್ರ ಜೆಡಿಯು ಘಟಕ ಈಗಾಗಲೇ ನಿತೀಶ್ ಕುಮಾರ್, ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಬಹಿರಂಗ ವಿರೋಧ ವ್ಯಕ್ತ ಪಡಿಸಿದ್ದು, ಪಕ್ಷದ ರಾಜ್ಯಸಭಾ ಸದಸ್ಯ ವೀರೇಂದ್ರ ಕುಮಾರ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಲಾಲೂ ಪಕ್ಷದಲ್ಲೂ ಅಪಸ್ವರ, ಆರ್ಜೆಡಿ, ಕಾಂಗ್ರೆಸ್ ಶಾಸಕರಿಂದ ಕ್ರಾಸ್ ವೋಟಿಂಗ್ ಸಾಧ್ಯತೆ. ಮುಂದೆ ಓದಿ..

ನಿತೀಶ್ ಕುಮಾರಿಗೆ ಎಷ್ಟು ಬೇಕು?

ನಿತೀಶ್ ಕುಮಾರಿಗೆ ಎಷ್ಟು ಬೇಕು?

ಬಿಹಾರ ವಿಧಾನಸಭೆಯ ಬಲಾಬಲ ಇಂತಿದೆ:
ಒಟ್ಟು ಸದಸ್ಯರು: 243
ಬಹುಮತಕ್ಕೆ ಬೇಕಾಗಿರುವುದು: 122
ಜೆಡಿಯು - 71
ಎನ್ಡಿಎ - 58
ಆರ್ಜೆಡಿ - 80
ಕಾಂಗ್ರೆಸ್ - 27
ಇತರರು - 7

ನಿತೀಶ್ ಕುಮಾರ್ ನಿರ್ಧಾರದಿಂದ ಜೆಡಿಯುನಲ್ಲಿ ಬಿರುಕು

ನಿತೀಶ್ ಕುಮಾರ್ ನಿರ್ಧಾರದಿಂದ ಜೆಡಿಯುನಲ್ಲಿ ಬಿರುಕು

ನಿತೀಶ್ ಕುಮಾರ್ ನಿರ್ಧಾರದಿಂದ ಜೆಡಿಯುನಲ್ಲಿ ಬಿರುಕು ಉಂಟಾದಂತೇ, ಮಗನ ಪರವಾಗಿ ನಿಂತು ಲಾಲೂ ಪ್ರಸಾದ್ ಯಾದವ್ ಪಕ್ಷದ ಇಮೇಜಿಗೆ ಧಕ್ಕೆ ತಂದಿದ್ದಾರೆಂದು ಆರ್ಜೆಡಿಯಲ್ಲೂ ಬಿರುಕು ಉಂಟಾಗಿದೆ. ಎರಡೂ ಪಕ್ಷಗಳ ಶಾಸಕರು ಕ್ರಾಸ್ ವೋಟಿಂಗ್ ನಡೆಸುವ ಸಾಧ್ಯತೆಯಿಲ್ಲದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆರ್ಜೆಡಿ ಮತ್ತು ಕಾಂಗ್ರೆಸ್ ಶಾಸಕರಿಂದ ಕ್ರಾಸ್ ವೋಟಿಂಗ್ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಶ್ವಾಸಮತ ಯಾಚನೆಯ ವೇಳೆ ಏನು ಬೇಕಾದರೂ ನಡೆಯಬಹುದು

ವಿಶ್ವಾಸಮತ ಯಾಚನೆಯ ವೇಳೆ ಏನು ಬೇಕಾದರೂ ನಡೆಯಬಹುದು

ಮಹಾಮೈತ್ರಿಯಿಂದ ಹೊರಗೆ ಬಂದು ಎನ್ಡಿಎ ಜೊತೆ ಸರಕಾರ ನಡೆಸುವ ನಿರ್ಧಾರವನ್ನು ನಿತೀಶ್ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ. ನಿತೀಶ್ ನಿರ್ಧಾರವನ್ನು ನಾವು ವಿರೋಧಿಸಬೇಕೆಂದು ಪಕ್ಷದ ಎಲ್ಲಾ ಶಾಸಕರಿಗೆ ಖುದ್ದಾಗಿ ನಾನೇ ಕರೆ ಮಾಡಿ ಮಾತನಾಡುತ್ತೇನೆಂದು ಜೆಡಿಯು ರಾಜ್ಯಸಭಾ ಸದಸ್ಯ ವೀರೇಂದ್ರ ಕುಮಾರ್ ಮತ್ತು ಲೋಕಸಭಾ ಸದಸ್ಯ ಆಲಿ ಅನ್ವರ್ ನೀಡಿರುವ ಹೇಳಿಕೆಯಿಂದಾಗಿ ಇಂದು ನಡೆಯಲಿರುವ ವಿಶ್ವಾಸಮತ ಯಾಚನೆಯ ವೇಳೆ ಏನು ಬೇಕಾದರೂ ನಡೆಯಬಹುದು ಎನ್ನುವ ಮುನ್ಸೂಚನೆಯನ್ನು ಈ ವಿದ್ಯಮಾನ ನೀಡಿದೆ.

ಬಹುತೇಕ ಎಂಪಿಗಳು ನಿತೀಶ್ ನಿರ್ಧಾರವನ್ನು ವಿರೋಧಿಸಿದ್ದಾರೆ

ಬಹುತೇಕ ಎಂಪಿಗಳು ನಿತೀಶ್ ನಿರ್ಧಾರವನ್ನು ವಿರೋಧಿಸಿದ್ದಾರೆ

ಜೆಡಿಯು ಮತ್ತು ಎನ್ಡಿಎ ಮೈತ್ರಿ ಸಂಬಂಧ ಶರದ್ ಯಾದವ್ ಕರೆದಿದ್ದ ಸಂಸದರ ಸಭೆಯಲ್ಲಿ ಬಹುತೇಕ ಎಂಪಿಗಳು ನಿತೀಶ್ ನಿರ್ಧಾರವನ್ನು ವಿರೋಧಿಸಿದ್ದು,ಇಂದಿನ ವಿಶ್ವಾಸಮತ ಯಾಚನೆಯ ವೇಳೆ ಅದು ಯಾವ ರೀತಿ ನಿತೀಶ್ ಮತ್ತು ಮೋದಿ ಇಮೇಜಿಗೆ ಧಕ್ಕೆ ತರಲಿದೆ ಎನ್ನುವುದನ್ನು ತಿಳಿಯಲು ಕೆಲವು ಗಂಟೆಗಳಷ್ಟೇ ಬಾಕಿಯಿದೆ.

ಜೆಡಿಯುನಲ್ಲಿ 17ಮುಸ್ಲಿಂ ಮತ್ತು ಯಾದವ ಸಮುದಾಯದ ಶಾಸಕರು

ಜೆಡಿಯುನಲ್ಲಿ 17ಮುಸ್ಲಿಂ ಮತ್ತು ಯಾದವ ಸಮುದಾಯದ ಶಾಸಕರು

ಜೆಡಿಯು, ಎನ್ಡಿಎ ಮೈತ್ರಿಕೂಟಕ್ಕೆ ಬಹುಮತ ಸಾಬೀತು ಪಡಿಸಲು ಬೇಕಾಗಿರುವ ಸಂಖ್ಯೆಗಿಂತ ಏಳು ಸ್ಥಾನಗಳು ಹೆಚ್ಚಿದ್ದರೂ, ಜೆಡಿಯುನಲ್ಲಿ ಹದಿನೇಳು ಮುಸ್ಲಿಂ ಮತ್ತು ಯಾದವ ಸಮುದಾಯದ ಶಾಸಕರಿದ್ದಾರೆ. ಅದೇ ರೀತಿ, ನಿತೀಶ್ ವರ್ಕಿಂಗ್ ಸ್ಟೈಲನ್ನು ಮೆಚ್ಚುವ ಶಾಸಕರೂ ಆರ್ಜೆಡಿ, ಕಾಂಗ್ರೆಸ್ ಮೈತ್ರಿಕೂಟದಲ್ಲಿದ್ದಾರೆ. ಇದು ನಿತೀಶ್ ಕುಮಾರಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಜಾಸ್ತಿ!

ನಿತೀಶ್ ವಿಶ್ವಾಸಮತ ಗೆಲ್ಲುವ ಸಾಧ್ಯತೆ ಫಿಫ್ಟಿ..ಫಿಫ್ಟಿ

ನಿತೀಶ್ ವಿಶ್ವಾಸಮತ ಗೆಲ್ಲುವ ಸಾಧ್ಯತೆ ಫಿಫ್ಟಿ..ಫಿಫ್ಟಿ

ಈ ಎಲ್ಲಾ ಗುಣಾಕಾರ, ಭಾಗಾಕಾರ ನೋಡಿದರೆ ನಿತೀಶ್ ವಿಶ್ವಾಸಮತ ಗೆಲ್ಲುವ ಸಾಧ್ಯತೆ ಫಿಫ್ಟಿ..ಫಿಫ್ಟಿ. ಆದರೆ, ಈ ಎಲ್ಲಾ ಲೆಕ್ಕಾಚಾರವನ್ನು ಮಾಡದೆಯೇ ನಿತೀಶ್, ಬಿಜೆಪಿ ಜೊತೆಗಿನ ಮೈತ್ರಿಗೆ ಮುಂದಾಗುತ್ತಿದ್ದರೇ ಎನ್ನುವುದಕ್ಕೆ ಕೆಲವೇ ಗಂಟೆಯಲ್ಲಿ ಉತ್ತರ ಸಿಗಲಿದೆ.

English summary
Hours after Nitish Kumar took oath as chief minister of Bihar in alliance with the NDA and said he will prove majority on the floor of the Assembly on Friday (Jul 28), signs of cracks in both JDU and RJD could be seen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X